ಲೆಹೆಂಗಾದಲ್ಲಿ ಮಿಂಚಿದ ಕರಾವಳಿ ಸುಂದರಿ Pooja Hegde ಸಿಂಪಲ್ ಲುಕ್ಸ್ಗೆ ಅಭಿಮಾನಿಗಳು ಫಿದಾ..!
ಕನ್ನಡದ ಹುಡುಗಿ ಪೂಜಾ ಹೆಗ್ಡೆ (Pooja Hegde) ಸದ್ಯ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಶೂಟಿಂಗ್ ಒಂದು ಕಡೆಯಾದರೆ, ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್ಗಳ ಮೂಲಕ ಟ್ರೀಟ್ ಕೊಡುತ್ತಿರುತ್ತಾರೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಇನ್ಸ್ಟಾಗ್ರಾಂ ಖಾತೆ)
ಕರಾವಳಿ ಸುಂದರಿ ಪೂಜಾ ಹೆಗ್ಡೆ ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿ ತುಂಬಾ ಸಕ್ರಿಯವಾಗಿದ್ದಾರೆ. ಅವರಿಗೆ ಹಿಂದಿ ಹಾಗೂ ತೆಲುಗು ಚಿತ್ರಗಳಲ್ಲಿ ತುಂಬಾ ಬೇಡಿಕೆ ಇದೆ. ಹೀಗಾಗಿಯೇ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
2/ 7
ಸಿನಿಮಾ ಶೂಟಿಂಗ್ಗಳ ನಡುವೆಯೇ ಪೂಜಾ ಹೆಗ್ಡೆ ಫೋಟೋಶೂಟ್ಗಳಲ್ಲೂ ಮಿಂಚುತ್ತಿದ್ದಾರೆ. ಅವರು ಮಾಡರ್ನ್, ಹಾಟ್, ಬೋಲ್ಡ್ ಹಾಗೂ ಸಿಂಪಲ್ಲಾಗಿ ಸಾಂಪ್ರದಾಯಿಕ ಲುಕ್ನಲ್ಲೂ ಪೋಸ್ ಕೊಡುತ್ತಾರೆ.
3/ 7
ಐವರಿ ಬಣ್ಣದ ಲೆಹೆಂಗಾ ತೊಟ್ಟು ಪೂಜಾ ಹೆಗ್ಡೆ ಸಿಕ್ಕಾಪಟ್ಟೆ ಕ್ಯೂಟ್ ಆಗಿ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದಾರೆ. ಅವರ ಈ ಸಿಂಪಲ್ ಲುಕ್ ಅಭಿಮಾನಿಗಳ ಮನಸ್ಸು ಕದ್ದಿದೆ.
4/ 7
ಪೂಜಾ ಹೆಗ್ಡೆ ಅವರು ತಮ್ಮ ಲೆಟೆಸ್ಟ್ ಫೋಟೋಶೂಟ್ನ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೆ ತೆರೆಕಂಡ ಅವರ ಅಭಿನಯದ ತೆಲುಗು ಸಿನಿಮಾ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಬಾಕ್ಸಾಫಿಸ್ನಲ್ಲಿ ಸಖತ್ ಸದ್ದು ಮಾಡುತ್ತಿದೆ.
5/ 7
ಬಾಲಿವುಡ್ನಲ್ಲಿ ರಣವೀರ್ ಸಿಂಗ್ ಜೊತೆ ಸರ್ಕಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಪೂಜಾ. ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.
6/ 7
ಕಾಲಿವುಡ್ನಲ್ಲೂ ಸಹ ಪೂಜಾ ನಟಿಸುತ್ತಿದ್ದಾರೆ. ಬೀಸ್ಟ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಶೂಟಿಂಗ್ಗಾಗಿ ಚೆನ್ನೈಗೂ ಹೋಗಿ ಬಂದಿದ್ದರು.
7/ 7
ಲಾಕ್ಡೌನ್ ಆರಂಭಕ್ಕೂ ಮೊದಲು ಇವರ ಅಭಿನಯದ ಅಲಾ ವೈಕುಂಠಪುರಂಲೋ ಸಿನಿಮಾ ಬಾಕ್ಸಾಫಿಸ್ನಲ್ಲಿ ಧೂಳೆಬ್ಬಿಸಿತ್ತು. ಇದರಿಂದಾಗಿ ಪೂಜಾಗೆ ಟಾಲಿವುಡ್ನಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಿತ್ತು.