Spirit: ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕನ ಜೊತೆ 25ನೇ ಸಿನಿಮಾ ಪ್ರಕಟಿಸಿದ Prabhas
ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನ್ಯಾಷನಲ್ ಸ್ಟಾರ್ ಪ್ರಭಾಸ್ (Prabhas) ತಮ್ಮ 25ನೇ ಸಿನಿಮಾ ಪ್ರಕಟಿಸಿದ್ದಾರೆ. ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗ (Sandeep Reddy Vanga) ಜತೆಗಿನ ಈ ಸಿನಿಮಾಗೆ ಸ್ಪಿರಿಟ್ (Spirit) ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. (ಚಿತ್ರಗಳು ಕೃಪೆ: ಪ್ರಭಾಸ್ ಇನ್ಸ್ಟಾಗ್ರಾಂ ಖಾತೆ)
ಬಾಹುಬಲಿ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ನಟ ಪ್ರಭಾಸ್ ಅವರು ಈಗಾಗಲೇ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಪ್ರಭಾಸ್ ಅವರ 25ನೇ ಸಿನಿಮಾ ಕುರಿತಾಗಿ ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು.
2/ 7
ಈ ಪ್ರಭಾಸ್ ಅವರ 25ನೇ ಸಿನಿಮಾ ಕುರಿತಾಗಿ ಅಧಿಕೃತ ಪ್ರಕಟಣೆ ಹೊರ ಬಿದ್ದಿದೆ. ಅರ್ಜುನ್ ರೆಡ್ಡಿಯಂತಹ ಸಿನಿಮಾ ಕೊಟ್ಟ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರ ಜೊತೆ ಪ್ರಭಾಸ್ ಕೆಲಸ ಮಾಡುತ್ತಿದ್ದಾರೆ.
3/ 7
ಪ್ರಭಾಸ್ ಅವರ 25ನೇ ಸಿನಿಮಾಗೆ ಸ್ಪಿರಿಟ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿದ್ದು, ಅದರ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. ಈ ಸಿನಿಮಾವನ್ನು ಟಿ -ಸಿರೀಸ್ನ ಭೂಷನ್ ಕುಮಾರ್ ಹಾಗೂ ಭದ್ರಕಾಳಿ ಪಿಕ್ಷರ್ಸ್ ಬ್ಯಾನರ್ ಅವರ ಸಹಯೋಗದಲ್ಲಿ ನಿರ್ಮಿಸಲಾಗುತ್ತಿದೆ.
4/ 7
ಸಂದೀಪ್ ರೆಡ್ಡಿ ಅವರ ವಿಷಯಕ್ಕೆ ಬಂದರೆ, ತೆಲುಗಿನ ಅರ್ಜುನ್ ರೆಡ್ಡಿ ಹಿಟ್ ಆದ ನಂತರ ಅದನ್ನೇ ಹಿಂದಿಯಲ್ಲಿ ಕಬೀರ ಸಿಂಗ್ ಹೆಸರಿನಲ್ಲಿ ಅವರೇ ನಿರ್ದೇಶನ ಮಾಡಿದರು. ಅದೂ ಸಹ ಬಾಕ್ಸಾಫಿಸ್ನಲ್ಲಿ ಸಖತ್ ಸದ್ದು ಮಾಡಿತ್ತು. ಇದರಲ್ಲಿ ಶಾಹಿದ್ ಕಪೂರ್ ನಾಯಕನಾಗಿದ್ದರು.
5/ 7
ಪ್ರಭಾಸ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದದಾರೆ. ಮೊದಲಿಗೆ ರಾಧಾಕೃಷ್ಣ ಕುಮಾರ್ ಅವರ ನಿರ್ದೇಶನದ ರಾಧೆ ಶ್ಯಾಮ್ ರಿಲೀಸ್ಗೆ ಸಜ್ಜಾಗುತ್ತಿದೆ. ಇದೂ ಸಹ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಪೂಜಾ ಹೆಗ್ಡೆ ಈ ಚಿತ್ರದ ನಾಯಕಿ.
6/ 7
ಬಾಲಿವುಡ್ನಲ್ಲಿ ತಾನಾಜಿ ಸಿನಿಮಾದಂತಹ ಹಿಟ್ ಚಿತ್ರ ಕೊಟ್ಟ ನಿರ್ದೇಶಕ ಓಂ ರಾವತ್ ಅವರ ಜತೆ ಪ್ರಭಾಸ್ ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ನಟಿಸುತ್ತಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಹಾಗೂ ರಾವಣನಾಗಿ ಸೈಫ್ ಅಲಿ ಖಾನ್ ಅಭಿನಯಿಸುತ್ತಿದ್ದು, ಇದು ಇನ್ನೂ ಚಿತ್ರೀಕರಣದ ಹಂತದಲ್ಲಿದೆ.
7/ 7
ಇವುಗಳ ಜೊತೆ ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ನಲ್ಲೂ ಪ್ರಭಾಸ್ ನಾಯಕನಾಗಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿರುವ ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇನ ಮಾಡುತ್ತಿದ್ದಾರೆ. ಇದರ ಜತೆಗೆ ದೀಪಿಕಾ ಪಡುಕೋಣೆ ಹಾಗೂ ಅಮಿತಾಭ್ ಬಚ್ಚನ್ ಅವರ ಜತೆ ಇನ್ನೂ ಹೆಸರಿಡದ ಪ್ಯಾನ್ ಇಂಡಿಯಾ ಸಿನಿಮಾಗೂ ಸಹಿ ಮಾಡಿದ್ದಾರೆ ಡಾರ್ಲಿಂಗ್.