ಬಾಲಿವುಡ್ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಗ್ಲೋಬಲ್ ಐಕಾನ್ ಆಗಿದ್ದಾರೆ. ಪ್ರಿಯಾಂಕಾ ಚೋಪ್ರಾ (Priyanka Chopra in BBMA) ತಮ್ಮ ಅಭಿನಯ ಹಾಗೂ ಆಕರ್ಷಕ ಲುಕ್ನಿಂದಲೇ ಕೋಟ್लाಯಂತರ ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಫ್ಯಾಷನ್ ಸೆನ್ಸ್ನಿಂದಲೇ ಆಗಾಗ ಸದ್ದು ಮಾಡುತ್ತಿರುತ್ತಾರೆ. ಈಗಲೂ ಸಹ ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್ಸ್ 2021 (Billboard Music Awards 2021) ಕಾರ್ಯಕ್ರಮದಲ್ಲೂ ತಮ್ಮ ಲುಕ್ಸ್ನಿಂದಾಗಿ ಸುದ್ದಿಯಲ್ಲಿದ್ದಾರೆ. ಭಾನುವಾರ ರಾತ್ರಿಯಿಂದಲೇ ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್ಸ್2021 ಕಾರ್ಯಕ್ರಮ ಆರಂವಾಗಿದೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂ ಖಾತೆ)