Pathaan Row: ಪಠಾಣ್ ಸಿನಿಮಾ ವಿರೋಧಿಸಿ ಪ್ರತಿಭಟನೆ, ಥಿಯೇಟರ್ ಮೇಲೆ ಕಲ್ಲು ತೂರಾಟ
ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪಠಾಣ್ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಕರ್ನಾಟಕದ ಕಲಬುರಗಿ, ಬೆಂಗಳೂರು, ಬಿಹಾರದ ಪಾಟ್ನಾದಲ್ಲಿಯೂ ಸಿನಿಮಾಗೆ ಪ್ರತಿಭಟನೆ ಬಿಸಿ ತಟ್ಟಿದೆ.
ಪಠಾಣ್ ಸಿನಿಮಾ ಪ್ರದರ್ಶನವನ್ನು ವಿರೋಧಿಸಿ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ನಗರದ ಶೆಟ್ಟಿ ಮಲ್ಟಿಪ್ಲೆಕ್ಸ್ ಥಿಯೇಟರ್ ಮುಂಭಾಗ ಹಿಂದೂ ಜಾಗೃತಿ ಸೇನೆ ಪ್ರತಿಭಟನೆ ನಡೆಸಿದೆ.
2/ 6
ದೇಶ ವಿರೋಧಿ/ಹಿಂದೂ ವಿರೋಧಿ ಪಠಾಣ್ ಸಿನಿಮಾವನ್ನು ಪ್ರದರ್ಶನ ಮಾಡದಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಚಿತ್ರಮಂದಿರ ಗೇಟ್ ಬಳಿ ಕುಳಿತು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
3/ 6
ಕೇಸರಿ ಬಣ್ಣವನ್ನು ಪಠಾಣ್ ಸಿನಿಮಾದಲ್ಲಿ ಅಶ್ಲೀಲವಾಗಿ ತೋರಿಸಿದ್ದಕ್ಕೆ ಕೋಪ ವ್ಯಕ್ತಪಡಿಸಿದ ಕಾರ್ಯಕರ್ತರು ಕೂಡಲೇ ಚಿತ್ರ ಪ್ರದರ್ಶನ ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.
4/ 6
ದೇಶದ ಪ್ರತಿಯೊಬ್ಬ ಹಿಂದೂಗಳು ಪಠಾಣ್ ಚಿತ್ರ ವಿರೋಧಿಸಿ ಎಂದು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಆರ್ಜೆ ನಗರ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
5/ 6
ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ ಹೋರಾಟಗಾರರು ಸಿನಿಮಾ ಪ್ರದರ್ಶನ ತಡೆಯಲು ಗೇಟ್ ಜಂಪ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಹಿಂದು ಜಾಗೃತಿ ಸೇನೆ ಕಲಬುರಗಿ ಜಿಲ್ಲಾಧ್ಯಕ್ಷ ಲಕ್ಮಿಕಾಂತ್ ಸಾಧ್ವಿ ಎಡಗೈಗೆ ಗಾಯವಾಗಿದೆ.
6/ 6
ಬಿಹಾರದ ಪಾಟ್ನಾದಲ್ಲಿಯೂ ಪಠಾಣ್ ಪ್ರದರ್ಶನ ನಿಲ್ಲಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.