Priyanka Chopra: ಮಗಳ ಜೊತೆ ಬೀಚ್ನಲ್ಲಿ ಪ್ರಿಯಾಂಕಾ ಚೋಪ್ರಾ ಮಸ್ತಿ! ಫೋಟೋ ಶೇರ್ ಮಾಡಿದ ಬಳಿಕ ನಟಿ ಟ್ರೋಲ್ ಆಗಿದ್ಯಾಕೆ?
ಮಾಲ್ತಿ ಮೇರಿ ಹುಟ್ಟಿದಾಗಿನಿಂದ ನಟಿ ಪ್ರಿಯಾಂಕಾ ಚೋಪ್ರಾ ಮಗಳ ಲಾಲನೆ ಪಾಲನೆಯಲ್ಲೇ ಬ್ಯುಸಿ ಆಗಿದ್ದಾರೆ. ಪತಿ ಹಾಗೂ ಮಗಳ ಜೊತೆ ಬೀಚ್ಗೆ ತೆರಳಿರುವ ನಟಿ ಪ್ರಿಯಾಂಕಾ ಮಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಮಗಳ ಮುಖ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಆದ್ರೆ ನಟಿ ಮಾತ್ರ ಇನ್ನು ಮಗಳ ಮುಖವನ್ನು ರಿವೀಲ್ ಮಾಡಿಲ್ಲ. ಈ ವಿಚಾರಕ್ಕೂ ಸಹ ದೇಸಿ ಗರ್ಲ್ ಸಖತ್ ಟ್ರೋಲ್ ಆಗಿದ್ದಾರೆ.
2/ 8
ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಮಗಳ ಜೊತೆ ಮ್ಯಾಗಜಿನ್ ಒಂದಕ್ಕೆ ಫೋಟೋಶೂಟ್ ಕೂಡ ಮಾಡಿಸಿದ್ರು. ರೆಡ್ ಡ್ರೆಸ್ ನಲ್ಲಿ ಮಗಳೊಂದಿಗಿನ ಪೋಟೋ ಸಖತ್ ವೈರಲ್ ಆಗಿತ್ತು.
3/ 8
ಪ್ರಿಯಾಂಕಾ ಮೊದಲು ಮಾಲ್ತಿಯೊಂದಿಗೆ ಮ್ಯಾಗಜಿನ್ ಫೋಟೋಶೂಟ್ ನಲ್ಲಿ ಕಾಣಿಸಿಕೊಂಡ್ರು ಅಲ್ಲಿಯೂ ಕೂಡ ನಟಿ ಮಗಳ ಮುಖ ತೋರಿಸಿಲ್ಲ.
4/ 8
ಪ್ರಿಯಾಂಕಾ ಫ್ಯಾಮಿಲಿ ಜೊತೆ ಕ್ಯಾಲಿಫೋರ್ನಿಯಾದ ಬೀಚ್ಗೆ ತೆರಳಿದ್ರು. ಮಗಳ ಜೊತೆ ಬೀಚ್ ನಲ್ಲಿ ಅಟವಾಡ್ತಿದ್ದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.
5/ 8
ಪತಿ ನಿಕ್ ಜೊತೆ ಮಗಳನ್ನು ಎತ್ತಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡ ನಟಿ, ಈಗಲೂ ಮಗಳ ಮುಖ ತೋರಿಸಿಲ್ಲ. ಹಾರ್ಟ್ ಸಿಂಬಲ್ ಬಳಸಿದ್ದಾರೆ.
6/ 8
ಮಗಳ ಫೋಟೋ ಹಂಚಿಕೊಂಡ ಬಳಿಕ ಪ್ರಿಯಾಂಕಾ ಟ್ರೋಲ್ಗೆ ಒಳಗಾಗಿದ್ದಾರೆ. ಮಗಳ ಮುಖವನ್ನು ಯಾಕೆ ಮರೆಮಾಚುತ್ತಿದ್ದೀರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
7/ 8
ಪ್ರಿಯಾಂಕಾ ಶೇರ್ ಮಾಡಿರುವ 3 ಫೋಟೋಗಳಲ್ಲಿ ಪಿಗ್ಗಿ ಫುಲ್ ಎಂಜಾಯ್ ಮಾಡ್ತಿರೋದನ್ನು ಕಾಣಬಹುದಾಗಿದೆ. ಮಗಳು ಸಹ ಅಪ್ಪ-ಅಮ್ಮನ ಜೊತೆ ಸಂತಸದ ಕ್ಷಣಗಳನ್ನು ಕಳೆದಿದ್ದಾಳೆ.
8/ 8
ಪರ್ಫೆಕ್ಟ್ ಫ್ಯಾಮಿಲಿ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದೇಸಿ ಗರ್ಲ್ ಮಗಳ ಮುಖವನ್ನು ಯಾವಾಗ ತೋರಿಸುತ್ತಾರೆ ಎಂದು ಅಭಿಮಾನಿಗಳು ಕಾಯ್ತಿದ್ದಾರೆ.