Ramya-Pooja Gandhi: ರಮ್ಯಾ ಈ ಗುಣಗಳೇ ನನಗೆ ಇಷ್ಟ ಎಂದ ಪೂಜಾ ಗಾಂಧಿ, ಮೋಹಕ ತಾರೆಯನ್ನು ಕೊಂಡಾಡಿದ ಮಳೆ ಹುಡುಗಿ!

ಬಣ್ಣದ ಲೋಕದಿಂದ ದೂರ ಉಳಿದ್ರೂ ಪೂಜಾ ಗಾಂಧಿ ಚಿತ್ರರಂಗದ ನಂಟನ್ನು ಕಳೆದುಕೊಂಡಿಲ್ಲ. ಅನೇಕ ಸ್ನೇಹಿತರನ್ನು ಒಳಗೊಂಡಿದ್ದಾರೆ. ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಹಾಗೂ ನಟಿ ಪೂಜಾ ಗಾಂಧಿ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ರು. ಇದೀಗ ರಮ್ಯಾ ಬಗ್ಗೆ ಪೂಜಾ ಗಾಂಧಿ ಪತ್ರದ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

First published:

 • 18

  Ramya-Pooja Gandhi: ರಮ್ಯಾ ಈ ಗುಣಗಳೇ ನನಗೆ ಇಷ್ಟ ಎಂದ ಪೂಜಾ ಗಾಂಧಿ, ಮೋಹಕ ತಾರೆಯನ್ನು ಕೊಂಡಾಡಿದ ಮಳೆ ಹುಡುಗಿ!

  ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ , ನಟ, ನಿರೂಪಕ ರಮೇಶ್ ಅರವಿಂದ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಮೋಹಕ ತಾರೆ ರಮ್ಯಾ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

  MORE
  GALLERIES

 • 28

  Ramya-Pooja Gandhi: ರಮ್ಯಾ ಈ ಗುಣಗಳೇ ನನಗೆ ಇಷ್ಟ ಎಂದ ಪೂಜಾ ಗಾಂಧಿ, ಮೋಹಕ ತಾರೆಯನ್ನು ಕೊಂಡಾಡಿದ ಮಳೆ ಹುಡುಗಿ!

  ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೊದಲ ಎಪಿಸೋಡ್ಗೆ ಅತಿಥಿಯ ಬಗ್ಗೆ ಭಾರೀ ಚರ್ಚೆ ಆಗಿತ್ತು. ಇದೀಗ ಅತಿಥಿ ಫೈನಲ್ ಆಗಿದ್ದು, ರಮ್ಯಾ ಸಾಧಕರ ಕುರ್ಚಿ ಏರಿದ್ದಾರೆ. ಕಾರ್ಯಕ್ರಮದಲ್ಲಿ ರಮ್ಯಾ ಅವರನ್ನು ನೋಡಲು ಅಭಿಮಾನಿಗಳು ಅಷ್ಟೇ ಅಲ್ಲ ಸೆಲೆಬ್ರಿಟಿಗಳು ಕೂಡ ಕಾಯ್ತಿದ್ದಾರೆ.

  MORE
  GALLERIES

 • 38

  Ramya-Pooja Gandhi: ರಮ್ಯಾ ಈ ಗುಣಗಳೇ ನನಗೆ ಇಷ್ಟ ಎಂದ ಪೂಜಾ ಗಾಂಧಿ, ಮೋಹಕ ತಾರೆಯನ್ನು ಕೊಂಡಾಡಿದ ಮಳೆ ಹುಡುಗಿ!

  ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ರಮ್ಯಾ (Ramya) ಬಗ್ಗೆ ಪೂಜಾ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರು ಕನ್ನಡದಲ್ಲೇ ಪತ್ರ ಬರೆದಿದ್ದಾರೆ ಅನ್ನೋದು ವಿಶೇಷ. ಸದ್ಯ ಈ ಪತ್ರ ವೈರಲ್ ಆಗುತ್ತಿದೆ.

  MORE
  GALLERIES

 • 48

  Ramya-Pooja Gandhi: ರಮ್ಯಾ ಈ ಗುಣಗಳೇ ನನಗೆ ಇಷ್ಟ ಎಂದ ಪೂಜಾ ಗಾಂಧಿ, ಮೋಹಕ ತಾರೆಯನ್ನು ಕೊಂಡಾಡಿದ ಮಳೆ ಹುಡುಗಿ!

