Mahesh Babu: ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಕನ್ನಡದಲ್ಲಿ ಶುಭ ಕೋರಿದ ಮಹೇಶ್ ಬಾಬು..!
Dasara Festival: ಇಂದು ನವರಾತ್ರಿ ಹಬ್ಬದ ಕೊನೆಯ ದಿನ. ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಹೀಗಿರುವಾಗಲೇ ಮಹೇಶ್ ಬಾಬು ಕನ್ನಡದ ಅಭಿಮಾನಿಗಳಿಗೆ ಸರ್ಪ್ರೈಸ್ ಜೊತೆ ಮೊಗದಲ್ಲಿ ನಗು ಮೂಡುವಂತೆ ಮಾಡಿದ್ದಾರೆ. (ಚಿತ್ರಗಳು ಕೃಪೆ: ಮಹೇಶ್ ಬಾಬು ಇನ್ಸ್ಟಾಗ್ರಾಂ ಖಾತೆ)
News18 Kannada | October 26, 2020, 8:47 AM IST
1/ 14
ಮಹೇಶ್ ಬಾಬು ಮಿತಭಾಷಿ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆ.
2/ 14
ಆದರೆ, ಅವಶ್ಯಕತೆ ಇದ್ದಾಗ ಅಂದರೆ, ಅಭಿಮಾನಿಗಳಿಗೆ ಏನಾದರೂ ಸುದ್ದಿ ಮುಟ್ಟುಸಬೇಕಾದಾಗ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷರಾಗುತ್ತಾರೆ.
3/ 14
ಈಗಲೂ ಸಹ ದಸರಾ ಹಬ್ಬಕ್ಕೆ ಶುಭ ಕೋರಲು ಮಹೇಶ್ ಬಾಬು ಎರಡು ಪೋಸ್ಟ್ಗಳನ್ನು ಮಾಡಿದ್ದಾರೆ.
4/ 14
ಒಂದು ತಾವು ವಿಶ್ ಮಾಡಿರುವುದು ಹಾಗೂ ಮತ್ತೊಂದು ಮಗಳು ಸಿತಾರಾ ಶುಭ ಕೋರಿರುವ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ ಪ್ರಿನ್ಸ್.
5/ 14
ಅದರಲ್ಲೂ ಮಹೇಶ್ ಬಾಬು ಮಾಡಿರುವ ಪೋಸ್ಟ್ನಲ್ಲಿ ಒಂದು ವಿಶೇಷವಿದೆ.
6/ 14
ಅದು ಮಹೇಶ್ ಬಾಬು ಈ ಸಲ ಕನ್ನಡದಲ್ಲೂ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.
7/ 14
ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಇಂಗ್ಲಿಷ್, ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲಿ ವಿಶ್ ಮಾಡಿದ್ದಾರೆ.
8/ 14
ಹಿಂದಿ ಸೇರಿದಂತೆ ದಕ್ಷಿಣ ಭಾರತದ ಅಭಿಮಾನಿಗಳಿಗೆ ಅವರವರ ಭಾಷೆಗಳಲ್ಲಿ ಶುಭ ಕೋರುವ ಮೂಲಕ ಫ್ಯಾನ್ಸ್ ಮೊಗದಲ್ಲಿ ನಗು ಮೂಡಿಸಿದ್ದಾರೆ.
9/ 14
ಇದನ್ನು ಮಹೇಶ್ ಬಾಬು ಸದ್ಯ, ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ.
10/ 14
ನವೆಂಬರ್ನಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
11/ 14
ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಕೀರ್ತಿ ಸುರೇಶ್, ಪ್ರಿನ್ಸ್ಗೆ ನಾಯಕಿಯಾಗಿ ನಟಿಸಲಿದ್ದಾರೆ.
12/ 14
ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ಈಗ ಮತ್ತೆ ರಿಲೀಸ್ ಆಗಿದೆ.