Salaar: ನಾಳೆ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ಮುಹೂರ್ತ; ಯಶ್, ಡಿಸಿಎಂ ಸೇರಿದಂತೆ ಹಲವರು ಭಾಗಿ
ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಚಿತ್ರದ ನಾಳೆ ಮುಹೂರ್ತ ನಡೆಯಲಿದೆ. ಹೈದ್ರಾಬಾದ್ನಲ್ಲಿ ಚಿತ್ರೀಕರಣಕ್ಕೆ ಮುಹೂರ್ತ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಟ ಯಶ್, ಬಾಹುಬಲಿ ನಿರ್ದೇಶಕ ರಾಜಮೌಳಿ, ಡಿಸಿಎಂ ಅಶ್ವತ್ಥ್ ನಾರಾಯಣ, ರವಿ ಬಸ್ರೂರ್, ಭುವನ್ ಗೌಡ ಸೇರಿದಂತೆ ಪ್ರಶಾಂತ್ ನೀಲ್ ಆಪ್ತವಲಯ ಭಾಗಿಯಾಗಲಿದ್ದಾರೆ.
News18 Kannada | January 14, 2021, 9:35 PM IST
1/ 4
ನಾಳೆ ಅದ್ದೂರಿಯಾಗಿ ಚಿತ್ರಕ್ಕೆ ಚಾಲನೆ ನೀಡಲಾಗುತ್ತಿದೆ. ಈ ವೇಳೆ ರಾಜಕೀಯ ಹಾಗೂ ಸಿನಿಮಾ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
2/ 4
ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಸಲಾರ್ ಚಿತ್ರ ದೇಶವ್ಯಾಪಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.
3/ 4
ಈ ಚಿತ್ರದ ಚಿತ್ರೀಕರಣ ಬೆಂಗಳೂರು ಮತ್ತು ಹೈದ್ರಾಬಾದ್ನಲ್ಲಿ ನಡೆಯಲಿದೆ
4/ 4
ಈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗುವುದಕ್ಕೆ ಕಾತುರರಾಗಿದ್ದು, ಮುಹೂರ್ತದ ವೇಳೆ ನನ್ನ ಪಾತ್ರ ಪರಿಚಯವಾಗಲಿದೆ ಎಂದು ಪ್ರಭಾಸ್ ತಿಳಿಸಿದ್ದಾರೆ