KGF 2: ಅನಂತ್ ​ನಾಗ್​ ಪಾತ್ರಕ್ಕೆ ಪ್ರಕಾಶ್​ ರೈ​: ಸಿಟ್ಟಿಗೆದ್ದ ನೆಟ್ಟಿಗರಿಗೆ ಸ್ಪಷ್ಟನೆ ನೀಡಿದ ಕೆಜಿಎಫ್​ 2 ನಿರ್ದೇಶಕ ಪ್ರಶಾಂತ್​ ನೀಲ್​..!

Prakash Rai-Prashanth Neel: ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಚಿತ್ರ. ನಿನ್ನೆಯಷ್ಟೆ ಪ್ರಕಾಶ್​ ರೈ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ ಅದು ಅನಂತ್​ ನಾಗ್​ ಅವರ ಜಾಗಕ್ಕೆ ಎಂದು ಸುದ್ದಿಯಾಗಿತ್ತು. ಇದರಿಂದ ಸಿಟ್ಟಿಗೆದ್ದ ನೆಟ್ಟಿಗರು ಬಾಯ್ಕಾಟ್​ ಕೆಜಿಎಫ್​ 2 ಎಂದು ಕಮೆಂಟ್​ ಮಾಡುತ್ತಿದ್ದರು. ಸಾಲದಕ್ಕೆ ಪ್ರಕಾಶ್​ ರೈ ಅವರನ್ನು ಸಿನಿಮಾಗೆ ತೆಗೆದುಕೊಳ್ಳಬಾರದಿತ್ತು. ಈ ನಿರ್ಧಾರ ತಪ್ಪು ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಿಟ್ಟು ಹೊರ ಹಾಕಿದ್ದಾರೆ ನೆಟ್ಟಿಗರು. ಈಗ ಪ್ರಶಾಂತ್​ ನೀಲ್​ ತಮ್ಮ ನಿರ್ಧಾರದ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. (ಚಿತ್ರಗಲು ಕೃಪೆ: ಪ್ರಶಾಂತ್ ನೀಲ್​ ಇನ್​ಸ್ಟಾಗ್ರಾಂ ಖಾತೆ)

First published: