Prabhas: ಪ್ರಭಾಸ್ ಮುಂದಿನ ಸಿನಿಮಾಗೆ ಝೀರೋ ಪೇಮೆಂಟ್! ಸಂಭಾವನೆ ಬೇಡ ಎಂದ ಬಾಹುಬಲಿ ಸ್ಟಾರ್

Prabhas: ನಟ ಪ್ರಭಾಸ್ ಮುಂದಿನ ಸಿನಿಮಾಗೆ ಸಂಭಾವನೆಯೇ ತೆಗೆದುಕೊಳ್ಳುತ್ತಿಲ್ಲ. ಕಾರಣ ಏನು ಗೊತ್ತಾ?

First published:

  • 18

    Prabhas: ಪ್ರಭಾಸ್ ಮುಂದಿನ ಸಿನಿಮಾಗೆ ಝೀರೋ ಪೇಮೆಂಟ್! ಸಂಭಾವನೆ ಬೇಡ ಎಂದ ಬಾಹುಬಲಿ ಸ್ಟಾರ್

    ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಅವರ ವೃತ್ತಿಜೀವನವು ಸಾಕಷ್ಟು ಏರಿಳಿತಗಳನ್ನು ಹೊಂದಿದೆ. ಬಾಹುಬಲಿ ಹಾಗೂ ‘ಬಾಹುಬಲಿ 2’ ಸಿನಿಮಾಗಳ ಯಶಸ್ಸಿನೊಂದಿಗೆ ಪ್ರಭಾಸ್ ಭರ್ಜರಿ ಜನಪ್ರಿಯತೆಯನ್ನು ಗಳಿಸಿದರು. ಆ ನಂತರ ಅವರು ಮಾಡಿದ ಎಲ್ಲ ಸಿನಿಮಾಗಳ ಬಜೆಟ್ ಹೆಚ್ಚಾಯಿತು.

    MORE
    GALLERIES

  • 28

    Prabhas: ಪ್ರಭಾಸ್ ಮುಂದಿನ ಸಿನಿಮಾಗೆ ಝೀರೋ ಪೇಮೆಂಟ್! ಸಂಭಾವನೆ ಬೇಡ ಎಂದ ಬಾಹುಬಲಿ ಸ್ಟಾರ್

    ಈಗ ಸಿನಿಮಾ ಬಜೆಟ್‌ನಲ್ಲಿ ಪ್ರಭಾಸ್ ಅವರ ಸಂಭಾವನೆಗೆ ಹೆಚ್ಚಿನ ಹಣವನ್ನು ಮೀಸಲಿಡಬೇಕಾಗುತ್ತದೆ. ನೂರಾರು ಕೋಟಿ ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಪ್ರಭಾಸ್ ಕೂಡ ಮುಂಚೂಣಿಯಲ್ಲಿದ್ದಾರೆ.

    MORE
    GALLERIES

  • 38

    Prabhas: ಪ್ರಭಾಸ್ ಮುಂದಿನ ಸಿನಿಮಾಗೆ ಝೀರೋ ಪೇಮೆಂಟ್! ಸಂಭಾವನೆ ಬೇಡ ಎಂದ ಬಾಹುಬಲಿ ಸ್ಟಾರ್

    ಈಗ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ತಮ್ಮ ಮುಂದಿನ ಚಿತ್ರಕ್ಕೆ ಒಂದು ರೂಪಾಯಿ ಕೂಡ ಸಂಭಾವನೆ ತೆಗೆದುಕೊಳ್ಳುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾರೆ ಪ್ರಭಾಸ್.

    MORE
    GALLERIES

  • 48

    Prabhas: ಪ್ರಭಾಸ್ ಮುಂದಿನ ಸಿನಿಮಾಗೆ ಝೀರೋ ಪೇಮೆಂಟ್! ಸಂಭಾವನೆ ಬೇಡ ಎಂದ ಬಾಹುಬಲಿ ಸ್ಟಾರ್

    ನಿರ್ದೇಶಕ ಮಾರುತಿ ಜೊತೆ ಪ್ರಭಾಸ್ ಕೈ ಜೋಡಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ತಯಾರಾಗಲಿರುವ ಚಿತ್ರಕ್ಕೆ ತಾತ್ಕಾಲಿಕವಾಗಿ 'ರಾಜಾ ಡಿಲಕ್ಸ್' ಎಂದು ಹೆಸರಿಡಲಾಗಿದೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಶುರುವಾಗಿದೆ. ಈ ಚಿತ್ರದಲ್ಲಿ ನಟಿಸುತ್ತಿರುವ ಪ್ರಭಾಸ್ ಸಂಭಾವನೆ ಪಡೆಯಲು ನಿರಾಕರಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅವರು ಈ ಸಿನಿಮಾದಲ್ಲಿ ಅವರು ಉಚಿತವಾಗಿ ನಟಿಸುತ್ತಿಲ್ಲ. ಅವರ ತಂತ್ರ ಬೇರೆ.

