Priyanka Chopra: ಕಾಳಿ ಮಾತೆಯ ಚಿತ್ರ ಇರುವ ಜಾಕೆಟ್ ತೊಟ್ಟ ಪ್ರಿಯಾಂಕಾ ಚೋಪ್ರಾ: ತರಾಟೆಗೆ ತೆಗೆದುಕೊಂಡ ನೆಟ್ಟಿಗರು
Priyanka Chopra Jonas: ಬಾಲಿವುಡ್ನಿಂದ ಹಾಲಿವುಡ್ಗೆ ಹಾರಿದ ಪ್ರಿಯಾಂಕಾ ಚೋಪ್ರಾ ಆಗಾಗ ತಾವು ತೊಡುವ ವಿನ್ಯಾಸಿತ ವಸ್ತ್ರಗಳಿಂದ ಟ್ರೋಲ್ ಆಗುತ್ತಿರುತ್ತಾರೆ. ಈಗಲೂ ಸಹ ತಾವು ತೊಟ್ಟ ಜಾಕೆಟ್ನಿಂದಾಗಿ ಪ್ರಿಯಾಂಕಾ ಚೋಪ್ರಾ ಟ್ರೋಲ್ ಆಗಿದ್ದಾರೆ. ಜತೆಗೆ ನೆಟ್ಟಿಗರು ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಅಭಿಮಾನಿಗಳ ಇನ್ಸ್ಟಾಗ್ರಾಂ ಖಾತೆ)
ನಟಿ, ಗಾಯಕಿಯಾಗಿರುವ ಪ್ರಿಯಾಂಕಾ ಚೋಪ್ರಾ ಕೊರೋನಾದಿಂದಾಗಿ ಭಾರತ ಎದುರಿಸುತ್ತಿರುವ ಸಂಕಷ್ಟಕ್ಕೆ ನೆರವಾಗುವಂತೆ ಮನವಿ ಮಾಡಿದ್ದರು. ಜೊತೆಗೆ ಅಮೆರಿಕದ ಬಳಿ ಭಾರತಕ್ಕೆ ವ್ಯಾಕ್ಸಿನ್ ನೀಡಿ ಎಂದು ಕೇಳಿದ್ದರು.
2/ 11
ಭಾರತ ಎದುರಿಸುತ್ತಿರುವ ಕಠಿಣ ಪರಿಸ್ಥಿತಿ ಕಂಡು ಕಂಬನಿ ಮಿಡಿದಿದ್ದರು ಪ್ರಿಯಾಂಕಾ.
3/ 11
ತನ್ನ ದೇಶದ ಸಂಕಷ್ಟಕ್ಕೆ ಮಿಡಿದಿದ್ದ ನಟಿಯ ಮನಸ್ಸಿಗೆ ಮೆಚ್ಚುಗೆ ವ್ಯಕ್ತವಾಗಿತ್ತು.
4/ 11
ಹೀಗಿರುವಾಗಲೇ ಪ್ರಿಯಾಂಕಾ ಚೋಪ್ರಾ ಮತ್ತೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
5/ 11
ಪ್ರಿಯಾಂಕಾ ಚೋಪ್ರಾ ಅವರ ಅಭಿಮಾನಿಗಳ ಇನ್ಸ್ಟಾಗ್ರಾಂ ಪುಟದಲ್ಲಿ ನಿಕ್ ಹಾಗೂ ಪಿಗ್ಗಿ ಕೈ ಹಿಡಿದು ಹೋಗುತ್ತಿರುವ ಫೋಟೋವನ್ನು ಶೇರ್ ಮಾಡಲಾಗಿದೆ.
6/ 11
ಪ್ರಿಯಾಂಕಾ ಅವರ ಈ ಫೋಟೋ ಸದ್ಯ ಟೀಕೆಗಳಿಗೆ ಗುರಿಯಾಗಿದೆ.
7/ 11
ಈ ಚಿತ್ರದಲ್ಲಿ ಪ್ರಿಯಾಂಕಾ ತೊಟ್ಟಿರುವ ಜಾಕೆಟ್ ಮೇಲೆ ಕಾಳಿ ಮಾತೆಯ ಚಿತ್ರವಿದೆ. ಇದನ್ನು ನೋಡಿದ ಟ್ರೋಲಿಗರು ಪ್ರಿಯಾಂಕಾರನ್ನು ಟ್ರೋಲ್ ಮಾಡುತ್ತಿದ್ದಾರೆ.
8/ 11
ಜತೆಗೆ ನೆಟ್ಟಿಗರು ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
9/ 11
ಹಿಂದೂ ದೇವತೆಗೆ ಅವಮಾನ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದರೆ, ಮತ್ತೆ ಕೆಲವರು ಇದು ಭಕ್ತಿಯ ಪರಾಕಾಷ್ಠೆ ಎನ್ನುತ್ತಿದ್ದಾರೆ.
10/ 11
ಇನ್ನು ಕೆಲ ನೆಟ್ಟಿಗರು ನಮ್ಮ ಧರ್ಮಕ್ಕೆ ಅವಮಾನ ಮಾಡಬೇಡಿ ಎನ್ನುತ್ತಿದ್ದಾರೆ.
11/ 11
ಆದರೆ, ಪ್ರಿಯಾಂಕಾ ಚೋಪ್ರಾ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.