Pooja Hegde-Rashmika Mandanna: ಸೌತ್ ಟು ನಾರ್ತ್ ಸಿನಿಲೋಕದಲ್ಲಿ ಮಿಂಚುತ್ತಿರುವ ಕನ್ನಡತಿಯರಿವರು
Pooja Hegde To Rashmika Mandanna -Sandalwood Heroines : ಕನ್ನಡದ ನಟಿಯರು ವಿಭಿನ್ನ. ಕನ್ನಡದ ಚೆಲುವೆಯರು ಸೌತ್ ಟು ನಾರ್ತ್ ಇಂಡಿಯನ್ ಸಿನಿಮಾದಲ್ಲಿ ಸಖತ್ ಸುದ್ದಿ ಮಾಡುತ್ತಿದ್ದಾರೆ. ಪೂಜಾ ಹೆಗಡೆಯಿಂದ ಹಿಡಿದು ರಶ್ಮಿಕಾ ಮಂದಣ್ಣ, ಐಶ್ವರ್ಯ ರೈ ಬಚ್ಚನ್ ಮತ್ತು ದೀಪಿಕಾ ಪಡುಕೋಣೆವರೆಗೆ ಎಲ್ಲರೂ ಕರ್ನಾಟಕದ ಮಂಗಳೂರು ಭಾಗದವರು.
ತೆಲುಗು ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ನಟಿಯರಲ್ಲಿ ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖರು. ಇವರಿಬ್ಬರೂ ಕರ್ತಾಟಕದವರು ಎಂಬುದು ಗಮನಾರ್ಹ. ಅವರೂ ಮಂಗಳೂರು ಭಾಗದವರೇ ಆಗಿದ್ದು, ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಫೇಮಸ್ ಆಗಿದ್ದಾರೆ.
2/ 13
ಸೌತ್ ಚಿತ್ರಗಳ ಮೂಲಕ ಪಾದಾರ್ಪಣೆ ಮಾಡಿದ ಪೂಜಾ ಹೆಗ್ಡೆ, ಹೃತಿಕ್ ರೋಷನ್ ಅಭಿನಯದ 'ಮೊಹಂಜೋದಾರೋ' ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟರು. ಈ ವರ್ಷ ಪೂಜಾ ಹೆಗ್ಡೆ ಅಭಿನಯದ ಎರಡು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗಳಾದ 'ರಾಧೆ ಶ್ಯಾಮ್' ಮತ್ತು 'ಬೀಸ್ಟ್' ರಿಲೀಸ್ ಆಯಿತು.
3/ 13
ರಶ್ಮಿಕಾ ಮಂದಣ್ಣ ಅವರು ತಮ್ಮ ಖಾಸಗಿ ಆಲ್ಬಂ 'ಟಾಪ್ ಟಕ್ಕರ್' ಮೂಲಕ ಬಾಲಿವುಡ್ ಪ್ರೇಕ್ಷಕರ ಗಮನಸೆಳೆದರು. ಅವರು Instagram ನಲ್ಲಿ 36 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
4/ 13
ಉಪ್ಪೇನ ಚಿತ್ರದ ಮೂಲಕ ಟಅಲಿವುಡ್ಗೆ ಪಾದಾರ್ಪಣೆ ಮಾಡಿದ ಕೃತಿ ಶೆಟ್ಟಿ, ನಂತರ ಶ್ಯಾಮ್ ಸಿಂಹರಾಯ್ ಮೂಲಕ ಬ್ಯಾಕ್-ಟು-ಬ್ಯಾಕ್ ಹಿಟ್ಗಳೊಂದಿಗೆ ಗೋಲ್ಡನ್ ಲೆಗ್ ಎಂದು ಗುರುತಿಸಿಕೊಂಡರು. ಇವರೂ ಕನ್ನಡತಿಯೇ. ಆದರೆ ಅವರ ಕುಟುಂಬ ಮುಂಬೈನಲ್ಲಿ ನೆಲೆಸಿದೆ.
5/ 13
ಪುರಿ ಜಗನ್ನಾಥ್ ನಿರ್ದೇಶನದ ಮೆಹಬೂಬಾ ಚಿತ್ರದ ಮೂಲಕ ಟಾಲಿವುಡ್ಗೆ ಪಾದಾರ್ಪಣೆ ಮಾಡಿದ ನೇಹಾ ಶೆಟ್ಟಿ 'ಡಿಜೆ ಟಿಲ್ಲು' ಸಿನಿಮಾದ ಮೂಲಕ ರಾತ್ರೋರಾತ್ರಿ ಸ್ಟಾರ್ ಸ್ಟೇಟಸ್ ಪಡೆದುಕೊಂಡಿದ್ದಾರೆ. ಇವರೂ ಕೂಡಾ ಕರ್ನಾಟಕದ ಮಂಗಳೂರಿನವರು ಎಂಬುದು ಗಮನಾರ್ಹ.
