ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅಗಲಿ ತಿಂಗಳುಗಳು ಕಳೆದರೂ ನೆನಪಿನಲ್ಲಿ ದಿನದಿಂದ ದಿನಕ್ಕೇ ಹೆಚ್ಚು ಜೀವಂತ ಆಗುತ್ತಿದ್ದಾರೆ. ನಗುಮುಖದ ಸಾಹುಕಾರನ ನೋಡಲು ಇನ್ನೂ ಸಮಾಧಿಯತ್ತ ಜನರ ಸಾಲು ಕರಗುತ್ತಿಲ್ಲ. ಪುನೀತ್ ರಾಜ್ಕುಮಾರ್ ಕನಸನ್ನು ನನಸು ಮಾಡಲು ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಮುಂದಾಗಿದ್ದಾರೆ. ಪುನೀತ್ ಅವರ ಕನಸಿನ ಡಾಕ್ಯುಮೆಂಟರಿ ಗಂಧದ ಗುಡಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. (Photos: Puneeth Rajkumar Fan Pages)
ನಟ ಪುನೀತ್ ರಾಜ್ಕುಮಾರ್- ಅಶ್ವಿನಿ ಅವರ ವಿವಾಹ ವಾರ್ಷಿಕೋತ್ಸವದ ದಿನ ಇಂದು, ಸರಿಯಾಗಿ 22 ವರ್ಷಗಳ ಹಿಂದೆ 1999 ಡಿಸೆಂಬರ್ 1ರಂದು ಪುನೀತ್ ತಾವು ಪ್ರೀತಿಸಿದ ಹುಡುಗಿಯನ್ನು ವರಿಸಿದ್ದರು
2/ 7
ತಮ್ಮ ಸ್ನೇಹಿತರ ಮೂಲಕ ಪರಿಚಯವಾದ ಅಶ್ವಿನಿ ಅವರ ಜೊತೆಗಿನ ಸ್ನೇಹ ಪ್ರೀತಿಗೆ ತಿರುಗಿ ಪುನೀತ್ ಮದುವೆಯಾಗಲು ನಿರ್ಧರಿಸಿದ್ದರು. ಇದಕ್ಕೆ ಅಶ್ವಿನಿ ಒಪ್ಪಿಗೆ ಕೇಳಿದಾಗ ಅವರು ಕೂಡ ಸಮ್ಮತಿ ಸೂಚಿಸಿದ್ದರಂತೆ. ಆದರೆ, ಪುನೀತ್ಗೆ ಈ ವಿಷಯ ಮನೆಯಲ್ಲಿ ಹೇಳುವುದೇ ದೊಡ್ಡ ಸವಾಲ್ ಆಗಿದ್ದಂತೆ
3/ 7
ಅಪ್ಪ-ಅಮ್ಮನ ಜೊತೆ ಎಷ್ಟೇ ಮುಕ್ತವಾಗಿದ್ದರೂ ಈ ವಿಷಯ ಹೇಳಲಯ ಹಿಂಜರಿದಿದ್ದ ಪುನೀತ್ ತಮ್ಮ ಮದುವೆ ಪ್ರಸ್ತಾಪವನ್ನು ಶಿವಣ್ಣನ ಹೆಗಲಿಗೆ ವಹಿಸಿದ್ದರಂತೆ. ಶಿವಣ್ಣ ರಾಜ್ ಕುಮಾರ್ ಅವರ ಬಳಿ ಮಾತನಾಡಿದಾಗ ಅಣ್ಣಾವ್ರು ಒಂದೇ ಉತ್ತರದಲ್ಲಿ ಆಯಿತು ಎಂದಿದ್ದರಂತೆ
4/ 7
ಅಶ್ವಿನಿ ಮದುವೆಯಾಗಿ ಮನೆಗೆ ಬಂದಾಗ ಅದು 30 ಜನರ ತುಂಬು ಕುಟುಂಬ. ರಾಜ್ಕುಮಾರ್ಗೆ ಸಿಹಿ ಇಷ್ಟ ಎಂದು ಅರಿತ ಅಶ್ವಿನಿ ಅವರು, ಪ್ರತಿ ವಾರಾಂತ್ಯ ಹೊಸ ಹೊಸ ಸಿಹಿ ಅಡುಗೆ ಪ್ರಯೋಗ ಮಾಡುತ್ತಿದ್ದರಂತೆ
5/ 7
ಪುನೀತ್ ಸಿನಿಮಾಗಳನ್ನು ಹೆಚ್ಚು ಸೂಕ್ಷ್ಮವಾಗಿ ಗಮನಿಸುತ್ತಿದ್ದರಂತೆ ಅಶ್ವಿನಿ. ಫೈಟ್, ಡ್ಯಾನ್ಸ್ ಯಾವುದೇ ಸೀನ್ ಇರಲಿ ಅದನ್ನು ವಿಮರ್ಶಿಸಿ ಹೇಳುತ್ತಿದ್ದರಂತೆ. ಪುನೀತ್ ತಮ್ಮ ಸಿನಿಮಾಗಳ ಬೆಸ್ಟ್ ಕ್ರಿಟಿಕ್ ಅಶ್ವಿನಿ ಎಂದು ಈ ಮೊದಲು ಸಾಕಷ್ಟು ಬಾರಿ ತಿಳಿಸಿದ್ದರು ಅಪ್ಪು.
6/ 7
ಪುನೀತ್ ಅವರ ಸಹಾಯ ಮತ್ತು ಸರಳತೆ ಅಶ್ವಿನಿಗೆ ಬಲು ಮೆಚ್ಚುಗೆಯ ಗುಣವಂತೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಸ್ನೇಹಿತರೊಟ್ಟಿಗಿ ಪ್ರವಾಸ ಎಂದರೆ ಅಪ್ಪುಗೆ ತುಂಬಾ ಇಷ್ಟ ಎಂದಿದ್ದರು
7/ 7
ಎಲ್ಲರಿಗೂ ಆದರ್ಶದಂತೆ ಇದ್ದ ಈ ಜೋಡಿ ಇಂದು 22ನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಬೇಕಿತು. ಆದರೆ, ವಿಧಿಯ ಕ್ರೂರ ಆಟಕ್ಕೆ ಪುನೀತ್ ಅಗಲಿದ್ದು, ಈ ನೋವಿನಿಂದ ಅಭಿಮಾನಿಗಳು ಇನ್ನು ಹೊರ ಬಂದಿಲ್ಲ