Pranitha Subhash: ನಟಿ ಪ್ರಣಿತಾ ಸುಭಾಷ್ ಸೀಮಂತ; ಚೆಂದದ ಫೋಟೋಗಳು ವೈರಲ್
ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಕನ್ನಡ ಮಾತ್ರವಲ್ಲದೆ ಕಾಲಿವುಡ್, ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲೂ ಬಣ್ಣ ಹಚ್ಚಿ ಮಿಂಚಿದ್ದಾರೆ. ಸದ್ಯ ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಣಿತಾ ಸುಭಾಷ್ ಉದ್ಯಮಿ ನಿತಿನ್ ರಾಜು ಜೊತೆಗೆ ಮದುವೆಯಾದರು
ಇತ್ತೀಚಿಗಷ್ಟೇ ತಾವು ಪ್ರೆಗ್ನೆಂಟ್ ಎಂಬ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಈಗ ಅದ್ದೂರಿಯಾಗಿ ಸೀಮಂತ ಮಾಡಿಕೊಳ್ಳುವ ಮೂಲಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
2/ 8
ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿದ್ದ ಪ್ರಣಿತಾ ಮದುವೆ ಬಳಿಕ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ್ದರು. ಸದ್ಯ ಈಗ ಮೊದಲ ತುಂಬು ಗರ್ಭಿಣಿಯಾಗಿರುವ ಅವರು ಮೊದಲ ಮಗುವನ್ನು ಕಾಣುವ ಹಂಬಲದಲ್ಲಿದ್ದಾರೆ.
3/ 8
ಇತ್ತೀಚಿಗಷ್ಟೇ ಹಿಂದೂ ಸಂಪ್ರಾದಾಯದಂತೆ ಅದ್ದೂರಿಯಾಗಿ ಸೀಮಂತ ಕಾರ್ಯ ಮಾಡಲಾಗಿದೆ. ನಟಿ ಪ್ರಣಿತಾ ಹಳದಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಸದ್ಯ ಪ್ರಣಿತಾ ತಮ್ಮ ಸೀಮಂತ ಕಾರ್ಯಕ್ರಮದ ಪೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
4/ 8
ಪೋಟೋ ನೋಡಿದ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಸದ್ಯ ನಟಿ ಪ್ರಣಿತಾ ಶೇರ್ ಮಾಡಿದ ಪೋಟೊಗಳು ಆನ್ಲೈನ್ನಲ್ಲಿ ಸಖತ್ ವೈರಲ್ ಆಗುತ್ತಿದೆ.
5/ 8
2010 ರಿಂದಲೂ ಪ್ರಣಿತಾ ಸುಭಾಷ್ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಮೊದಲಿಗೆ ಕನ್ನಡದ 'ಪೊರ್ಕಿ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು,
6/ 8
ಪ್ರಣಿತಾ ಸುಭಾಷ್ ಮೊದಲ ಸಿನಿಮಾ ಭಾರೀ ಸಕ್ಸಸ್ ಕಂಡಿತು. ಇದಾದ ಬಳಿಕ ಪ್ರಣಿತಾಗೆ ಸಾಕಷ್ಟು ಸಿನಿಮಾಗಳ ಆಫರ್ಗಳು ಕೂಡ 2010 ರಿಂದಲೂ ಪ್ರಣಿತಾ ಸುಭಾಷ್ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಮೊದಲಿಗೆ ಕನ್ನಡದ 'ಪೊರ್ಕಿ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು,
7/ 8
ಪರಭಾಷೆಗಳಲ್ಲೂ ನಟಿ ಪ್ರಣಿತಾಗೆ ಬೇಡಿಕೆ ಹೆಚ್ಚಾಯಿತು. ಬಳಿಕ ಅನೇಕ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಕೂಡ ಮಾಡಿಕೊಂಡರು. ಸದ್ಯ ಮದುವೆಯಾದ ಬಳಿಕ ನಟನೆಗೆ ಫುಲ್ ಸ್ಟಾಪ್ ಇಟ್ಟಿದ್ದು, ಕುಟುಂಬದೊಂದಿಗೆ ಸಂತೋಷವಾಗಿದ್ದಾರೆ.
8/ 8
ಸದ್ಯ ಈಗ ತಾಯಿಯಾಗುವ ಖುಷಿಯಲ್ಲಿರುವ ನಟಿ ಪ್ರಣಿತಾ ತಮ್ಮ ಸೀಮಂತದ ಕಾರ್ಯಕ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.