Priyanka Chopra: ರಾಮ್ ಚರಣ್, ಪ್ರಿಯಾಂಕಾ ಚೋಪ್ರಾ ಫ್ರೆಂಡ್​ಶಿಪ್ ಹೇಗಿದೆ? ಚೆರ್ರಿ ಬಗ್ಗೆ ಪಿಗ್ಗಿ ಮನದ ಮಾತು!

Ram Charan: ಹಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ ಮಂದಿಯ ಜೊತೆಗೆ ಸೌತ್ ಸಿನಿಮಾ ನಟರ ಬಗ್ಗೆ ಕೂಡ ಉತ್ತಮ ಸ್ನೇಹ ಹೊಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿ ಪ್ರಿಯಾಂಕಾ ಚೋಪ್ರಾ, ನಟ ರಾಮ್ ಚರಣ್ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

First published:

  • 18

    Priyanka Chopra: ರಾಮ್ ಚರಣ್, ಪ್ರಿಯಾಂಕಾ ಚೋಪ್ರಾ ಫ್ರೆಂಡ್​ಶಿಪ್ ಹೇಗಿದೆ? ಚೆರ್ರಿ ಬಗ್ಗೆ ಪಿಗ್ಗಿ ಮನದ ಮಾತು!

    ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಅವರು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಪಿಗ್ಗಿ ನಟ ಚೆರ್ರಿ ಅವರನ್ನು ಹೊಗಳಿದ್ದು, ಮೆಗಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಪ್ರಿಯಾಂಕಾ ಚೋಪ್ರಾ, ನಟ ರಾಮ್ ಚರಣ್ ಅವರನ್ನು ಭಾರತದ ಬ್ರಾಡ್ ಪಿಟ್ ಎಂದು ಕರೆದಿದ್ದಾರೆ.

    MORE
    GALLERIES

  • 28

    Priyanka Chopra: ರಾಮ್ ಚರಣ್, ಪ್ರಿಯಾಂಕಾ ಚೋಪ್ರಾ ಫ್ರೆಂಡ್​ಶಿಪ್ ಹೇಗಿದೆ? ಚೆರ್ರಿ ಬಗ್ಗೆ ಪಿಗ್ಗಿ ಮನದ ಮಾತು!

    ಅಮೆಜಾನ್ ಪ್ರೈಮ್ ವಿಡಿಯೋ ನಿರ್ಮಿಸಿದ ಸಿಟಾಡೆಲ್ ಸೀರಿಸ್ ಕುರಿತ ಸಂದರ್ಶನವೊಂದರಲ್ಲಿ ಮಾತಾಡಿದ್ದ ಪ್ರಿಯಾಂಕಾ ಚೋಪ್ರಾ, ಚೆರ್ರಿ ವ್ಯಕ್ತಿತ್ವದ ಎಂಥದ್ದು ಎಂದು ಹೇಳಿದ್ದಾರೆ. ರಾಮ್ ಚರಣ್ ಅಪಾರ ವರ್ಚಸ್ಸು ಹೊಂದಿದ್ದಾರೆ. ಅವರೂ ತುಂಬಾ ಒಳ್ಳೆಯ ವ್ಯಕ್ತಿ ಎಂದು ಪ್ರಿಯಾಂಕಾ ಹೇಳಿದ್ದಾರೆ.

    MORE
    GALLERIES

  • 38

    Priyanka Chopra: ರಾಮ್ ಚರಣ್, ಪ್ರಿಯಾಂಕಾ ಚೋಪ್ರಾ ಫ್ರೆಂಡ್​ಶಿಪ್ ಹೇಗಿದೆ? ಚೆರ್ರಿ ಬಗ್ಗೆ ಪಿಗ್ಗಿ ಮನದ ಮಾತು!

    ರಾಮ್ ಚರಣ್ ಅಥವಾ ಎನ್ ಟಿಆರ್ ಯಾರು ಸುಂದರವಾಗಿದ್ದಾರೆ ಎನ್ನುವ ಪ್ರಶ್ನೆಗೆ ಪ್ರಿಯಾಂಕಾ ಚೋಪ್ರಾ ಮುಗುಳ್ನಕ್ಕು ಪ್ರಶ್ನೆಯನ್ನು ನಿರ್ಲಕ್ಷಿಸಿದರು. ರಾಮ್ ಚರಣ್ - ಪ್ರಿಯಾಂಕಾ ಚೋಪ್ರಾ 'ಜಂಜೀರ್' (ಚಂಡಮಾರುತ) ಚಿತ್ರದಲ್ಲಿ ನಟಿಸಿದ್ರು. ಆಸ್ಕರ್ ಸಮಾರಂಭದ ವೇಳೆ ಪಿಗ್ಗಿ-ಚೆರ್ರಿ ಭೇಟಿಯಾಗಿದ್ರು.

