Pranitha Subhash: ಪ್ರಣೀತಾ ಫೋಟೋಶೂಟ್, ಹಸಿರು ಸೀರೆ ಉಟ್ಟು ಕಾಯ್ತಿರೋದ್ಯಾರಿಗೆ ಎಂದ ಫ್ಯಾನ್ಸ್
Pranitha Subhash: ಪ್ರಣೀತಾ ಸುಭಾಷ್ ಅವರು ಸುಂದರವಾದ ಹಸಿರು ಸೀರೆ ಉಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿಯ ಸುಂದರವಾದ ಫೋಟೋಸ್ ಈಗ ವೈರಲ್ ಆಗಿವೆ.
1/ 8
ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ಬಹಳ ದಿನಗಳ ನಂತರ ಸುಂದರವಾದ ಫೋಟೋಶೂಟ್ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಗ್ರೀನ್ ಕಲರ್ ಸೀರೆ ಉಟ್ಟಿದ್ದರು.
2/ 8
ಹಸಿರು ಸೀರೆಗೆ ಪಿಂಕ್ ಬ್ಲೌಸ್ ಧರಿಸಿದ್ದ ನಟಿ ಎಂದಿನಂತೆಯೇ ಸಿಂಪಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಫೋಟೋಸ್ ಅಭಿಮಾನಿಗಳಿಗೆ ಇಷ್ಟವಾಗಿದೆ.
3/ 8
ಫೋಟೋ ಶೇರ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಗಳು ಬಹಳ ದಿನಗಳ ನಂತರ ಫೋಟೋಸ್ ಶೇರ್ ಮಾಡಿದ್ದಕ್ಕೆ ಥ್ಯಾಂಕ್ಸ್ ಮ್ಯಾಮ್ ಎಂದಿದ್ದಾರೆ.
4/ 8
ನಟಿ ಈ ಸೀರೆ ಉಟ್ಟು ಇಯರಿಂಗ್ಸ್ ಮಾತ್ರ ಧರಿಸಿದ್ದಾರೆ. ಯಾವುದೇ ನೆಕ್ಲೇಸ್ ಅಥವಾ ಹಾರವನ್ನು ಧರಿಸಿಲ್ಲ. ಆದರೂ ನಿರಾಭರಣ ಸುಂದರಿಯಾಗಿ ಹೈಲೈಟ್ ಆಗಿದ್ದಾರೆ.
5/ 8
ಪ್ರಣೀತಾ ಅವರು ಪೋಸ್ಟ್ ಮಾಡಿದ ಫೋಟೋಗಳಿಗೆ 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ಬಹಳಷ್ಟು ಜನರು ಫೋಟೋ ಮೆಚ್ಚಿಕೊಂಡು ಕಮೆಂಟ್ ಮಾಡುತ್ತಿದ್ದಾರೆ.
6/ 8
ನಟಿ ತಮಿಳು, ತೆಲುಗು ಸೇರಿದಂತೆ ಸ್ಯಾಂಡಲ್ವುಡ್ನಲ್ಲಿಯೂ ಹಲವು ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಾಗಾಗಿ ಇವರಿಗೆ ಅಪಾರ ಅಭಿಮಾನಿಗಳಿದ್ದಾರೆ.
7/ 8
ನಟಿ ಸದ್ಯ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದು ಯಾವುದೇ ಪ್ರಾಜೆಕ್ಟ್ ಮಾಡುತ್ತಿಲ್ಲ. ಆದರೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.
8/ 8
ನಟಿ ಸುಂದರವಾದ ಬಿಂದಿಯನ್ನು ಇಟ್ಟು ಮುದ್ದಾದ ನಗುವಿನೊಂದಿಗೆ ಕ್ಯೂಟ್ ಕಾಣಿಸಿದ್ದಾರೆ. ಪ್ರಣೀತಾ ತಮ್ಮ ಮೇಕಪ್ ಸಿಂಪಲ್ ಆಗಿಟ್ಟುಕೊಂಡಿದ್ದರು.
First published: