ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಾಲ್ಯದಲ್ಲಿಯೇ ಸ್ಟಾರ್ ಆದವರು. ಅಪ್ಪು ಅಭಿನಯದ ಬೆಟ್ಟದ ಹೂ ಚಿತ್ರ ಈಗಲೂ ಎಲ್ಲ ಮಕ್ಕಳ ಫೇವರಿಟ್ ಸಿನಿಮಾ ಆಗಿದೆ. ಪುಟ್ಟ ಮಕ್ಕಳು ಈಗಲೂ ಈ ಚಿತ್ರವನ್ನ ಇಷ್ಟ ಪಡ್ತಾರೆ. ಅತ್ಯುತ್ತಮ ಬಾಲ ನಟ ರಾಷ್ಟ್ರ ಪ್ರಶಸ್ತಿಯನ್ನ ಕೂಡ ಪುನೀತ್ ಈ ಚಿತ್ರಕ್ಕಾಗಿಯೇ ಪಡೆದುಕೊಂಡಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಈ ಚಿತ್ರವನ್ನ ನಿರ್ಮಿಸಿದ್ದರು. ಎನ್. ಲಕ್ಷ್ಮೀ ನಾರಾಯಣ್ ಡೈರೆಕ್ಟ್ ಮಾಡಿದ್ದರು.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇನ್ನೂ ಒಂದು ವಿಷಯದಲ್ಲಿ ಲಕ್ಕಿ ಅಗಿದ್ದರು. ಬಾಲ ನಟರಾಗಿ ಬಂದ ಕಲಾವಿದರು ಹೀರೋ ಆಗಿ ಮಿಂಚವಲ್ಲಿ ಸೋತಿದ್ದರು. ಅಪ್ಪು ವಿಷಯದಲ್ಲಿ ಅದು ಸುಳ್ಳಾಯಿತು. ಅಪ್ಪು ಹೆಸರಿನಲ್ಲಿಯೇ ಪುನೀತ್ ಬೆಳ್ಳಿ ತೆರೆಗೆ ಹೀರೋ ಆಗಿ ಬಂದ್ರು. 26 April 2002 ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್ ಹಿಟ್ ಆಯಿತು. ಕನ್ನಡಕ್ಕೆ ಈ ಮೂಲಕ ಪವರ್ ಸ್ಟಾರ್ ಎಂಟ್ರಿ ಆಗಿತ್ತು. ಪೂರಿ ಜಗನ್ನಾಥ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು.
ಪವರ್ ಸ್ಟಾರ್ ಅಪ್ಪು ಅಭಿನಯದ ಮಿಲನ ಚಿತ್ರ ಸೂಪರ್ ಹಿಟ್ ಚಿತ್ರಗಳ ಸಾಲಿನಲ್ಲಿಯೇ ಇದೆ. ಎಲ್ಲ ಕಾಲಕ್ಕೂ ಎಲ್ಲರಿಗೂ ಇಷ್ಟ ಆಗೋ ಕಂಟೆಂಟ್ ಈ ಚಿತ್ರದಲ್ಲಿತ್ತು. ಡೈರೆಕ್ಟರ್ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಅದ್ಭುತ ಹಾಡುಗಳೂ ಇದ್ದವು. ಮನೋ ಮೂರ್ತಿ ಅವರ ಸಂಗೀತದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. 365 ದಿನಗಳವರೆಗೂ ಓಡಿತ್ತು. ಪಾರ್ವತಿ ಮೆನನ್ ಈ ಚಿತ್ರದಲ್ಲಿ ಅಪ್ಪುಗೆ ಜೋಡಿ ಆಗಿದ್ದರು.