Prabhas-Adipurush: ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಆದಿಪುರುಷ್ ರಿಲೀಸ್ ಡೇಟ್ ಫಿಕ್ಸ್! ಅಧಿಕೃತ ಘೋಷಣೆ
Prabhas -Adipurush Release Date: ಪ್ರಭಾಸ್ ಆದಿಪುರುಷ್ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯ ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ. ಇದೀಗ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.
ಸಾಹೋ ಮತ್ತು ರಾಧೇಶ್ಯಾಮ್ ನಂತರ ಪ್ರಭಾಸ್ ಆದಿಪುರುಷ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆಯಾದ ನಂತರ ಆದಿಪುರುಷ್ ತಂಡಕ್ಕೆ ಅಭಿಮಾನಿಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಈ ಸಿನಿಮಾದ ಸಂಪೂರ್ಣ ಗ್ರಾಫಿಕ್ಸ್ ವರ್ಕ್ ಬದಲಾಗಲಿದೆಯಂತೆ.
2/ 8
ಹೀಗಾಗಿ ಸಿನಿಮಾವನ್ನು ಜೂನ್ 16ಕ್ಕೆ ರಿಲೀಸ್ ಮಾಡಲಾಗುತ್ತದೆ ಎಂದು ಚಿತ್ರದ ನಿರ್ದೇಶಕ ಓಂ ರಾವುತ್ ಅಧಿಕೃತವಾಗಿ ಘೋಷಿಸಿದ್ದಾರೆ.
3/ 8
ಈ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ. ಜೂನ್ 16 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಉತ್ತಮ ಗ್ರಾಫಿಕ್ಸ್ಗಾಗಿ ಸುಮಾರು 100-150 ಕೋಟಿ ಖರ್ಚು ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
4/ 8
ಜೂನ್ 16ಕ್ಕೆ ‘ಆದಿಪುರುಷ್’ ಸಿನಿಮಾ ರಿಲೀಸ್ ಆಗುವುದು ಅನುಮಾನ ಎಂದು ಇತ್ತೀಚೆಗೆ ಕೆಲವರು ಗಾಸಿಪ್ ಹಬ್ಬಿಸಿದ್ದರು. ಈ ಅದು ಪ್ರಭಾಸ್ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿತ್ತು. ಆದರೆ ಈಗ ಸ್ವತಃ ಚಿತ್ರತಂಡವೇ ಎಲ್ಲ ಗಾಸಿಪ್ಗಳಿಗೆ ತೆರೆ ಎಳೆದಿದೆ.
5/ 8
ನಿರ್ದೇಶಕ ಓಂ ರಾವತ್ ಅವರು ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಇನ್ನು 150 ದಿನ ಬಾಕಿ ಇದೆ ಎಂದು ಈ ಪೋಸ್ಟರ್ನಲ್ಲಿ ಬರೆದಿದ್ದಾರೆ.
6/ 8
ಪ್ರಭಾಸ್ ಅಭಿಮಾನಿಗಳ ಬಳಗದಲ್ಲಿ ಈ ಪೋಸ್ಟರ್ ವೈರಲ್ ಆಗಿದೆ. ಈ ಸಿನಿಮಾ ಬಗ್ಗೆ ಕಾಯುತ್ತಿರುವುದಾಗಿ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
7/ 8
ರಾವಣನ ಪಾತ್ರವನ್ನು ಸೈಫ್ ಅಲಿ ಖಾನ್ ಮಾಡುತ್ತಿದ್ದಾರೆ. ಈ ಹಿಂದೆ ಬಿಡುಗಡೆ ಆಗಿದ್ದ ಟೀಸರ್ನಲ್ಲಿ ರಾವಣನ ಲುಕ್ ನೋಡಿ ನೆಟ್ಟಿಗರು ಟೀಕೆ ಸಹ ಮಾಡಿದ್ರು.
8/ 8
ರಾಮಾಯಣದ ಕಥೆಯನ್ನು ಇಟ್ಟುಕೊಂಡು ‘ಆದಿಪುರುಷ್’ ಸಿನಿಮಾ ಮಾಡಲಾಗುತ್ತಿದೆ. ರಾಮನ ಪಾತ್ರವನ್ನು ಪ್ರಭಾಸ್ ಮಾಡುತ್ತಿದ್ದರೆ, ಸೀತೆಯಾಗಿ ಕೃತಿ ಸನೋನ್ ನಟಿಸುತ್ತಿದ್ದಾರೆ.