ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಅವರು ತಮ್ಮ ನೆಚ್ಚಿನ ಮಾಲ್ಡಿವ್ಸ್ ಪ್ರವಾಸವನ್ನೂ ಮೇಲಿಂದ ಮೇಲೆ ಕೈಗೊಳ್ಳುತ್ತಿದ್ದಾರೆ.
2/ 8
ಪೂಜಾ ಹೆಗ್ಡೆ ಈ ಮೊದಲು ಸಾಕಷ್ಟು ಎಕ್ಸ್ಪೋಸ್ ಇರುವ ಫೋಟೊಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಇದೀಗ ಅವರು ತಮ್ಮ ಪ್ರವಾಸದ ಹಾಟ್ ಫೋಟೊಗಳನ್ನು ಹಂಚಿಕೊಂಡು ಅಭಿಮಾನಿಗಳ ಮನ ತಣಿಸುತ್ತಿದ್ದಾರೆ.
3/ 8
ಪೂಜಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿಯಲ್ಲಿರುವ ಫೋಟೊವನ್ನು ಹಂಚಿಕೊಂಡಿದ್ದು, ಈ ಫೋಟೊ ನೋಡಿದ ಹುಡುಗರು, ‘ಕಣ್ಣು ಕೋರೈಸುವಂತಿದೆ ಪೂಜಾ ಮೈಮಾಟ’ ಎಂದಿದ್ದಾರೆ.
4/ 8
ತೆಲುಗಿನ ಸೂಪರ್ಹಿಟ್ ‘ಅಲಾವೈಕುಂಠಪುರಂಲು’ ಸಿನಿಮಾ ನಂತರ ಪೂಜಾಗೆ ಸಾಲು ಸಾಲು ಸಿನಿಮಾಗಳು ಅರಸಿ ಬರುತ್ತಿವೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಬಿಡುಗಡೆಯಾಗಲಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.
5/ 8
ಈ ಹಿಂದೆ ಮತ್ತೊಂದು ಬಿಕಿನಿ ಪೋಟೋ ಶೇರ್ ಮಾಡಿದ್ದರು. ಪೂಜಾ ಹರಡಿರುವ ಕೂದಲುಗಳನ್ನು ಕಟ್ಟಿಕೊಳ್ಳುವ ಮೂಲಕ, ‘ಹರಡಿರುವ ಕೂದಲಗಳಂತೆ ನನ್ನ ಪ್ರಯಾಣವೂ ಯಾವಾಗಲೂ ಎಲ್ಲೆಲ್ಲಿಗೋ ಸಾಗುತ್ತಿರುತ್ತದೆ’ ಎಂದು ಹೇಳಿಕೊಂಡಿದ್ದರು.
6/ 8
ಉಡುಪಿ ಮೂಲದ ಪೂಜಾ ಹೆಗ್ಡೆ 1990 ಅಕ್ಟೋಬರ್ 13 ರಂದು ಮುಂಬೈನಲ್ಲಿ ಜನಿಸಿದ್ದು, 2012 ರಲ್ಲಿ ‘ಮುಗಮುದಿ’ ತಮಿಳು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು.
7/ 8
ಬಾಲಿವುಡ್ನಲ್ಲಿ ಹೃತಿಕ್ ರೋಷನ್ ಜೊತೆಗೆ ‘ಮೆಹಂಜೊದಾರೋ’ ಸಿನಿಮಾದಲ್ಲಿ ಅಭಿನಯಿಸಿ ಗಮನ ಸೆಳೆದರು. ಇಲ್ಲಿವರೆಗೆ 12 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
8/ 8
ಉಳಿದಂತೆ ತೆಲುಗಿನ ‘ಆಚಾರ್ಯ್', ‘ಸರ್ಕಸ್' ಹಾಗೂ ‘ಬೀಸ್ಟ್' ಸಿನಿಮಾಗಳಲ್ಲಿ ಸದ್ಯಕ್ಕೆ ಪೂಜಾ ತೊಡಗಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಟಾಪ್ ನಟಿಯರ ಲಿಸ್ಟ್ನಲ್ಲಿ ಪೂಜಾ ಸ್ಥಾನ ಪಡೆದುಕೊಂಡಿದ್ದಾರೆ..