ಫಿಲ್ಮ್ ಕಂಪಾನಿಯನ್ ಜೊತೆ ಮಾತನಾಡಿದ ಸೌತ್ ನಟ ಪೃಥ್ವಿರಾಜ್ ಸುಕುಮಾರ್ ಅವರು ಮುಕ್ತವಾಗಿ ಕಾಂತಾರ ಸಿನಿಮಾವನ್ನು ಹೊಗಳಿದ್ದಾರೆ. ಕಾಂತಾರ ಸಿನಿಮಾ ಬಗ್ಗೆ ಮಲಯಾಳಂ ನಟ ಪೃಥ್ವಿರಾಜ್ ಈಗಾಗಲೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈಗ ಮತ್ತೊಮ್ಮೆ ನಟ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 2022ರಲ್ಲಿ ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ಒಳ್ಳೊಳ್ಳೆಯ ಸಿನಿಮಾಗಳು ಬಂದಿವೆ. ಆದರೆ ನನ್ನನ್ನು ಹೆಚ್ಚು ಕಾಡಿದ್ದು ಕಾಂತಾರ ಸಿನಿಮಾ ಎಂದಿದ್ದಾರೆ. ಈ ಸಿನಿಮಾ ಮಲಯಾಳಂನಲ್ಲಿ ಬಂದಿರಬೇಕಿತ್ತು. ನಾನು ಕೂಡಾ ಅದರಲ್ಲಿ ನಟಿಸಿರನಬೇಕಿತ್ತು ಎನಿಸಿತು ಎಂದಿದ್ದಾರೆ ನಟ. ಕಾಂತಾರ ಸಿನಿಮಾ ಸದ್ಯ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ದಾಖಲೆ ಮಾಡುತ್ತಿದೆ. ಹಿಂದಿಯಲ್ಲಿ 75 ಕೋಟಿಗೂ ಹೆಚ್ಚು ಗಳಿಸಿದೆ. ಕಾಂತಾರ ಸಿನಿಮಾಗೆ ರಿಷಬ್ ಶೆಟ್ಟಿ ಕಥೆ ಬರೆದು, ನಿರ್ದೇಶನ ಮಾಡಿ ನಾಯಕನಾಗಿ ನಟಿಸಿದ್ದಾರೆ. ಇದರಲ್ಲಿ ಸ್ಥಳೀಯ ಕಲಾವಿದರೇ ಹೆಚ್ಚಾಗಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಸಪ್ತಮಿ ಗೌಡ, ಮಾನಸಿ ಸುಧೀರ್, ಕಿಶೋರ್ ಕುಮಾರ್ ಸೇರಿದಂತೆ ಬಹಳಷ್ಟು ಕಲಾವಿದರು ನಟಿಸಿದ್ದಾರೆ.