Pooja Hegde | ಬಹುಭಾಷಾ ನಟಿ ಪೂಜಾ ಹೆಗ್ಡೆ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರೆ. ನಾಗ ಚೈತನ್ಯ ಅಭಿನಯದ ಒಕಾ ಲೈಲಾ ಪಾರೋ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಪೂಜಾ ಹೆಗ್ಡೆ, ತಮ್ಮದೇ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ.
'ಒಕಾ ಲೈಲಾ ಪಾರೋ' ಚಿತ್ರದ ನಂತರ ವರುಣ್ ಅಭಿನಯದ 'ಮುಕುಂದ' ಚಿತ್ರದ ಮೂಲಕ ಅಭಿಮಾನಿ ಬಳಗ ಹೆಚ್ಚಿಸಿಕೊಂಡ್ರು. ಈ ಕನ್ನಡದ ಚೆಲುವೆ ಇದೀಗ ದುಬೈಗೆ ಹಾರಿದ್ದಾರೆ. ಪೂಜಾ ಹೆಗ್ಡೆ ಅವರ ಕೆಲವು ಫೋಟೋಗಳು ಇದೀಗ ವೈರಲ್ ಆಗುತ್ತಿವೆ.
2/ 8
ಪೂಜಾ ಹೆಗ್ಡೆ ಸದ್ಯ ಟಾಪ್ ಹೀರೋಗಳ ಬೆಸ್ಟ್ ಆಪ್ಷನ್ ಆಗಿದ್ದಾರೆ. ತ್ರಿವಿಕ್ರಮ್ ನಿರ್ದೇಶನದ 'ಅಲಾ ವೈಕುಂಠಪುರಮುಲೋ' ಚಿತ್ರದ ಮೂಲಕ ಮತ್ತೊಂದು ಹಿಟ್ ಚಿತ್ರವನ್ನು ತಮ್ಮ ಅಕೌಂಟ್ಗೆ ಹಾಕಿಕೊಂಡಿದ್ದಾರೆ.
3/ 8
ಪೂಜಾ ಹೆಗ್ಡೆ ಅಭಿನಯದ ಆಚಾರ್ಯ ಕಳೆದ ವರ್ಷ ಏಪ್ರಿಲ್ 29ರಂದು ವಿಶ್ವದಾದ್ಯಂತ ಬಿಡುಗಡೆಯಾಯಿತು ಆದ್ರೆ ಸಿನಿಮಾ ಹೆಚ್ಚು ಸದ್ದು ಮಾಡಿಲ್ಲ.
4/ 8
ಇತ್ತೀಚಿಗೆ ನಟಿಸಿದ ಪೂಜಾ ಹಗ್ಡೆ ಸಿನಿಮಾಗಳು ನಿರೀಕ್ಷಿತ ಗಳಿಕೆ ಮಾಡಿಲ್ಲ. ಚಿತ್ರಗಳು ಸತತ ಸೋಲು ಕಾಣುತ್ತಿವೆ. ರಾಧೆ ಶ್ಯಾಮ್, ಮೃಗ ಮತ್ತು ಆಚಾರ್ಯ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು.
5/ 8
ಸದ್ಯ ಪೂಜಾ ಹೆಗ್ಡೆ ಹಿಂದಿ ಸಿನಿಮಾದ ಜೊತೆಗೆ ತೆಲುಗಿನಲ್ಲಿ ಮಹೇಶ್ ಬಾಬು-ತ್ರಿವಿಕ್ರಮ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಬಹಳ ನಿರೀಕ್ಷೆ ಹೊಂದಿದ್ದಾರೆ. ಈ ಚಿತ್ರದ ರೆಸ್ಯೂಮ್ ಶೀಘ್ರದಲ್ಲೇ ನಡೆಯಲಿದೆ.
6/ 8
ಭಗತ್ ಸಿಂಗ್ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಕೂಡ ಮಾಡಲಾಗಿದೆ. ಈ ಸಿನಿಮಾಗೆ ಪವನ್ ಕಲ್ಯಾಣ್ ನಾಯಕರಾಗಿದ್ದು, ಹರೀಶ್ ಶಂಕರ್ ನಿರ್ದೇಶನ ಮಾಡ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಹೊಣೆ ಹೊತ್ತಿದೆ.
7/ 8
ಲೈಗರ್ ಸೋಲಿನ ಬಳಿಕ ಮತ್ತೆ ವಿಜಯ್ ಹಾಗೂ ಪುರಿ ಜಗನ್ನಾಥ್ ಸಿನಿಮಾ ಮಾಡ್ತಿದ್ದಯ, ಜಂಗನಮನ ಚಿತ್ರಕ್ಕೆ ಪೂಜಾ ಹೆಗ್ಡೆ ಆಯ್ಕೆಯಾಗಿದ್ರು ಆದ್ರೆ ಶೆಡ್ಯೂಲ್ ರದ್ದಾಗಿದೆ. ಸದ್ಯ ಬಾಲಿವುಡ್ ನಲ್ಲೂ ಪೂಜಾ ಹೆಗ್ಡೆ ಮಿಂಚುತ್ತಿದ್ದಾರೆ.
8/ 8
ಪೂಜಾ ಹೆಗ್ಡೆ ಅಕ್ಟೋಬರ್ 13, 1990 ರಂದು ಮುಂಬೈನಲ್ಲಿ ಜನಿಸಿದರು. ತಾಯಿ ಮತ್ತು ತಂದೆ ಕರ್ನಾಟಕದ ಮಂಗಳೂರಿನವರಾದರೂ ಮುಂಬೈನಲ್ಲಿ ನೆಲೆಸಿದರು.