Pooja Hegde: ಲಾಕ್ಡೌನ್ನಲ್ಲಿ ಅಜ್ಜಿ ಜತೆ ಕಾಲ ಕಳೆದ ಕರಾವಳಿ ಸುಂದರಿ ಪೂಜಾ ಹೆಗ್ಡೆ ಕೊರೋನಾ ಲಾಕ್ಡೌನ್ನಿಂದಾಗಿ ಸಾಕಷ್ಟು ಮಂದಿಗೆ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿದೆ. ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಪೂಜಾ ಹೆಗ್ಡೆ ಸಹ ಸಮಯ ಸಿಕ್ಕಾಗಲೆಲ್ಲ ಮನೆ ಹೋಗಿ ಇರುತ್ತಾರೆ. ಈ ಸಲದ ಲಾಕ್ಡೌನ್ನಲ್ಲಿ ಅಜ್ಜಿಯ ಜೊತೆ ಕ್ವಾಲಿಟಿ ಟೈಮ್ ಕಳೆದಿದ್ದಾರಂತೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಇನ್ಸ್ಟಾಗ್ರಾಂ ಖಾತೆ)
1 / 12
ಪೂಜಾ ಹೆಗ್ಡೆ ಇತ್ತೀಚೆಗಷ್ಟೆ ಕೋವಿಡ್ನಿಂದ ಗುಣಮುಖರಾಗಿದ್ದಾರೆ.
2 / 12
ಈ ಸಲ ಲಾಕ್ಡೌನ್ನಲ್ಲಿ ಮನೆಯಲ್ಲೇ ಇದ್ದ ಪೂಜಾ ಹೆಗ್ಡೆ ಅಜ್ಜಿಯ ಜೊತೆ ಕಾಲ ಕಳೆದಿದ್ದಾರೆ.
3 / 12
ಸಮಯ ಸಿಕ್ಕಾಗಲೆಲ್ಲ ಮನೆಯವರ ಜೊತೆ ಇರಲು ಓಡಿ ಬರುವ ಪೂಜಾ ಈ ಸಲದ ಲಾಕ್ಡೌನ್ನಲ್ಲಿ ಒಳ್ಳೆಯ ನೆನಪುಗಳನ್ನು ಮಾಡಿಕೊಂಡಿದ್ದಾರಂತೆ.
4 / 12
ಅಜ್ಜಿಯ ಜತೆ ಕಾಲ ಕಳೆಯುತ್ತಾ ಸುಂದರವಾದ ನೆನಪುಗಳನ್ನು ಮಾಡಿಕೊಂಡಿದ್ದೇನೆ ಎಂದು ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
5 / 12
ಆಗಾಗ ಅಜ್ಜಿ ಹಾಗೂ ಅಮ್ಮನ ಜೊತೆಯಲ್ಲಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ ಈ ನಟಿ.
6 / 12
ಮಹಿಳಾ ದಿನದಂದು ಪೂಜಾ ಅಜ್ಜಿ ಹಾಗೂ ಅಮ್ಮನ ಜೊತೆಗಿನ ಫೋಟೋ ಹಂಚಿಕೊಂಡಿದ್ದರು.
7 / 12
ನಟಿ ಪೂಜಾ ಹೆಗ್ಡೆ ಸದ್ಯ ಬಾಲಿವುಡ್ನಲ್ಲಿ ಸರ್ಕಸ್ ಹಾಗೂ ಕಬೀ ಈದ್ ಕಭಿ ದಿವಾಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
8 / 12
ತೆಲುಗಿನಲ್ಲಿ ಪ್ರಭಾಸ್ ಜತೆ ರಾಧೆ ಶ್ಯಾಮ್ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.
9 / 12
ಪೂಜಾ ಹೆಗ್ಡೆ ತೆಲುಗಿನಲ್ಲೇ ಮತ್ತೊಂದು ಸಿನಿಮಾದಲ್ಲಿ ಅಖಿಲ್ ಅಕ್ಕಿನೇನಿ ಜೊತೆ ಅಭಿನಯಿಸುತ್ತಿದ್ದಾರೆ.
10 / 12
ಇನ್ನು ಮುಂಬೈನಲ್ಲಿ ಕಷ್ಟದಲ್ಲಿರುವ ನೂರು ಕುಟುಂಬಗಳಿಗೆ ದಿನಸಿ ಕಿಟ್ ನೀಡುವ ಮೂಲಕ ನೆರವಾಗಿದ್ದಾರೆ.
11 / 12
ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
12 / 12
ಕರಾವಳಿ ಸುಂದರಿ ಪೂಜಾ ಹೆಗ್ಡೆ
First published: June 03, 2021, 08:02 IST