Pooja Hegde: ಆಲಿಯಾ-ಜಾಹ್ನವಿ ನಂತರ ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ..!
ಪೂಜಾ ಹೆಗ್ಡೆ ಸದ್ಯ ತೆಲುಗು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಸಖತ್ ವ್ಯಸ್ತವಾಗಿದ್ದಾರೆ. ಒಂದು ಕಡೆ ಟಾಲಿವುಡ್ ಹಾಗೂ ಮತ್ತೊಂದು ಕಡೆ ಹಿಂದಿ ಸಿನಿಮಾಗಳು. ಅವಕಾಶಗಳ ಮೇಲೆ ಅವಕಾಶಗಳನ್ನು ತನ್ನದಾಗಿಸಿಕೊಳ್ಳುತ್ತಿರುವ ಪೂಜಾ ಈಗ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಇನ್ಸ್ಟಾಗ್ರಾಂ ಖಾತೆ)
ಮುಂಬೈನಲ್ಲಿ ಮನೆ ಖರೀದಿಸೋದು ಅಂದ್ರೆ ಸುಲಭದ ಮಾತಲ್ಲ. ಆದರೆ ಇತ್ತೀಚೆಗೆ ಜಾಹ್ನವಿ ಹಾಗೂ ಆಲಿಯಾ ಭಟ್ ತಮ್ಮದೇ ಪ್ರಾಪರ್ಟಿ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಈಗ ಇವರ ಜೊತೆ ಕರಾವಳಿ ಸುಂದರಿ ಪೂಜಾ ಹೆಗ್ಡೆ ಸಹ ಸೇರಿಕೊಂಡಿದ್ದಾರೆ.
2/ 15
ಹೌದು, ಪೂಜಾ ಹೆಗ್ಡೆ ಸಹ ಮುಂಬೈನ ಬಾಂದ್ರಾದಲ್ಲಿ ಮೂರು ಅಂತಸ್ತಿನ ಫ್ಲಾಟ್ ಖರೀದಿ ಮಾಡಿದ್ದಾರಂತೆ.
3/ 15
ಸೀ ಫೇಸಿಂಗ್ ಇರುವ ಅಪಾರ್ಟ್ಮೆಂಟ್ ಸಖತ್ ಐಷಾರಾಮಿಯಾಗಿದೆಯಂತೆ.
4/ 15
ಬಾಲಿವುಡ್ನಲ್ಲಿ ಬೆರಳೆಣಿಕೆ ಚಿತ್ರಗಳನ್ನು ಮಾಡಿರುವ ಪೂಜಾ ಹೆಗ್ಡೆ ಟಾಲಿವುಡ್ನಲ್ಲಿ ಬೇಡಿಕೆಯಲ್ಲಿರುವ ನಟಿ.
5/ 15
ಸದ್ಯ ರೋಹಿತ್ ಶೆಟ್ಟಿ ಹಾಗೂ ರಣವೀರ್ ಸಿಂಗ್ ಅವರೊಂದಿಗೆ ಸರ್ಕಸ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಪೂಜಾ ಹೆಗ್ಡೆ.
6/ 15
ಸಿನಿಮಾ ಚಿತ್ರೀಕರಣಗಳಲ್ಲಿ ವ್ಯಸ್ತವಾಗಿದ್ದರೂ ಸಹ ಪೂಜಾ ತಮ್ಮ ಮನೆಯಗಳ ಇಂಟೀರಿಯರ್ ಹಾಗೂ ಇತರೆ ಕೆಲಸಗಳನ್ನು ಮುಂದೆ ನಿಂತು ಮಾಡಿಸುತ್ತಿದ್ದಾರಂತೆ.
7/ 15
ಸಲ್ಮಾನ್ ಖಾನ್ ಜೊತೆ ಕಭಿ ಈದ್... ಕಭಿ ದಿವಾಲಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಪೂಜಾ.
8/ 15
ಟಾಲಿವುಡ್ನಲ್ಲಿ ಅಖಿಲ್ ಅಕ್ಕಿನೇನಿ ಜೊತೆ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಿನಿಮಾದಲ್ಲೂ ನಾಯಕಿಯಾಗಿದ್ದಾರೆ.
9/ 15
ಈ ಸಿನಿಮಾ ಜೂನ್ 19ಕ್ಕೆ ರಿಲೀಸ್ ಆಗಲಿದೆ.
10/ 15
ಸರ್ಕಸ್ ಚಿತ್ರತಂಡದೊಂದಿಗೆ ಪೂಜಾ ಹೆಗ್ಡೆ
11/ 15
ನಟಿ ಪೂಜಾ ಹೆಗ್ಡೆ ಪ್ರಭಾಸ್ ಜೊತೆ ರಾಧೆ ಶ್ಯಾಮ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.