    MORE
    GALLERIES

  • 48

    Priyanka Chopra: ರಾಮ್ ಚರಣ್, ಪ್ರಿಯಾಂಕಾ ಚೋಪ್ರಾ ಫ್ರೆಂಡ್​ಶಿಪ್ ಹೇಗಿದೆ? ಚೆರ್ರಿ ಬಗ್ಗೆ ಪಿಗ್ಗಿ ಮನದ ಮಾತು!

    ರಾಮ್ ಚರಣ್ ಸದ್ಯ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಚೆರ್ರಿ ಅವರ ಸಿನಿ ಕೆರಿಯರ್ನಲ್ಲಿ 15ನೇ ಚಿತ್ರವಾಗಲಿರುವ ಈ ಚಿತ್ರವನ್ನು ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಎಲ್ಲೂ ರಾಜಿ ಮಾಡಿಕೊಳ್ಳದೆ ಅದ್ಧೂರಿಯಾಗಿ ದಿಲ್ ರಾಜು ಸಿನಿಮಾ ಮಾಡುತ್ತಿದ್ದಾರೆ.

    MORE
    GALLERIES

  • 58

    Priyanka Chopra: ರಾಮ್ ಚರಣ್, ಪ್ರಿಯಾಂಕಾ ಚೋಪ್ರಾ ಫ್ರೆಂಡ್​ಶಿಪ್ ಹೇಗಿದೆ? ಚೆರ್ರಿ ಬಗ್ಗೆ ಪಿಗ್ಗಿ ಮನದ ಮಾತು!

    ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿ ಬರುತ್ತಿರುವ 50ನೇ ಸಿನಿಮಾ ಇದಾಗಿದೆ. ದಿಲ್ ರಾಜು ಈ ಚಿತ್ರಕ್ಕಾಗಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಚೆರ್ರಿಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಜಯರಾಮ್, ಅಂಜಲಿ, ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 68

    Priyanka Chopra: ರಾಮ್ ಚರಣ್, ಪ್ರಿಯಾಂಕಾ ಚೋಪ್ರಾ ಫ್ರೆಂಡ್​ಶಿಪ್ ಹೇಗಿದೆ? ಚೆರ್ರಿ ಬಗ್ಗೆ ಪಿಗ್ಗಿ ಮನದ ಮಾತು!

    ಅದ್ಧೂರಿ ಆ್ಯಕ್ಷನ್ ಎಪಿಸೋಡ್ ಅನ್ನು ಈ ಸಿನಿಮಾದಲ್ಲಿ ನೋಡಬಹುದಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ಭಾಗಕ್ಕೆ ನಿರ್ದೇಶಕ ಶಂಕರ್ ಹೆಚ್ಚು ಮಹತ್ವ ನೀಡಿದ್ದಾರಂತೆ. 20 ನಿಮಿಷಗಳವರೆಗೆ ಈ ಸೀನ್ ಇರಲಿದ್ದು, ಇದಕ್ಕೆ 20 ಕೋಟಿಗಳನ್ನು ನಿಗದಿಪಡಿಸಲಾಗಿದೆ.

    MORE
    GALLERIES

  • 78

    Priyanka Chopra: ರಾಮ್ ಚರಣ್, ಪ್ರಿಯಾಂಕಾ ಚೋಪ್ರಾ ಫ್ರೆಂಡ್​ಶಿಪ್ ಹೇಗಿದೆ? ಚೆರ್ರಿ ಬಗ್ಗೆ ಪಿಗ್ಗಿ ಮನದ ಮಾತು!

    ಈ ಸಿನಿಮಾದಲ್ಲಿ ರಾಮ್ ಚರಣ್ ಚುನಾವಣಾ ಆಯುಕ್ತ ಹಾಗೂ ಸಿಎಂ ಆಗಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾದಲ್ಲಿ ಚೆರ್ರಿಗೆ ಸಂಬಂಧಿಸಿದ ಒಟ್ಟು 27 ಗೆಟಪ್ ಗಳನ್ನು ನೋಡಬಹುದಾಗಿದೆ ಎಂದು ಮೆಗಾ ಅಭಿಮಾನಿಗಳು ಖುಷ್ ಆಗಿದ್ದಾರೆ. ಚಿತ್ರಕ್ಕೆ ಥಮನ್ ಸಂಗೀತ ಸಂಯೋಜಿಸುತ್ತಿದ್ದಾರೆ.

    MORE
    GALLERIES

  • 88

    Priyanka Chopra: ರಾಮ್ ಚರಣ್, ಪ್ರಿಯಾಂಕಾ ಚೋಪ್ರಾ ಫ್ರೆಂಡ್​ಶಿಪ್ ಹೇಗಿದೆ? ಚೆರ್ರಿ ಬಗ್ಗೆ ಪಿಗ್ಗಿ ಮನದ ಮಾತು!

    ಇತ್ತೀಚೆಗೆ ಬಿಡುಗಡೆಯಾದ ಗೇಮ್ ಚೇಂಜರ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗೆ ಪ್ರೇಕ್ಷಕರಿಂದ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದ ಮೇಲೆ ರಾಮ್ ಚರಣ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    MORE
    GALLERIES