PHOTOS: ಪ್ರಿಯಾಂಕಾ ಚೋಪ್ರಾ- ನಿಕ್​ ಮದುವೆಯಾಗಲಿರುವ ಅರಮನೆ ಹೇಗಿದೆ ಗೊತ್ತಾ?

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಗೆಳೆಯ ನಿಕ್​ ಜೋನಸ್​ ಜೊತೆಗೆ ಡಿ. 1ರಂದು ವಿವಾಹವಾಗಲಿದ್ದಾರೆ. ರಾಜಸ್ಥಾನದ ಜೋಧ್​ಪುರದಲ್ಲಿರುವ ತಾಜ್​ ಉಮೈದ್​ ಭವನ್ ಪ್ಯಾಲೇಸ್​ನಲ್ಲಿ ಮದುವೆ ನಡೆಯಲಿದ್ದು, ಪ್ರಾಚೀನ ಮತ್ತು ಅದ್ಭುತವಾದ ವಿನ್ಯಾಸದ ಈ ಅರಮನೆಯ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ...

  • News18
  • |
First published:

  • 19

    PHOTOS: ಪ್ರಿಯಾಂಕಾ ಚೋಪ್ರಾ- ನಿಕ್​ ಮದುವೆಯಾಗಲಿರುವ ಅರಮನೆ ಹೇಗಿದೆ ಗೊತ್ತಾ?

    ಡಿಸೆಂಬರ್​ 1ರಂದು ನಡೆಯಲಿರುವ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ಮದುವೆಗೆ ಎಲ್ಲ ರೀತಿಯ ಸಿದ್ಧತೆಗಳು ಆರಂಭವಾಗಿವೆ. ನವೆಂಬರ್​ 30ರಂದು ಸಂಗೀತ್​ ಕಾರ್ಯಕ್ರಮ ಇರಲಿದ್ದು, ಮೂರು ದಿನಗಳ ಕಾಲ ವೈಭವದ ಮದುವೆಗೆ ಜೋಧ್​ಪುರ ಸಾಕ್ಷಿಯಾಗಲಿದೆ.

    MORE
    GALLERIES

  • 29

    PHOTOS: ಪ್ರಿಯಾಂಕಾ ಚೋಪ್ರಾ- ನಿಕ್​ ಮದುವೆಯಾಗಲಿರುವ ಅರಮನೆ ಹೇಗಿದೆ ಗೊತ್ತಾ?

    ಕ್ರಿಶ್ಚಿಯನ್​ ಮತ್ತು ಹಿಂದು ಪದ್ಧತಿ ಪ್ರಕಾರ ಮದುವೆ ನಡೆಯಲಿದ್ದು, ಎರಡೂ ಕುಟುಂಬದ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆರತಕ್ಷತೆಯಲ್ಲಿ ಬಾಲಿವುಡ್​ನ ತಾರೆಯರೆಲ್ಲ ಭಾಗವಹಿಸಲಿದ್ದಾರೆ.

    MORE
    GALLERIES

  • 39

    PHOTOS: ಪ್ರಿಯಾಂಕಾ ಚೋಪ್ರಾ- ನಿಕ್​ ಮದುವೆಯಾಗಲಿರುವ ಅರಮನೆ ಹೇಗಿದೆ ಗೊತ್ತಾ?

    ಉಮೈದ್​ ಭವನ್​ ಪ್ಯಾಲೇಸ್​ ಮೈಸೂರು ಅರಮನೆಯಂತೆಯೇ ಸಾಕಷ್ಟು ವರ್ಷದ ಇತಿಹಾಸ ಹೊಂದಿದೆ. ಇಲ್ಲಿ ಈಗ ಜೋಧ್​ಪುರದ ರಾಜವಂಶಸ್ಥರು ವಾಸವಾಗಿದ್ದಾರೆ. ಈ ಅರಮನೆ ಈಗ ತಾಜ್​ ಗ್ರೂಪ್​ ಆಫ್​ ಹೋಟೆಲ್​ನ ಭಾಗವಾಗಿದೆ.

    MORE
    GALLERIES

  • 49

    PHOTOS: ಪ್ರಿಯಾಂಕಾ ಚೋಪ್ರಾ- ನಿಕ್​ ಮದುವೆಯಾಗಲಿರುವ ಅರಮನೆ ಹೇಗಿದೆ ಗೊತ್ತಾ?

    ರಾಜ ಉಮೈದ್​ ಸಿಂಗ್​ ಅವರಿಂದ1928ರಿಂದ 1943ರ ಅವಧಿಯಲ್ಲಿ ನಿರ್ಮಿಸಲಾದ ಈ ಅರಮನೆಯಲ್ಲಿ ಮದುವೆಗೆ ಆ್ಯಂಟಿಕ್​ ಸ್ಪರ್ಶವಿರುವ ಸೆಟ್​ ಹಾಕಿಸಲಿದ್ದಾರಂತೆ ಪ್ರಿಯಾಂಕಾ. ಈ ಮೂಲಕ ರಾಜವೈಭೋಗದಲ್ಲೇ ಮದುವೆಯಾಗಲು ಎಲ್ಲ ತಯಾರಿ ನಡೆಸಿದ್ದಾರೆ.

