ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಎರಡು ಮಾತೇ ಇಲ್ಲ. ಇದು ಸಿನಿಮಾ ನೋಡಿದ ಪ್ರತಿಯೊಬ್ಬರ ಬಾಯಲ್ಲೂ ಚರ್ಚೆಯಾದ ವಿಚಾರ. ಈ ಕ್ಲೈಮ್ಯಾಕ್ಸ್ನಲ್ಲಿ ಪುನೀತ್ ಅವರು ಇರುತ್ತಿದ್ದರೆ ಹೇಗಿರುತ್ತಿತ್ತು ಎನ್ನುವುದನ್ನು ತೋರಿಸೋ ಫೋಟೋ ವೈರಲ್ ಆಗಿದೆ.
ಈಗ ದೇಶ ವಿದೇಶದಲ್ಲಿ ಸುದ್ದಿ ಮಾಡುತ್ತಿರುವ ಕನ್ನಡದ ಕಾಂತಾರ ಸಿನಿಮಾ ಪುನೀತ್ ರಾಜ್ಕುಮಾರ್ ಮಾಡಬೇಕಿತ್ತಂತೆ. ಕಥೆ ಬರೆದು ರಿಷಬ್ ಶೆಟ್ಟಿ ಸಿನಿಮಾಗಾಗಿ ಪುನೀತ್ ಅವರನ್ನು ಭೇಟಿಯಾಗಿ ಶಿವನ ಪಾತ್ರ ಮಾಡುವಂತೆ ಕೇಳಿದ್ದರು ಎನ್ನಲಾಗಿದೆ.
2/ 8
ಆದರೆ ಆ ಸಂದರ್ಭದಲ್ಲಿ ಅಪ್ಪು ಬ್ಯುಸಿಯಾಗಿದ್ದ ಕಾರಣ ಈ ಸಿನಿಮಾವನ್ನು ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದೇ ರೀತಿ ಈ ಸಿನಿಮಾ ನೀವೇ ಮಾಡಿದರೆ ಚೆನ್ನಾಗಿರುತ್ತೆ ಎಂದು ರಿಷಬ್ ಶೆಟ್ಟಿ ಅವರಿಗೆ ಪ್ರೋತ್ಸಾಹಿಸಿದ್ದರು ನಟ.
3/ 8
ಸಿನಿಮಾ ಬಿಡುಗಡೆಯಾದ ನಂತರ ಪುನೀತ್ ಅವರು ಸಪ್ತಮಿ ಗೌಡ ಹಾಗೂ ರಿಷಬ್ ಶೆಟ್ಟಿ ಜೊತೆಗೆ ಇದ್ದಂತಹ ಎಡಿಟೆಡ್ ಫೋಟೋ ಮಾಡಿ ವೈರಲ್ ಮಾಡಿದ್ದರು ಅಭಿಮಾನಿಗಳು.
4/ 8
ಅಭಿಮಾನಿ ಕಲ್ಪನೆಯಲ್ಲಿ ಮೂಡಿದ ಚಿತ್ರವೊಂದು ಈ ಹಿಂದೆ ವೈರಲ್ ಆಗಿತ್ತು. ಪುನೀತ್ ರಾಜ್ಕುಮಾರ್ ಅವರು ಕಾಂತಾರದ ಶಿವನಂತೆ ಕಾಣಿಸಿದ ಡಿಜಿಟಲ್ ಆರ್ಟ್ ಎಲ್ಲರ ಗಮನ ಸೆಳೆದಿತ್ತು.
5/ 8
ಈ ಫೋಟೊವನ್ನು ಪುನೀತ್ ರಾಜ್ಕುಮಾರ್ ಅಭಿಮಾನಿಯೊಬ್ಬರು ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ಪುನೀತ್ ಅವರನ್ನು ಕಾಂತಾರದ ಶಿವನಾಗಿ ನೋಡಿ ಲೈಕ್ಸ್ ಕೊಟ್ಟಿದ್ದರು ನೆಟ್ಟಿಗರು.
6/ 8
ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ ದೃಶ್ಯದಲ್ಲಿ ಶಿವನ ಸೀನ್ ಎಲ್ಲರ ಮೆಚ್ಚುಗೆ ಗಳಿಸಿತ್ತು. ಈಗ ಅದೇ ರೀತಿಯ ದೃಶ್ಯದಲ್ಲಿ ಪುನೀತ್ ಅವರ ಫೇಸ್ ಎಡಿಟ್ ಮಾಡಿ ಸೇರಿಸಲಾಗಿದೆ.
7/ 8
ಎಡಿಟೆಡ್ ಫೋಟೋದಲ್ಲಿ ಪುನೀತ್ ರಾಜ್ಕುಮಾರ್ ಅವರ ಲುಕ್ ಡಿಫರೆಂಟ್ ಅಗಿ ಮೂಡಿ ಬಂದಿದ್ದು ಅಭಿಮಾನಿಗಳು ಇದನ್ನು ಶೇರ್ ಮಾಡುತ್ತಿದ್ದಾರೆ.
8/ 8
ಕಾಂತಾರ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಿಷಬ್ ಶೆಟ್ಟಿ ಹಾಗೂ ಪುನೀತ್ ಅವರ ಕಾಲ್ಪನಿಕ ಚಿತ್ರ ಹೀಗೆ ಕಂಡು ಬಂದಿದೆ.