Puneeth Rajkumar : ಧಾರವಾಡದ ಐತಿಹಾಸಿಕ ನುಗ್ಗಿಕೇರಿ ಆಂಜನೇಯನ ದರ್ಶನ ಪಡೆದ ಪವರ್ ಸ್ಟಾರ್ ಪುನೀತ್ ದಂಪತಿ
ಧಾರವಾಡದ ಐತಿಹಾಸಿಕ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಹೆಂಡತಿ ಅಶ್ವಿನಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಎರಡು ದಿನಗಳ ಹಿಂದೆ ಪುನೀತ್ ರಾಜಕುಮಾರ ದಾಂಡೇಲಿಗೆ ಬಂದಿದ್ದರು. ಮರಳಿ ಹೋಗುವಾಗ ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇವಸ್ಥಾನದ ವತಿಯಿಂದ ಪುನೀತ್ ರಾಜ್ಕುಮಾರ್ ಅವರನ್ನು ಸನ್ಮಾನಿಸಲಾಯಿತು