Pooja Hegde: ನನ್ ಮಗಳಿಗೆ ಸಲ್ಮಾನ್ ಖಾನ್ ಸರಿಯಾದ ಜೋಡಿ ಎಂದ ಪೂಜಾ ಹೆಗ್ಡೆ ತಾಯಿ!

Pooja Hegde: ನನ್ನ ಮಗಳಿಗೆ ಸಲ್ಮಾನ್ ಖಾನ್ ಸರಿಯಾದ ಜೋಡಿ ಎಂದು ಪೂಜಾ ಹೆಗ್ಡೆ ಅವರ ತಾಯಿ ಹೇಳಿದ್ದಾರೆ. ಗಾಸಿಪ್ ಎಲ್ಲಾ ನಿಜವಾಗುತ್ತಾ?

First published:

  • 18

    Pooja Hegde: ನನ್ ಮಗಳಿಗೆ ಸಲ್ಮಾನ್ ಖಾನ್ ಸರಿಯಾದ ಜೋಡಿ ಎಂದ ಪೂಜಾ ಹೆಗ್ಡೆ ತಾಯಿ!

    ಬಾಲಿವುಡ್ ನಟಿ ಪೂಜಾ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗಿ ಆ್ಯಕ್ಟಿವ್ ಆಗಿದ್ದಾರೆ. ಕಿಸಿ ಕಾ ಭಾಯ್, ಕಿಸಿ ಕಿ ಜಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಈ ಕರಾವಳಿ ಚೆಲುವೆ ಸಲ್ಮಾನ್ ಖಾನ್ ಜೊತೆ ರೊಮ್ಯಾನ್ಸ್ ಮಾಡಿದ್ದರು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ತೆರೆಯ ಮೇಲೆ ಪೂಜಾ-ಸಲ್ಮಾನ್ ರೊಮ್ಯಾನ್ಸ್​ಗೆ ಮೆಚ್ಚುಗೆ ವ್ಯಕ್ತವಾಯಿತು.

    MORE
    GALLERIES

  • 28

    Pooja Hegde: ನನ್ ಮಗಳಿಗೆ ಸಲ್ಮಾನ್ ಖಾನ್ ಸರಿಯಾದ ಜೋಡಿ ಎಂದ ಪೂಜಾ ಹೆಗ್ಡೆ ತಾಯಿ!

    ಅಮ್ಮಂದಿರ ದಿನದ ವಿಶೇಷ ಸಂದರ್ಭ ಪೂಜಾ ಹೆಗ್ಡೆ ಹಾಗೂ ಅವರ ತಾಯಿ ಪಿಂಕ್ವಿಲ್ಲಾ ಜೊತೆ ಮಾಡನಾಡಿದ್ದಾರೆ. ಈ ಸಂದರ್ಭ ಪೂಜಾ ಹೆಗ್ಡೆ ಕೊಟ್ಟ ಒಂದು ಹೇಳಿಕೆ ಈಗ ವೈರಲ್ ಆಗಿದೆ. ಅಷ್ಟಕ್ಕೂ ಅವರು ಹೇಳಿದ್ದೇನು ಗೊತ್ತಾ?

    MORE
    GALLERIES

  • 38

    Pooja Hegde: ನನ್ ಮಗಳಿಗೆ ಸಲ್ಮಾನ್ ಖಾನ್ ಸರಿಯಾದ ಜೋಡಿ ಎಂದ ಪೂಜಾ ಹೆಗ್ಡೆ ತಾಯಿ!

    ಪೂಜಾ ಹೆಗ್ಡೆ ಅವರ ತಾಯಿ ಲತಾ ಹೆಗ್ಡೆ ಮಾತನಾಡಿ ತಮ್ಮ ಮಗಳು ಪೂಜಾಳನ್ನು ಸಲ್ಮಾನ್ ಖಾನ್ ಜೊತೆ ನೋಡುವುದಕ್ಕೆ ಇಷ್ಟಪಡುವುದಾಗಿ ಹೇಳಿದ್ದಾರೆ. ಈ ಮೂಲಕ ಪೂಜಾ-ಸಲ್ಮಾನ್ ಡೇಟಿಂಗ್ ಸುದ್ದಿಗೆ ಮತ್ತಷ್ಟು ಹಿಂಟ್ ಸಿಕ್ಕಂತಾಗಿದೆ.

    MORE
    GALLERIES

  • 48

    Pooja Hegde: ನನ್ ಮಗಳಿಗೆ ಸಲ್ಮಾನ್ ಖಾನ್ ಸರಿಯಾದ ಜೋಡಿ ಎಂದ ಪೂಜಾ ಹೆಗ್ಡೆ ತಾಯಿ!

    ತೆರೆಯ ಮೇಲೆ ಪೂಜಾ ಹೆಗ್ಡೆ ಅಲ್ಲು ಅರ್ಜುನ್, ಹೃತಿಕ್ ರೋಷನ್ ಹಾಗೂ ಸಲ್ಮಾನ್ ಖಾನ್ ಜೊತೆ ಸುಂದರವಾಗಿ ಕಾಣುತ್ತಾಳೆ ಎಂದಿದ್ದಾರೆ ಪೂಜಾ ತಾಯಿ. ಪೂಜಾ ಹೆಗ್ಡೆ ವಿಜಯ್ ಜೊತೆ ಬೀಸ್ಟ್ ಸಿನಿಮಾದಲ್ಲಿಯೂ ನಟಿಸಿದ್ದರು. ಆದರೆ ವಿಜಯ್ ಲಿಸ್ಟ್​ನಲ್ಲಿಲ್ಲ.

