ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ಬಾಲಿವುಡ್‌ನಿಂದ ಹಾಲಿವುಡ್ ಚಿತ್ರಗಳವರೆಗೆ, ಮೊದಲು ಸಣ್ಣ ಪಾತ್ರಗಳನ್ನು ನಿರ್ವಹಿಸಿ ಹೀರೋಯಿನ್ ಆದ ಮೇಲೆ ಪ್ರಿಯಾಂಕಾ ಯಶಸ್ಸಿನ ಉದಾಹರಣೆಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಈಗ ಜಾಗತಿಕ ಸೆಲೆಬ್ರಿಟಿಯಾಗಿದ್ದಾರೆ. ಹಲವು ಹಾಲಿವುಡ್ ಚಿತ್ರಗಳಲ್ಲಿ ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೆ ಪ್ರಿಯಾಂಕಾ ಚೋಪ್ರಾ ತನ್ನ ಚಿತ್ರಕ್ಕಾಗಿ ಭಾರಿ ಮೊತ್ತದ ಸಂಭಾವನೆಯನ್ನೂ ಪಡೆಯುತ್ತಾರೆ.
Instagram ನ ಪ್ರತಿಯೊಂದು ಪೋಸ್ಟ್ ಕೂಡ ಪ್ರಿಯಾಂಕಾ ಚೋಪ್ರಾರನ್ನು ಮಿಲಿಯನೇರ್ ಮಾಡುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲು ಪ್ರಿಯಾಂಕಾ 3 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ. ಯುಕೆ ಮೂಲದ ಕಂಪನಿ ಹಾಪರ್ ಹೆಚ್ಕ್ಯು 2021 ರ ವರದಿಯ ಪ್ರಕಾರ, ಪ್ರತಿ ಪೋಸ್ಟ್‌ಗೆ ಪ್ರಿಯಾಂಕಾ 3 ಕೋಟಿ ರೂ. ಪಡೆಯುತ್ತಾರಂತೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಿಯಾಂಕಾ ಅವರನ್ನು 79.2 ಮಿಲಿಯನ್ ಜನರು ಫಾಲೋ ಮಾಡುತ್ತಾರೆ.