ಕಣ್ಸನ್ನೆ ಹುಡುಗಿ Priya Prakash Varrier ಲುಕ್ಸ್ಗೆ ನೆಟ್ಟಿಗರು ಮತ್ತೊಮ್ಮೆ ಫಿದಾ..!
ಕಣ್ಸನ್ನೆ ಹುಡುಗಿ ಎಂದೇ ಖ್ಯಾತರಾಗಿರುವ ನಟಿ ಪ್ರಿಯಾ ಪ್ರಕಾಶ ವಾರಿಯರ್ (Priya Prakash Varrier) ಅವರು ಆಗೊಂದು ಈಗೊಂದು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೂ, ಸಾಮಾಜಿಕ ಜಾತಾಣದಲ್ಲಿ ಮಾತ್ರ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ದಿನಕ್ಕೊಂದು ಫೋಟೋಗಳ ಮೂಲಕ ಅಭಿಮಾನಿಗಳಿಗೆ ಟ್ರೀಟ್ ಕೊಡುತ್ತಲೇ ಇದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾ ಪ್ರಕಾಶ್ ವಾರಿಯರ್ ಇನ್ಸ್ಟಾಗ್ರಾಂ ಖಾತೆ)
ಪ್ರಿಯಾ ಪ್ರಕಾಶ್ ವಾರಿಯರ್ ಇತ್ತೀಚೆಗೆ ತುಂಬಾ ಫೋಟೋಶೂಟ್ಗಳಿಗೆ ಪೋಸ್ ಕೊಡುತ್ತಿದ್ದಾರೆ. ಲೆಟೆಸ್ಟ್ ಫೋಟೋಗಳಲ್ಲಿ ತುಂಬಾ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
2/ 6
ಸೀರೆಯುಟ್ಟು ಲೂಸ್ ಹೇರ್ನಲ್ಲಿ ತುಂಬಾ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಹಣೆಗೆ ಕುಂಕುಮ, ಮೂಗುಬೊಟ್ಟು ಹಾಗೂ ಗುಲಾಬಿ ಹೂ ಮುಡಿದು, ಡೀಪ್ ನೆಕ್ ರವಿಕೆ ತೊಟ್ಟು ಸಖತ್ ಹಾಟಾಗಿ ಪೋಸ್ ಕೊಟ್ಟಿದ್ದಾರೆ.
3/ 6
ಪ್ರಿಯಾ ಪ್ರಕಾಶ್ ವಾರಿಯರ್ ಅವರ ಈ ಲುಕ್ಗೆ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗಿದ್ದಾರೆ. ರೆಟ್ರೋ ಲುಕ್ನಲ್ಲಿ ಮಿಂಚಿದ್ದು, ಈ ಲುಕ್ ನೆಟ್ಟಿಗರ ಮನ ಗೆದ್ದಿದೆ.
4/ 6
ಸ್ಯಾಂಡಲ್ವುಡ್, ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿನಲ್ಲೂ ಪ್ರಿಯಾ ವಾರಿಯರ್ ಸಿನಿಮಾ ಮಾಡುತ್ತಿದ್ದಾರೆ. ಅವರ ಅಭಿನಯದ ಚೆಕ್ ಹಾಗೂ ಮತ್ತೊಂದು ತೆಲುಗು ಸಿನಿಮಾ ಈಗಾಗಲೇ ತರಿಲೀಸ್ ಆಗಿದೆ.
5/ 6
ಪ್ರಿಯಾ ವಾರಿಯರ್ ಅವರಿಗೆ ಇನ್ಸ್ಟಾಗ್ರಾಂನಲ್ಲಿ 7.2 ಮಿಲಿಯನ್ ಹಿಂಬಾಲಕರಿದ್ದಾರೆ. ಒರು ಆಡಾರ್ ಲವ್ ಸಿನಿಮಾದಲ್ಲಿನ ಒಂದು ಪುಟ್ಟ ವಿಡಿಯೋ ತುಣುಕು ರಿಲೀಸ್ ಆದ ನಂತರ ರಾತ್ರೋ ರಾತ್ರಿ ಪ್ರಿಯಾ ನ್ಯಾಷನಲ್ ಸ್ಟಾರ್ ಆಗಿದ್ದರು.
6/ 6
ಆಗಿನಿಂದ ಇಲ್ಲಿಯವರೆಗೂ ಪ್ರಿಯಾ ಪ್ರಕಾಶ್ ಮಾಡುವ ಪ್ರತಿ ಪೋಸ್ಟ್ಗೂ ನೆಟ್ಟಿಗರು ಮುಗಿ ಬಿದ್ದು ಲೈಕ್ಸ್ ಕೊಟ್ಟು ಕಮೆಂಟ್ ಮಾಡುತ್ತಾರೆ. ಆಗಾಗ ಪ್ರಿಯಾ ವಾರಿಯರ್ ಅವರ ಫೋಟೋಶೂಟ್ನ ಚಿತ್ರಗಳು ವೈರಲ್ ಸಹ ಆಗುತ್ತಿರುತ್ತವೆ.