Power Star: ರಾಜ್ಯದ ರಾಜಕುಮಾರ, ಎಲ್ಲರ ನೆಚ್ಚಿನ ಅಪ್ಪು ನಮ್ಮನ್ನ ಅಗಲಿ ಇಂದಿಗೆ 7 ತಿಂಗಳು. ಅವರಿಲ್ಲದೇ ನಾಡು ಅನಾಥವಾದ ಭಾವ ನಿಜಕ್ಕೂ ಇದೆ. ಇನ್ನು ಏಳು ತಿಂಗಳಾದರೂ ಸಹ ಅಭಿಮಾನಿಗಳು ಅಪ್ಪು ಸಮಾಧಿಗೆ ಬರುವುದನ್ನ ಮಾತ್ರ ನಿಲ್ಲಿಸಿಲ್ಲ.
ಸರಳತೆಯ ಸಾಮ್ರಾಟ್, ಅಭಿಮಾನಿಗಳ ಆರಾಧ್ಯದೈವ, ಕನ್ನಡ ಚಿತ್ರರಂಗದ ಬೆಟ್ಟದ ಹೂ, ಯುವಕರ ಪಾಲಿನ ಯುವರತ್ನ, ಅಪ್ಪು ಅಗಲಿಕೆಯ ನೋವನ್ನು ಇಂದಿಗೂ ಯಾರೂ ಮರೆತಿಲ್ಲ ಎಂಬುದು ನಿಜಕ್ಕೂ ಸತ್ಯ.
2/ 8
ಅವರ ನೆನಪು, ಅವರ ನಗು ನಮ್ಮನ್ನು ಕಾಡಿ ಕೊಲ್ಲುತ್ತಿದೆ. ಕರುನಾಡಿನ ಪ್ರತಿ ಮನೆಯಲ್ಲೂ ಇನ್ನೂ ಮೌನ ಆವರಿಸಿದೆ. ಅವರ ಮೇಲಿನ ಪ್ರೀತಿ ಒಂದಿಂಚು ಕಡಿಮೆಯಾಗಿಲ್ಲ.
3/ 8
ಅವರಿಲ್ಲದೇ ಏಳು ತಿಂಗಳು ಕಳೆದಿದೆ. ಅಭಿಮಾನಿಗಳು ಅವರನ್ನ ನೆನೆಯದ ದಿನವಿಲ್ಲ. ಸಪ್ಪು ಸಮಾಧಿಗೆ ಜನ ಬರದ ದಿನವೂ ಇಲ್ಲ. ದಿನಕ್ಕೆ ನೂರಾರು ಜನರು ಬಂದು ಹೋಗುತ್ತಾರೆ.
4/ 8
ಇಂದು ಸಹ ಸಮಾಧಿ ಬಳಿ ಅಭಿಮಾನಿಗಳ ದಂಡೆ ಸೇರಿದ್ದು, ವೀಕೆಂಡ್ ನಲ್ಲಿ ಸಾವಿರಾರು ಜನರು ಅಪ್ಪು ಸಮಾಧಿಗೆ ಬಂದು ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ.
5/ 8
ಕಂಠೀರವ ಸ್ಟುಡಿಯೋಗೆ ಆಗಮಿಸಿದ ಅಪ್ಪು ಪತ್ಮಿ ಅಶ್ವಿನಿ ಹಾಗೂ ಮಗಳು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದು, ಅಭಿಮಾನಿಗಳು ಸಹ ಈ ಸಮಯದಲ್ಲಿ ಬಂದಿದ್ದರು.
6/ 8
ಅಪ್ಪು ಕೇವಲ ನಟ ಮಾತ್ರ ಅಲ್ಲ ಎಂಬುದಕ್ಕೆ ಹಲವಾರು ನಿದರ್ಶನಗಳಿದೆ. ಮನೆ, ಮನಗಳಲ್ಲಿ ಅಪ್ಪು ಅವರನ್ನು ಪ್ರತಿನಿತ್ಯ ಆರಾಧಿಸುತ್ತಿದ್ದಾರೆ. ರಾಜ್ಯದ ಯಾವ ಮೂಲೆಗೆ ಹೋದರು ಅಪ್ಪು ಅವರ ಬ್ಯಾನರ್ ಕಣ್ಣಿಗೆ ಕಾಣಿಸುತ್ತದೆ. ಇನ್ನೂ ಜನ ಅವರನ್ನು ಮರೆತಿಲ್ಲ, ಮರೆಯಲ್ಲ ಎಂಬುದಕ್ಕೆ ಇದು ಸಾಕ್ಷಿ.
7/ 8
ಅವರನ್ನು ಕಳೆದುಕೊಂಡು ಕರುನಾಡು ಬಡವಾಗಿದೆ. ಅಪ್ಪು ಇಲ್ಲದ ಸಿನಿಮಾ, ಅಪ್ಪು ಇಲ್ಲದ ದಿನ ಸಾಗುವುದೇ ಕಷ್ಟವಾಗಿದೆ ಎನ್ನುತ್ತಾರೆ ಅಭಿಮಾನಿಗಳು.
8/ 8
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಳೆದ ವರ್ಷ ಅಕ್ಟೋಬರ್ 29ರಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು ಅವರ ಕುಟುಂಬ ವರ್ಗಕ್ಕೆ ರಾಜ್ಯ-ಪರರಾಜ್ಯಗಳು, ಪರ ದೇಶಗಳ ಅಭಿಮಾನಿಗಳು, ಕುಟುಂಬವರ್ಗ, ಬಂಧು-ಮಿತ್ರರಿಗೆ ತೀವ್ರ ದುಃಖವನ್ನುಂಟುಮಾಡಿತ್ತು