    MORE
    GALLERIES

  • 58

    Prabhas: ಪ್ರಭಾಸ್ ಮುಂದಿನ ಸಿನಿಮಾಗೆ ಝೀರೋ ಪೇಮೆಂಟ್! ಸಂಭಾವನೆ ಬೇಡ ಎಂದ ಬಾಹುಬಲಿ ಸ್ಟಾರ್

    ಪ್ರಭಾಸ್ ಅವರ ಹಿಂದಿನ ಚಿತ್ರಗಳಾದ 'ಸಾಹೋ' ಮತ್ತು 'ರಾಧೆ ಶ್ಯಾಮ್' ನಿರೀಕ್ಷೆಯಷ್ಟು ಹಣವನ್ನು ಗಳಿಸಲಿಲ್ಲ. ಆದರೆ ಆ ಚಿತ್ರಗಳಿಗೆ ಪ್ರಭಾಸ್ ಭಾರೀ ಸಂಭಾವನೆ ಪಡೆದಿದ್ದರು. ಆದರೆ ಈ ಬಾರಿ ಅವರು ತಮ್ಮ ಟೆಕ್ನಿಕ್ ಬದಲಾಯಿಸಿದ್ದಾರೆ.

    MORE
    GALLERIES

  • 68

    Prabhas: ಪ್ರಭಾಸ್ ಮುಂದಿನ ಸಿನಿಮಾಗೆ ಝೀರೋ ಪೇಮೆಂಟ್! ಸಂಭಾವನೆ ಬೇಡ ಎಂದ ಬಾಹುಬಲಿ ಸ್ಟಾರ್

    ‘ರಾಜಾ ಡಿಲಕ್ಸ್’ ಚಿತ್ರಕ್ಕೆ ಸಂಭಾವನೆ ಪಡೆಯುವ ಬದಲು ಅದೇ ಮೊತ್ತವನ್ನು ಬಂಡವಾಳವಾಗಿ ಪರಿಗಣಿಸಿ ಚಿತ್ರದ ಲಾಭದಲ್ಲಿ ಪಾಲು ಪಡೆಯಲು ಪ್ರಭಾಸ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

    MORE
    GALLERIES

  • 78

    Prabhas: ಪ್ರಭಾಸ್ ಮುಂದಿನ ಸಿನಿಮಾಗೆ ಝೀರೋ ಪೇಮೆಂಟ್! ಸಂಭಾವನೆ ಬೇಡ ಎಂದ ಬಾಹುಬಲಿ ಸ್ಟಾರ್

    ಪ್ರಭಾಸ್ ಈ ನಿರ್ಧಾರ ಮಾಡಿದರೆ ಚಿತ್ರದ ಯಶಸ್ಸು ಮತ್ತು ವೈಫಲ್ಯದ ಜವಾಬ್ದಾರಿಯೂ ಅವರ ಮೇಲೆ ಬೀಳುತ್ತದೆ. ಒಂದು ವೇಳೆ ಸಿನಿಮಾ ಸೂಪರ್ ಹಿಟ್ ಆದರೆ ಪ್ರಭಾಸ್ ನಿರೀಕ್ಷೆಗಿಂತ ಹೆಚ್ಚು ಹಣ ಪಡೆಯಲಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

    MORE
    GALLERIES

  • 88

    Prabhas: ಪ್ರಭಾಸ್ ಮುಂದಿನ ಸಿನಿಮಾಗೆ ಝೀರೋ ಪೇಮೆಂಟ್! ಸಂಭಾವನೆ ಬೇಡ ಎಂದ ಬಾಹುಬಲಿ ಸ್ಟಾರ್

    ಪ್ರಭಾಸ್ ಬಹು ನಿರೀಕ್ಷಿತ ‘ಆದಿಪುರುಷ್’ ಮತ್ತು ‘ಸಾಲಾರ್’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಆದಿಪುರುಷ್’ ಚಿತ್ರವನ್ನು ಓಂ ರಾವತ್ ನಿರ್ದೇಶಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಲಾರ್ ಮೂಡಿಬರುತ್ತಿದೆ.

    MORE
    GALLERIES