Bollywood Brides: ಬಾಲಿವುಡ್ ನಟಿಯರಲ್ಲಿ ಅತಿ ಹೆಚ್ಚು ಬೆಲೆಯ ಲೆಹೆಂಗಾ ಧರಿಸಿದ್ಯಾರು ಗೊತ್ತಾ?

ಅಥಿಯಾ ಶೆಟ್ಟಿ ಬ್ರೈಡಲ್ ಲೆಹಂಗಾದಿಂದ ಹಿಡಿದು ಕಿಯಾರಾ ಅಡ್ವಾಣಿ ಬ್ರೈಡಲ್ ಲೆಹೆಂಗಾದವರೆಗೆ ಅನೇಕ ಬಿ-ಟೌನ್ ಸುಂದರಿಯರ ಬ್ರೈಡಲ್ ಲುಕ್ ವೈರಲ್ ಆಗಿದೆ. ಈ ನಟಿಯರು ಧರಿಸಿದ ಲೆಹೆಂಗಾ ಬೆಲೆ ಎಷ್ಟು ಗೊತ್ತೇ?

First published:

 • 18

  Bollywood Brides: ಬಾಲಿವುಡ್ ನಟಿಯರಲ್ಲಿ ಅತಿ ಹೆಚ್ಚು ಬೆಲೆಯ ಲೆಹೆಂಗಾ ಧರಿಸಿದ್ಯಾರು ಗೊತ್ತಾ?

  ಕಿಯಾರಾ ಅಡ್ವಾಣಿ ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರೋಮನ್ ವಾಸ್ತುಶೈಲಿಯಿಂದ ಪ್ರೇರಿತವಾದ ತನ್ನ ಮದುವೆ ಲೆಹೆಂಗಾದಲ್ಲಿ ನಟಿ ಸುಂದರಿಯಾಗಿ ಕಾಣಿಸಿದ್ದಾರೆ. ಈ ಲೆಹೆಂಗಾದ ಬೆಲೆ ಇನ್ನೂ ಬಹಿರಂಗವಾಗಿಲ್ಲ, ಆದರೆ ಇದರಲ್ಲಿ ವಜ್ರಗಳನ್ನು ಜೋಡಿಸಲಾಗಿದ್ದು, ಕಿಯಾರಾ ಅವರ ಈ ಲೆಹೆಂಗಾವು ಭಾರೀ ದುಬಾರಿ ಎಂಬುದು ಸ್ಪಷ್ಟವಾಗಿದೆ. ಮತ್ತೊಂದೆಡೆ, ಅಥಿಯಾ ಶೆಟ್ಟಿ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ ಸುಂದರವಾದ ಲೆಹೆಂಗಾವನ್ನು ಧರಿಸಿದ್ದರು. ಇದನ್ನು ತಯಾರಿಸಲು 400 ದಿನಗಳಿಗಿಂತ ಹೆಚ್ಚು ಸಮಯ ಬೇಕಾಯಿತು. ಬಾಲಿವುಡ್‌ನ ಕೆಲವು ಟಾಪ್ ನಟಿಯರು ಧರಿಸಿರುವ ಲೆಹೆಂಗಾದ ಬೆಲೆಯ ಎಷ್ಟು ಗೊತ್ತೇ?

  MORE
  GALLERIES

 • 28

  Bollywood Brides: ಬಾಲಿವುಡ್ ನಟಿಯರಲ್ಲಿ ಅತಿ ಹೆಚ್ಚು ಬೆಲೆಯ ಲೆಹೆಂಗಾ ಧರಿಸಿದ್ಯಾರು ಗೊತ್ತಾ?

  2018 ರಲ್ಲಿ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಅವರನ್ನು ವಿವಾಹವಾದರು. ಸೆಲೆಬ್ರಿಟಿ ಜೋಡಿಯ ವಿವಾಹವು ದೇಶದ ಅತ್ಯಂತ ಜನಪ್ರಿಯ ವಿವಾಹಗಳಲ್ಲಿ ಒಂದಾಗಿದೆ. ತನ್ನ ಮದುವೆಗೆ, ನಟಿ ಸಬ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಕೆಂಪು ಲೆಹೆಂಗಾವನ್ನು ಆಯ್ಕೆ ಮಾಡಿಕೊಂಡರು. ಇದರ ಬೆಲೆ ಸುಮಾರು 12 ಲಕ್ಷ.