    MORE
    GALLERIES

  • 58

    Pooja Hegde: ನನ್ ಮಗಳಿಗೆ ಸಲ್ಮಾನ್ ಖಾನ್ ಸರಿಯಾದ ಜೋಡಿ ಎಂದ ಪೂಜಾ ಹೆಗ್ಡೆ ತಾಯಿ!

    ಪೂಜಾ ಹೆಗ್ಡೆ ಬೀಸ್ಟ್ ಸಿನಿಮಾದಲ್ಲಿ ವಿಜಯ್​ ಜೊತೆ ನಟಿಸಿದ್ದರು. ಇದರಲ್ಲಿ ಸಾಂಗ್ ಸೂಪರ್ ಹಿಟ್ ಆಯಿತು. ಆದರೆ ಸಿನಿಮಾ ಹಿಟ್ ಆಗಲಿಲ್ಲ. ವಿಜಯ್ ಅವರಿಗೂ ಬೀಸ್ಟ್ ಫ್ಲಾಪ್ ಆಗಿತ್ತು.

    MORE
    GALLERIES

  • 68

    Pooja Hegde: ನನ್ ಮಗಳಿಗೆ ಸಲ್ಮಾನ್ ಖಾನ್ ಸರಿಯಾದ ಜೋಡಿ ಎಂದ ಪೂಜಾ ಹೆಗ್ಡೆ ತಾಯಿ!

    ಪೂಜಾ ಹೆಗ್ಡೆ ಅವರ ತಾಯಿಯಲ್ಲಿ ತೆರೆಯ ಮೇಲೆ ಪೂಜಾ ಯಾರ ಜೊತೆ ಬೆಸ್ಟ್ ಆಗಿ ಕಾಣಿಸುತ್ತಾರೆ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಲತಾ ಹೆಗ್ಡೆ ಅವರು, ಸಲ್ಮಾನ್ ಖಾನ್, ಹೃತಿಕ್ ರೋಷನ್, ಅಲ್ಲು ಅರ್ಜುನ್ ಅವರ ಹೆಸರು ಹೇಳಿದ್ದಾರೆ. ವಿಜಯ್, ರಾಮ್ ಚರಣ್, ಮಹೇಶ್ ಬಾಬು ಹೆಸರು ಕೈಬಿಟ್ಟಿದ್ದಾರೆ.

    MORE
    GALLERIES

  • 78

    Pooja Hegde: ನನ್ ಮಗಳಿಗೆ ಸಲ್ಮಾನ್ ಖಾನ್ ಸರಿಯಾದ ಜೋಡಿ ಎಂದ ಪೂಜಾ ಹೆಗ್ಡೆ ತಾಯಿ!

    ಪೂಜಾ ಅವರು ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದು ಮೊಹೆಂಜದಾರೋ ಸಿನಿಮಾ ಮೂಲಕ. ಇದರಲ್ಲಿ ಹೃತಿಕ್ ರೋಷನ್ ಜೊತೆ ನಟಿಸಿದ್ದರು. ನಂತರ ಅಲ್ಲು ಅರ್ಜುನ್ ಜೊತೆ ಅಲಾ ವೈಕುಂಠಪುರಂಲೋ ಸಿನಿಮಾದಲ್ಲಿ ಕಾಣಿಸಿಕೊಂಡರು. ಹೃತಿಕ್, ಅಲ್ಲು ಹೆಸರು ಹೇಳುತ್ತಿದ್ದಂತೆ ಮಧ್ಯೆ ಮಾತನಾಡಿದ ಪೂಜಾ ನೋಡಿ ಅಮ್ಮ ಪ್ರಾಮಾಣಿಕವಾಗಿ ಉತ್ತರಿಸುತ್ತಾರೆ, ನಾವು ಲಾಜಿಕ್ ಆಗಿ ಉತ್ತರಿಸಬೇಕಾಗುತ್ತದೆ ಎಂದು ನಕ್ಕಿದ್ದಾರೆ.

    MORE
    GALLERIES

  • 88

    Pooja Hegde: ನನ್ ಮಗಳಿಗೆ ಸಲ್ಮಾನ್ ಖಾನ್ ಸರಿಯಾದ ಜೋಡಿ ಎಂದ ಪೂಜಾ ಹೆಗ್ಡೆ ತಾಯಿ!

    ಸಲ್ಮಾನ್ ಖಾನ್ ಹಿರಿಯ ನಟನಾಗಿದ್ದು ಪೂಜಾ ಅವರು ಇನ್ನೂ ಯಂಗ್ ನಟಿ. ತುಂಬಾ ಏಜ್ ಗ್ಯಾಪ್ ಕೂಡಾ ಇದೆ. ಸಿನಿಮಾ ಸಂದರ್ಭ ಇವರಿಬ್ಬರೂ ಡೇಟ್ ಮಾಡುತ್ತಿದ್ದರು ಎನ್ನಲಾಗಿದೆ. ಈಗ ಅವರ ತಾಯಿ ಕೊಟ್ಟ ಹೇಳಿಕೆ ಮತ್ತಷ್ಟು ಸಂದೇಹಗಳಿಗೆ ದಾರಿ ಮಾಡಿದೆ.

    MORE
    GALLERIES