Prabhas-Kriti Sanon: ಪ್ರಭಾಸ್ ಜೊತೆ ಎಂಗೇಜ್ಮೆಂಟ್? ಕೃತಿ ಸನೋನ್ ಹೇಳಿದ್ದೇನು?
Prabhas : ಪ್ರಭಾಸ್ ಆದಿಪುರುಷ, ಸಲಾರ್, ಪ್ರಾಜೆಕ್ಟ್ ಕೆ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇವುಗಳ ಜೊತೆಗೆ ಪ್ರಭಾಸ್ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ವೇಳೆ ಆದಿಪುರುಷ್ ನಾಯಕಿ ಕೃತಿ ಸನೋನ್ ಪ್ರಭಾಸ್ ಅವರನ್ನು ಲವ್ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಟಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್. ಪ್ರಭಾಸ್ ಮತ್ತು ಅನುಷ್ಕಾ ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
2/ 7
ಈಗ ಮತ್ತೊಂದು ಕುತೂಹಲಕಾರಿ ವದಂತಿ ವೈರಲ್ ಆಗಿದೆ ಎಂದು ತಿಳಿದಿದೆ. ಪ್ರಭಾಸ್ ಆದಿಪುರುಷ ನಾಯಕಿ ಕೃತಿ ಸನೋನ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬುದು ಲೇಟೆಸ್ಟ್ ಟಾಕ್. ಈ ಸುದ್ದಿ ಟಾಲಿವುಡ್ಗಿಂತ ಬಾಲಿವುಡ್ನಲ್ಲಿ ಸದ್ದು ಮಾಡುತ್ತಿದೆ.
3/ 7
ಬಾಲಿವುಡ್ ಹೀರೋ ವರುಣ್ ಧವನ್ ತಮ್ಮ 'ವುಲ್ಫ್' ಪ್ರಚಾರದಲ್ಲಿದ್ದಾರೆ. ಕೃತಿ ಮನಸ್ಸಿನಲ್ಲಿ ಒಬ್ಬ ಹೀರೋ ಇದ್ದು ಈತ ಮುಂಬೈನಲ್ಲಿ ಇಲ್ಲ. ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್ ಮಾಡುತ್ತಿದ್ದಾನೆ ಎಂದು ಬಾಂಬ್ ಸಿಡಿಸಿದ್ದಾರೆ.
4/ 7
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಇತ್ತೀಚೆಗೆ ಕೃತಿ ಸನೋನ್ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ.
5/ 7
ನಟಿ ಕೃತಿ ಸನೋನ್ ಅವರು ಪ್ರಭಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ.
6/ 7
ತನ್ನ ಪೋಸ್ಟ್ನಲ್ಲಿ ಅಂತಹದ್ದೇನೂ ಇಲ್ಲ. ಆಧಾರ ರಹಿತ ವದಂತಿಗಳನ್ನು ನಂಬಬೇಡಿ. ತನ್ನ ಮದುವೆ ನಿಶ್ಚಯವಾಗಿದೆ ಎಂಬ ಸುದ್ದಿ ಕೇವಲ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.
7/ 7
ಕೃತಿ ಸನೋನ್ ಅವರು ತಮ್ಮ ಮದುವೆ ಸುದ್ದಿಯನ್ನು ಸುಳ್ಳು ಎಂದು ಹೇಳಿದ್ದು ಅಂತೂ ಈ ಒಂದು ವದಂತಿಗೆ ತೆರೆ ಬಿದ್ದ ಹಾಗಾಗಿದೆ.