  MORE
  GALLERIES

 • 38

  Bollywood Brides: ಬಾಲಿವುಡ್ ನಟಿಯರಲ್ಲಿ ಅತಿ ಹೆಚ್ಚು ಬೆಲೆಯ ಲೆಹೆಂಗಾ ಧರಿಸಿದ್ಯಾರು ಗೊತ್ತಾ?

  ಕಳೆದ ವರ್ಷ ಕತ್ರೀನಾ ಕೈಫ್ ಅವರ ಮದುವೆ ತುಂಬಾ ಚರ್ಚೆಯಾಗಿತ್ತು. ಅವರು ವಿಕ್ಕಿ ಕೌಶಲ್ ಅವರನ್ನು ರಾಯಲ್ ಶೈಲಿಯಲ್ಲಿ ವಿವಾಹವಾದರು. ಹಿಂದೂಸ್ತಾನಿ ಬ್ರೈಡಲ್ ಲುಕ್‌ಗಾಗಿ ಕತ್ರಿನಾ ಕೂಡ ಸಬ್ಯಸಾಚಿ ಮುಖರ್ಜಿ ಅವರ ಲೆಹಂಗಾ ಆಯ್ಕೆ ಮಾಡಿದ್ದಾರೆ. ಇದರ ಬೆಲೆ ಸುಮಾರು 17 ಲಕ್ಷ ಎಂದು ಹೇಳಲಾಗಿದೆ.

  MORE
  GALLERIES

 • 48

  Bollywood Brides: ಬಾಲಿವುಡ್ ನಟಿಯರಲ್ಲಿ ಅತಿ ಹೆಚ್ಚು ಬೆಲೆಯ ಲೆಹೆಂಗಾ ಧರಿಸಿದ್ಯಾರು ಗೊತ್ತಾ?

  ಅನುಷ್ಕಾ ಶರ್ಮಾ ತನ್ನ ಮದುವೆಯಲ್ಲಿ ಗುಲಾಬಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು. 2017 ರಲ್ಲಿ, ಅನುಷ್ಕಾ ವಿರಾಟ್ ಕೊಹ್ಲಿಯನ್ನು ವಿವಾಹವಾದರು. ಅವರ ಮದುವೆಯಲ್ಲಿ ಅವರು ಧರಿಸಿದ್ದ ಲೆಹೆಂಗಾವನ್ನು ಡಿಸೈನರ್ ಸಬ್ಯಸಾಚಿ ಮುಖರ್ಜಿ ಅವರು 30 ಲಕ್ಷಕ್ಕೆ ವಿನ್ಯಾಸಗೊಳಿಸಿದ್ದಾರೆ.

  MORE
  GALLERIES

 • 58

  Bollywood Brides: ಬಾಲಿವುಡ್ ನಟಿಯರಲ್ಲಿ ಅತಿ ಹೆಚ್ಚು ಬೆಲೆಯ ಲೆಹೆಂಗಾ ಧರಿಸಿದ್ಯಾರು ಗೊತ್ತಾ?

  ಬಾಲಿವುಡ್ ಮತ್ತು ಸೌತ್ ನಟಿ ಕಾಜಲ್ ಅಗರ್ವಾಲ್ ಕೂಡ 2020 ರಲ್ಲಿ ತನ್ನ ಉದ್ಯಮಿ ಗೆಳೆಯ ಗೌತಮ್ ಕಿಚ್ಲು ಅವರನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ವೇಳೆ ಕಾಜಲ್ ಅವರ ಲೆಹೆಂಗಾ ತುಂಬಾ ಚರ್ಚೆಗೆ ಗ್ರಾಸವಾಗಿತ್ತು. ಆಕೆಯ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾಗೆ ಸುಮಾರು 5 ಲಕ್ಷ ವೆಚ್ಚವಾಗಿದೆ ಎಂದು ಹೇಳಲಾಗಿದೆ.

