ಕೆಜಿಎಫ್ ನಂತಹ ಅದ್ಧೂರಿ ಸಿನಿಮಾದ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಬರೆದಿದ್ದ ಪ್ರಶಾಂತ್ ನೀಲ್ ಈಗ ಪ್ರಭಾಸ್ ಸಾಲಾರ್ ಸಿನಿಮಾದ ಮೂಲಕ ಆ ಸೀನ್ ರಿಪೀಟ್ ಮಾಡುವ ಪ್ಲಾನ್ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಪ್ರಭಾಸ್ ಕೂಡ ಹೊಸ ಮೇಕ್ ಓವರ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಚಿತ್ರದ ಸೆಟ್‌ನಿಂದ ಚಿತ್ರವೊಂದು ಹೊರಬಿದ್ದಿದ್ದು, ಸದ್ದು ಮಾಡುತ್ತಿದೆ.