ಹಲವು ವರ್ಷಗಳಿಂದ ಪ್ರಭಾಸ್ ಮದುವೆ ಮತ್ತು ಡೇಟಿಂಗ್ ಸುದ್ದಿ ಚರ್ಚೆಯಲ್ಲಿದೆ. ಪ್ರಭಾಸ್ ಹೆಸರು ಅನುಷ್ಕಾ ಶೆಟ್ಟಿಯೊಂದಿಗೆ ಕೇಳಿ ಬಂದಿತ್ತು, ಅವರು ನಿಜ ಜೀವನದಲ್ಲಿಯೂ ಪರಸ್ಪರ ಉತ್ತಮ ಸ್ನೇಹಿತರಾಗಿದ್ದಾರೆ. ಅದೇ ಸಮಯದಲ್ಲಿ, ಕಳೆದ ಹಲವಾರು ದಿನಗಳಿಂದ ಅವರು ಕೃತಿ ಸನೋನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಆದರೆ ನಟಿ ಇದು ಕೇವಲ ವದಂತಿ ಎಂದು ಹೇಳಿದ್ದಾರೆ. ಕೃತಿ ಪ್ರಭಾಸ್ ಹೃದಯದಲ್ಲಿ ನೆಲೆಸಿದ್ದಾಳೆ ಎಂದು ವರುಣ್ ಧವನ್ ಹೇಳಿದ್ದಾರೆ. ಇತ್ತೀಚೆಗೆ ಸಂಭಾಷಣೆಯಲ್ಲಿ ಪ್ರಭಾಸ್ ತಮ್ಮ ಮದುವೆಯ ಯೋಜನೆ ಬಗ್ಗೆ ಮಾತನಾಡಿದ್ದಾರೆ.
ಅನ್ಸ್ಟಾಪಬಲ್ ವಿತ್ ಎನ್ಬಿಕೆ 2 ಚಾಟ್ ಶೋನಲ್ಲಿ, ಬಾಲಯ್ಯ ಅವರು ಪ್ರಭಾಸ್ ಅವರ ಮದುವೆಯ ಪ್ಲಾನ್ಗಳ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಾಹುಬಲಿ ಸ್ಟಾರ್ ಅವರು ಮದುವೆಯಾಗಲು ಪ್ಲಾನ್ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ ಅದು ಯಾವಾಗ ಸಂಭವಿಸುತ್ತದೆ ಎಂಬುದರ ಬಗ್ಗೆ ಯಾವುದೇ ಖಚಿತ ಐಡಿಯಾ ಇಲ್ಲ ಎಂದು ಹೇಳಿದ್ದಾರೆ. ಮದುವೆಗಾಗಿ ತಮ್ಮ ಕುಟುಂಬದಿಂದ ಬರುವ ಒತ್ತಡವನ್ನು ನಿಭಾಯಿಸುವ ಬಗ್ಗೆಯೂ ಮಾತನಾಡಿದ್ದಾರೆ.