ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ದುಬೈನಲ್ಲಿ ತಮ್ಮ ವೀಕೆಂಡ್ ಕಳೆದಿದ್ದಾರೆ. ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವೀಕೆಂಡ್ ಎಂಜಾಯ್ ಮಾಡಿದ ಫೋಟೋಗಳನ್ನು ನಟಿ ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
2/ 8
ಹಳದಿ ಸ್ವಿಮ್ಸೂಟ್ನಲ್ಲಿ ನೀರಿನಲ್ಲಿರುವ ಫೋಟೋವನ್ನು ಪ್ರಿಯಾಂಕಾ ಹಂಚಿಕೊಂಡಿದ್ದಾರೆ. ರಿಲ್ಯಾಕ್ಸ್ ಮೂಡ್ನಲ್ಲಿರುವ ನಟಿ, ಪಾರ್ಟಿಯಲ್ಲಿ ಎಂಜಾಯ್ ಮಾಡಿದ್ದಾರೆ.
3/ 8
ಜೊತೆಗೆ ನಟಿ ಜೆಟ್ ಸ್ಕೀಯಿಂಗ್ ಕೂಡ ಮಾಡಿದ್ದಾರೆ. ಸೋಶಿಯಲ್ ಮೀಡಿಯದಲ್ಲಿ ವಿಡಿಯೋವನ್ನು ಸಹ ಶೇರ್ ಮಾಡಿದ್ದಾರೆ.
4/ 8
ಫೋಟೋಗಳ ಜೊತೆಗೆ ಪ್ರಿಯಾಂಕಾ 2 ಹಾರ್ಟ್ ಹಾಗೂ ಕಣ್ಣಿನ ಎಮೋಜಿ ಬಳಸಿ “ವೀಕೆಂಡ್ ವೈಬ್ಸ್ ಎಂದು ಬರೆದುಕೊಂಡಿದ್ದಾರೆ. ಅವಳು ದುಬೈ, ಯುಎಇ ಜಿಯೋ-ಟ್ಯಾಗ್ ಕೂಡ ಸೇರಿಸಿದ್ದಾರೆ.
5/ 8
ಬಾಲ್ಯದಿಂದಲೂ ನಟನೆ ಕಡೆ ಒಲವಿದ್ದ ಪ್ರಿಯಾಂಕಾ ಅವರು 2000ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು. ನಂತರ ಬಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಅದರ ಜೊತೆಗೆ ಹಾಡುಗಾರ್ತಿಯಾಗಿ, ನಿರ್ಮಾಪಕರಾಗಿ ಮಿಂಚಿದ್ದಾರೆ.
6/ 8
ಚೋಪ್ರಾ ಮೇ 2018 ರಲ್ಲಿ ಅಮೇರಿಕನ್ ಗಾಯಕ ಮತ್ತು ನಟ ನಿಕ್ ಜೋನಾಸ್ ಅವರೊಂದಿಗೆ ಡೇಟಿಂಗ್ ಪ್ರಾರಂಭಿಸಿದರು. ನಂತರ ಪಂಜಾಬಿ ರೋಕಾ ಸಮಾರಂಭದಲ್ಲಿ ಚೋಪ್ರಾ ಮತ್ತು ಜೋನಾಸ್ ಆಗಸ್ಟ್ 2018 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು .
7/ 8
ಡಿಸೆಂಬರ್ 2018 ರಲ್ಲಿ, ಜೋಡಿಯು ಜೋಧ್ಪುರದ ಉಮೈದ್ ಭವನ್ ಅರಮನೆಯಲ್ಲಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರಿಶ್ಚಿಯನ್ ಮಾದರಿಯಲ್ಲಿ ವಿವಾಹವಾದರು.
8/ 8
ಜನವರಿ 2022 ರಲ್ಲಿ ಈ ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ತಮ್ಮ ಮೊದಲ ಹೆಣ್ಣು ಮಗುವನ್ನು ಹೊಂದಿದ್ದಾರೆ.