Kantara Photos: ಕಾಂತಾರ ಸಿನಿಮಾದ ಫಸ್ಟ್ ಲುಕ್ ಟೆಸ್ಟ್ ಹೇಗಿತ್ತು? ಶಿವ, ಲೀಲಾ ಫೋಟೋ ಶೇರ್ ಮಾಡಿದ ಪ್ರಗತಿ ರಿಷಬ್ ಶೆಟ್ಟಿ
ಕನ್ನಡದ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ. ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ. ಇದೀಗ ಕಾಂತಾರ ಸಿನಿಮಾದ ಫಸ್ಟ್ ಲುಕ್ ಟೆಸ್ಟ್ ಫೋಟೋಗಳನ್ನು ನಟ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಂಚಿಕೊಂಡಿದ್ದಾರೆ.
ದೈವಾರಾಧನೆಯ ಕಥಾಹಂದರ ಇಟ್ಟುಕೊಂಡು ಮಾಡಿದ ಕಾಂತಾರ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಕಾಂತಾರ ಸಿನಿಮಾದ ಫಸ್ಟ್ ಲುಕ್ ಟೆಸ್ಟ್ ಫೋಟೋಗಳನ್ನು ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
2/ 8
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸಹ ಕಾಂತಾರ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜನ ಪತ್ನಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ರು.
3/ 8
ಕಾಂತಾರ ಸಿನಿಮಾದ ಕಾಸ್ಟ್ಯೂಮ್ ಡಿಸೈನರ್ ಆಗಿ ಕೂಡ ಪ್ರಗತಿ ಶೆಟ್ಟಿ ಕೆಲಸ ಮಾಡಿದ್ದಾರೆ.
4/ 8
ಕಾಂತಾರ ಟೀಮ್ಗೆ ಬೆಂಬಲವಾಗಿ ನಿಂತಿದ್ದ ಪ್ರಗತಿ ಶೆಟ್ಟಿ, ಸಿನಿಮಾ ಕೆಲಸಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
5/ 8
ಕಾಂತಾರ ಸಿನಿಮಾ ಶುರು ಮಾಡಿದ ಮೊದಲಿಗೆ ಸಿನಿಮಾದ ಫಸ್ಟ್ ಲುಕ್ ಟೆಸ್ಟ್ ಮಾಡಲಾಗಿತ್ತು. ಈ ಫೋಟೋಗಳನ್ನು ಈಗ ಶೇರ್ ಮಾಡಲಾಗಿದೆ.
6/ 8
ಜುಲೈ 27, 2021ರಲ್ಲಿ ಕಾಂತಾರ ಸಿನಿಮಾಗಾಗಿ ಮಾಡಿದ ಲುಕ್ ಟೆಸ್ಟ್ನಲ್ಲಿ ಶಿವ, ಲೀಲಾ ಪಾತ್ರಧಾರಿಗಳ ಫೋಟೋಶೂಟ್ ಮಾಡಿದ್ರು.
7/ 8
ಶಿವನ ಪಾತ್ರದಲ್ಲಿ ನಟ ರಿಷಬ್ ಶೆಟ್ಟಿ, ಲೀಲಾ ಪಾತ್ರದಲ್ಲಿ ನಟಿ ಸಪ್ತಮಿ ಗೌಡ ತೆರೆಮೇಲೆ ಮ್ಯಾಜಿಕ್ ಮಾಡಿದ್ದರು. ಬೀಡಿ ಬಾಯಲ್ಲಿ ಇಟ್ಟುಕೊಂಡು ರಿಷಬ್ ಖಡಕ್ ಲುಕ್ನಲ್ಲಿ ಪೋಸ್ ಕೊಟ್ಟಿದ್ದಾರೆ.