Vinay Rajkumar Birthday: ಇಂದು ದೊಡ್ಮನೆ ಮೊಮ್ಮಗ ವಿನಯ್ ರಾಜ್ಕುಮಾರ್ ಹುಟ್ಟುಹಬ್ಬ, ಸಂಜೆ 'ಪೆಪೆ' ಟೀಂನಿಂದ ಬಿಗ್ ಗಿಫ್ಟ್!
ಕನ್ನಡ ಚಿತ್ರರಂಗದ ದೊಡ್ಮನೆ ಮೊಮ್ಮಗ ವಿನಯ್ ರಾಜ್ಕುಮಾರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 'ಸಿದ್ದಾರ್ಥ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಟೆಂಟಿ ಹೊಂದಿರುವ ವಿನಯ್ ರಾಜ್ ಕುಮಾರ್ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ರಾಜ್ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ಕುಮಾರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿನಯ್ ಹುಟ್ಟುಹಬ್ಬಕ್ಕೆ ಕುಟುಂಬದವರು, ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ.
2/ 7
ವಿನಯ್ ರಾಜ್ಕುಮಾರ್ ಹುಟ್ಟುಹಬ್ಬಕ್ಕೆ ಅಪ್ಪ ರಾಘವೇಂದ್ರ ರಾಜ್ಕುಮಾರ್ ಸಖತ್ ಕ್ಯೂಟ್ ಆಗಿ ವಿಶ್ ಮಾಡಿದ್ದಾರೆ. ಮಗ ವಿನಯ್ ರಾಜ್ಕುಮಾರ್ ಅವರ ವಿಡಿಯೋವೊಂದನ್ನು ಪೋಸ್ಟ್ ಮಾಡಿ ವಿಶ್ ಮಾಡಿದ್ದಾರೆ.
3/ 7
ಮಗನ ಬಾಲ್ಯದ ಫೋಟೋಗಳನ್ನುಸೇರಿಸಿ ಒಂದು ಪುಟ್ಟ ವಿಡಿಯೋ ಮಾಡಿ ಅದನ್ನು ಮಗನಿಗೆ ವಿಶಢಷವಾಗಿ ಉಡುಗೊರೆಯಾಗಿ ನೀಡಿದ್ದಾರೆ ರಾಘಣ್ಣ.
4/ 7
ಕನ್ನಡ ಚಿತ್ರರಂಗದ ದೊಡ್ಮನೆ ಮೊಮ್ಮಗ ವಿನಯ್ ರಾಜ್ಕುಮಾರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 'ಸಿದ್ದಾರ್ಥ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಟೆಂಟಿ ಹೊಂದಿರುವ ವಿನಯ್ ರಾಜ್ ಕುಮಾರ್ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
5/ 7
ಇನ್ನು ಪ್ರತಿವರ್ಷ ಅಭಿಮಾನಿಗಳೊಂದಿಗೆ ಬರ್ತ್ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದ ವಿನಯ್ ರಾಜ್ ಕುಮಾರ್ ಈ ವರ್ಷದ ಹುಟ್ಟುಹಬ್ಬದ ಆಚರಣೆಯನ್ನು ಮಾಡಿಕೊಳ್ಳುತ್ತಿಲ್ಲ. ಚಿಕ್ಕಪ್ಪ ಪುನೀತ್ ರಾಜ್ಕುಮಾರ್ ಅಗಲಿಕೆಯ ನೋವಿನಲ್ಲಿ ಇಡೀ ಡಾ.ರಾಜ್ ಕುಟುಂಬ ಇದೆ.
6/ 7
ಗ್ರಾಮಾಯಾಣ, ಪೆಪೆ , ಅಂದೊಂದಿತ್ತು ಕಾಲದಲ್ಲಿ, ಟೈಟಲ್ 10 ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಇದ್ದಾರೆ. ಆದರೆ, ಅನಂತ್ ವರ್ಸಸ್ ನುಸ್ರತ್ ಆದ್ಮಲೇ ವಿನಯ್ ರಾಜ್ ಕುಮಾರ್ ಅಭಿನಯದ ಯಾವ ಸಿನಿಮಾಗಳು ರಿಲೀಸ್ ಆಗಿಲ್ಲ.
7/ 7
ಇಂದು ಸಂಜೆ ಪೆಪೆ ಸಿನಿಮಾದ ಸೋಲ್ ಸಾಂಗ್ ರಿಲೀಸ್ ಆಗಲಿದೆ. ವಿನಯ್ ರಾಜ್ಕುಮಾರ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಗಿಫ್ಟ್ ನೀಡಲಿದೆ. ವಿನಯ್ ರಾಜ್ ಕುಮಾರ್ ಸಿನಿಮಾಗಳ ಮೇಲೆ ಸ್ಯಾಂಡಲ್ವುಡ್ ಅಲ್ಲದೇ ಅಭಿಮಾನಿಗಳಲ್ಲಿ ಕುತೂಹಲ ಇದೆ.(ಕೃಪೆ-ವಿನಯ್ರಾಜ್ಕುಮಾರ್ ಇನ್ಸ್ಟಾಗ್ರಾಂ)