  MORE
  GALLERIES

 • 68

  Bollywood Brides: ಬಾಲಿವುಡ್ ನಟಿಯರಲ್ಲಿ ಅತಿ ಹೆಚ್ಚು ಬೆಲೆಯ ಲೆಹೆಂಗಾ ಧರಿಸಿದ್ಯಾರು ಗೊತ್ತಾ?

  ಪ್ರಿಯಾಂಕಾ ಚೋಪ್ರಾ ಅವರು ಜೋಧ್‌ಪುರದ ಉಮೈದ್ ಪ್ಯಾಲೇಸ್‌ನಲ್ಲಿ ರಾಜಮನೆತನದ ಶೈಲಿಯಲ್ಲಿ ನಿಕ್ ಜೋನಾಸ್ ಅವರನ್ನು ವಿವಾಹವಾದರು. ಪ್ರಿಯಾಂಕಾ ಚೋಪ್ರಾ ಧರಿಸಿರುವ ಸಬ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಕೆಂಪು ಲೆಹೆಂಗಾದ ಬೆಲೆ ಸುಮಾರು 18 ಲಕ್ಷ ಎಂದು ಹೇಳಲಾಗಿದೆ.

  MORE
  GALLERIES

 • 78

  Bollywood Brides: ಬಾಲಿವುಡ್ ನಟಿಯರಲ್ಲಿ ಅತಿ ಹೆಚ್ಚು ಬೆಲೆಯ ಲೆಹೆಂಗಾ ಧರಿಸಿದ್ಯಾರು ಗೊತ್ತಾ?

  ಬಾಲಿವುಡ್‌ನ ಫ್ಯಾಶನ್ ನಟಿ ಸೋನಂ ಕಪೂರ್ ಅವರ ಬ್ರೈಡಲ್ ಲುಕ್ ಕೂಡ ಸುದ್ದಿಯಲ್ಲಿತ್ತು. ಸೋನಂ ಅವರ ವಧುವಿನ ಲುಕ್ ಇಲ್ಲಿಯವರೆಗೆ ಚರ್ಚೆಯಲ್ಲಿದೆ. ಆನಂದ್ ಅಹುಜಾ ಅವರೊಂದಿಗಿನ ಮದುವೆಯಲ್ಲಿ, ನಟಿ ಅತ್ಯಂತ ದುಬಾರಿ ಲೆಹೆಂಗಾವನ್ನು ಧರಿಸಿದ್ದರು. ಮಾಧ್ಯಮಗಳ ವರದಿ ಪ್ರಕಾರ ಸೋನಂ ಅವರ ಲೆಹೆಂಗಾದ ಬೆಲೆ 90 ಲಕ್ಷ ರೂಪಾಯಿ.

  MORE
  GALLERIES

 • 88

  Bollywood Brides: ಬಾಲಿವುಡ್ ನಟಿಯರಲ್ಲಿ ಅತಿ ಹೆಚ್ಚು ಬೆಲೆಯ ಲೆಹೆಂಗಾ ಧರಿಸಿದ್ಯಾರು ಗೊತ್ತಾ?

  ಆಲಿಯಾ ಭಟ್ ತನ್ನ ಮದುವೆಯಲ್ಲಿ ಸುಂದರವಾದ ಬಿಳಿ ಸೀರೆಯನ್ನು ಧರಿಸಿದ್ದರು. ಅವರ ಬ್ರೈಡಲ್ ಲುಕ್ ತುಂಬಾ ಸುಂದರವಾಗಿತ್ತು. ಆದರೆ ಇದು ತುಂಬಾ ದುಬಾರಿಯಾಗಿದೆ. ಆಲಿಯಾ ವಧುವಿನ ಸೀರೆಗೆ ಸುಮಾರು 50 ಲಕ್ಷ ರೂಪಾಯಿ ಎಂದು ಹೇಳಲಾಗುತ್ತದೆ.

  MORE
  GALLERIES