6/ 13
ನಭಾ ನಟೇಶ್ ತಮ್ಮ ವೃತ್ತಿ ಜೀವನದಲ್ಲಿ ಸ್ಮಾರ್ಟ್ ಶಂಕರ್ ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದರು. ನಟಿ ಸುಂದರಿಯಾಗಿದ್ದರೂ ಕ್ರೇಜ್ ಯಾಕೆ ಸಿಗಲಿಲ್ಲ. ಆದರೆ ಪೂರಿ ಜಗನ್ನಾಥ್ ನಿರ್ದೇಶನದ ಮತ್ತು ರಾಮ್ ಪೋತಿನೇನಿ ನಾಯಕನಾಗಿ ನಟಿಸಿದ 'ಇಸ್ಮಾರ್ಟ್ ಶಂಕರ್' ಚಿತ್ರದೊಂದಿಗೆ ರಾತ್ರೋರಾತ್ರಿ ಕ್ರೇಜ್ ಸಿಕ್ಕಿತು. ಆಕೆಯ ಹುಟ್ಟೂರು ಕರ್ನಾಟಕದ ಶೃಂಗೇರಿ.
7/ 13
ಶ್ರೀಲೀಲಾ ಒಂದೇ ಒಂದು ಸಿನಿಮಾದಿಂದ ಒಳ್ಳೆಯ ಜನಪ್ರಿಯತೆ ಪಡೆದರು. ಅವರು ಪ್ರಸ್ತುತ ರವಿತೇಜ ಅವರೊಂದಿಗೆ ಧಮಾಕಾ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಅವರು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರು.
8/ 13
ಅನುಷ್ಕಾ ಶೆಟ್ಟಿ ಕೂಡ ಬಾಹುಬಲಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ನಟಿಯ ಊರು ಕರ್ನಾಟಕದ ಮಂಗಳೂರು ಎಂಬುದು ಗಮನಾರ್ಹ.
9/ 13
ಪ್ರಣೀತಾ ಸುಭಾಷ್ "ಎಂ ಪಿಲ್ಲೋ.. ಎಂ ಪಿಲ್ಲಾಡೋ" ಚಿತ್ರದ ಮೂಲಕ ಟಾಲಿವುಡ್ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಸೌತತ್ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್ ನಟಿ ಈಕೆ. ಇವರ ಊರು ಕೂಡ ಬೆಂಗಳೂರು ಎಂಬುದು ವಿಶೇಷ.
10/ 13
ಸಪ್ತಮಿ ಗೌಡ ಅವರು ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರದ ಮೂಲಕ ಜನಪ್ರಿಯರಾದರು. ತೆಲುಗು ಮತ್ತು ಹಿಂದಿಯಲ್ಲಿ ಆಕೆಗೆ ಅವಕಾಶಗಳು ಬರುತ್ತಿವೆ. ನಟಿ ಇನ್ನು ಕಾಳಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
11/ 13
ದೀಪಿಕಾ ಪಡುಕೋಣೆ ಸಿಂಗ್ ಬಾಲಿವುಡ್ ನಲ್ಲಿ ನಂಬರ್ ವನ್ ನಾಯಕಿ. ಮದುವೆಯ ನಂತರವೂ ಸಿನಿಮಾ ವಿಚಾರದಲ್ಲಿ ಟಾಪ್ ಆಯ್ಕೆಯಾಗಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಇವರು ಕೂಡಾ ಕರ್ನಾಟಕದ ಮಂಗಳೂರಿನವರು.
12/ 13
ಮಣಿರತ್ನಂ ನಿರ್ದೇಶನದ ‘ಇರುವರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ವಿಶ್ವ ಸುಂದರಿಯಾಗಿ ಆಯ್ಕೆಯಾದರು. ಅವರೂ ಕರ್ನಾಟಕದ ಮಂಗಳೂರಿನವರು.
13/ 13
ಮಣಿರತ್ನಂ ನಿರ್ದೇಶನದ ‘ಇರುವರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ವಿಶ್ವ ಸುಂದರಿಯಾಗಿ ಆಯ್ಕೆಯಾದರು. ಅವರೂ ಕರ್ನಾಟಕದ ಮಂಗಳೂರಿನವರು.