    MORE
    GALLERIES

  • 59

    PHOTOS: ಪ್ರಿಯಾಂಕಾ ಚೋಪ್ರಾ- ನಿಕ್​ ಮದುವೆಯಾಗಲಿರುವ ಅರಮನೆ ಹೇಗಿದೆ ಗೊತ್ತಾ?

    ಈ ಅರಮನೆಯಲ್ಲಿ ಒಟ್ಟು 347 ಕೊಠಡಿಗಳಿವೆ. ರಾಜರ ಕುಟುಂಬದ ಕ್ಲಾಸಿಕ್​ ಕಾರುಗಳ ಸಂಗ್ರಹವಿರುವ ಮ್ಯೂಸಿಯಂ ಕೂಡ ಇದೆ.

    MORE
    GALLERIES

  • 69

    PHOTOS: ಪ್ರಿಯಾಂಕಾ ಚೋಪ್ರಾ- ನಿಕ್​ ಮದುವೆಯಾಗಲಿರುವ ಅರಮನೆ ಹೇಗಿದೆ ಗೊತ್ತಾ?

    . 26 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಅರಮನೆ ಜಗತ್ತಿನ 6ನೇ ಅತಿದೊಡ್ಡ ಖಾಸಗಿ ಕಟ್ಟಡ ಎಂಬ ಹೆಗ್ಗಳಿಕೆ ಪಡೆದಿದೆ.

    MORE
    GALLERIES

  • 79

    PHOTOS: ಪ್ರಿಯಾಂಕಾ ಚೋಪ್ರಾ- ನಿಕ್​ ಮದುವೆಯಾಗಲಿರುವ ಅರಮನೆ ಹೇಗಿದೆ ಗೊತ್ತಾ?

    ಭಾರತದ ಐಷಾರಾಮಿ ಮದುವೆಗಳಿಗೆಲ್ಲ ವಿದೇಶವೇ ಬೇಕಾಗಿತ್ತು. ಆದರೀಗ, ಪ್ರಿಯಾಂಕಾ ಆ ಪದ್ಧತಿಗೆ ಬ್ರೇಕ್​ ಹಾಕಿ ನಮ್ಮ ದೇಶದ ಐತಿಹಾಸಿಕ ಅರಮನೆಯಲ್ಲಿ ವಿವಾಹವಾಗುವ ಮೂಲಕ ಎಲ್ಲರೂ ಜೋಧ್​ಪುರದತ್ತ ನೋಡುವಂತೆ ಮಾಡಿದ್ದಾರೆ.

    MORE
    GALLERIES

  • 89

    PHOTOS: ಪ್ರಿಯಾಂಕಾ ಚೋಪ್ರಾ- ನಿಕ್​ ಮದುವೆಯಾಗಲಿರುವ ಅರಮನೆ ಹೇಗಿದೆ ಗೊತ್ತಾ?

    ಮದುವೆಗಾಗಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ಇಲ್ಲಿ 42 ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ. ಇಲ್ಲಿ ಒಂದು ರೂಮಿಗೆ ಒಂದು ದಿನಕ್ಕೆ 5 ಲಕ್ಷದವರೆಗೆ ಚಾರ್ಜ್​ ಮಾಡಲಾಗುತ್ತದೆ.

    MORE
    GALLERIES

  • 99

    PHOTOS: ಪ್ರಿಯಾಂಕಾ ಚೋಪ್ರಾ- ನಿಕ್​ ಮದುವೆಯಾಗಲಿರುವ ಅರಮನೆ ಹೇಗಿದೆ ಗೊತ್ತಾ?

    ಈ ಹಿಂದೆ ಮುಖೇಶ್​ ಅಂಬಾನಿ ಅವರ ಹೆಂಡತಿ ನೀತಾ ಅಂಬಾನಿ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಇದೇ ಜಾಗದಲ್ಲಿ ಆಚರಿಸಿಕೊಂಡಿದ್ದರು. ಹೀಗಾಗಿ, ಇತ್ತೀಚೆಗೆ ಸೆಲೆಬ್ರಿಟಿಗಳ ಆಕರ್ಷಣೆಯ ಸ್ಥಳವಾಗಿ ಗುರುತಿಸಿಕೊಳ್ಳುತ್ತಿರುವ ಉಮೈದ್​ ಭವನ್​ ಪ್ಯಾಲೇಸ್​​ ಖ್ಯಾತಿ ಪಡೆಯುತ್ತಿದೆ.

    MORE
    GALLERIES