  ರಮೇಶ್ ಸರ್, ನಿಮ್ಮ ಮತ್ತು ರಮ್ಯಾ ಮಧ್ಯೆ ನಡೆಯುವ ಮಾತಿನ ಜುಗಲ್ಬಂದಿ ನೋಡೋಕ್ಕೆ ಲಕ್ಷಾಂತರ ಕನ್ನಡಿಗರ ರೀತಿ ನಾನೂ ಕೂಡ ಕಾತರದಿಂದ ಕಾಯುತ್ತಿದ್ದೇನೆ. ರಮ್ಯಾ ಒಳ್ಳೆಯ ವ್ಯಕ್ತಿ. ಅವರಿಗೆ ಏನು ಅನಿಸುತ್ತದೆಯೋ ಅದನ್ನೇ ಹೇಳುತ್ತಾರೆ’ ಎಂದು ಪೂಜಾ ಗಾಂಧಿ ಪತ್ರದಲ್ಲಿ ಬರೆದಿದ್ದಾರೆ.

  MORE
  GALLERIES

 • 58

  Ramya-Pooja Gandhi: ರಮ್ಯಾ ಈ ಗುಣಗಳೇ ನನಗೆ ಇಷ್ಟ ಎಂದ ಪೂಜಾ ಗಾಂಧಿ, ಮೋಹಕ ತಾರೆಯನ್ನು ಕೊಂಡಾಡಿದ ಮಳೆ ಹುಡುಗಿ!

  ‘ನನ್ನ ವೈಯಕ್ತಿಕವಾಗಿ ರಮ್ಯಾ ಯಾಕೆ ಇಷ್ಟ ಆಗ್ತಾರೆ ಅಂದ್ರೆ, ಅವರು ತಮ್ಮ ಸಹ ಕಲಾವಿದರ ಪರವಾಗಿ ನಿಲ್ಲುತ್ತಾರೆ. ಅವರಲ್ಲಿನ ಈ ಗುಣ ಇಷ್ಟಾಗುತ್ತದೆ. ನನಗೆ ಈಗಲೂ ನೆನಪಿದೆ. ರಾಯಚೂರಿನ ಚುನಾವಣೆಯಲ್ಲಿ ನಾನು ಕೆಟ್ಟದಾಗಿ ಸೋತಾಗ, ‘ಪೂಜಾ ಒಳ್ಳೆಯ ಪ್ರಯತ್ನ ಮಾಡಿದ್ದೀರಿ ಎಂದು ರಮ್ಯಾ ಹೇಳಿದ್ದರು.

  MORE
  GALLERIES

 • 68

  Ramya-Pooja Gandhi: ರಮ್ಯಾ ಈ ಗುಣಗಳೇ ನನಗೆ ಇಷ್ಟ ಎಂದ ಪೂಜಾ ಗಾಂಧಿ, ಮೋಹಕ ತಾರೆಯನ್ನು ಕೊಂಡಾಡಿದ ಮಳೆ ಹುಡುಗಿ!

  ರಮ್ಯಾ ನಿಮ್ಮ ಪ್ರೊಡಕ್ಷನ್ ಕಂಪನಿಗೆ ಶುಭವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕನ್ನಡ ಸಿನಿಮಾಗಳು ಮೂಡಿಬರಲಿ ಎಂದು ಪೂಜಾ ಗಾಂಧಿ ಶುಭಹಾರೈಸಿದ್ದಾರೆ.

  MORE
  GALLERIES

 • 78

  Ramya-Pooja Gandhi: ರಮ್ಯಾ ಈ ಗುಣಗಳೇ ನನಗೆ ಇಷ್ಟ ಎಂದ ಪೂಜಾ ಗಾಂಧಿ, ಮೋಹಕ ತಾರೆಯನ್ನು ಕೊಂಡಾಡಿದ ಮಳೆ ಹುಡುಗಿ!

  ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರೋಮೋ ರಿಲೀಸ್ ಆಗಿದ್ದು, ಪ್ರೋಮೋದಲ್ಲಿ ರಮ್ಯಾ ಅನೇಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ನನ್ನ ಸಿನಿ ಜರ್ನಿ ಶುರುವಾಗಿದ್ದು ರಾಜ್ ಕುಮಾರ್ ಕುಟುಂಬದ ಜೊತೆ, ನನಗೆ ರಮ್ಯಾ ಎಂದು ಹೆಸರಿಟ್ಟಿದ್ದು ಪಾರ್ವತಮ್ಮ ರಾಜ್​ಕುಮಾರ್ ಎಂದಿದ್ದಾರೆ.

  MORE
  GALLERIES

 • 88

  Ramya-Pooja Gandhi: ರಮ್ಯಾ ಈ ಗುಣಗಳೇ ನನಗೆ ಇಷ್ಟ ಎಂದ ಪೂಜಾ ಗಾಂಧಿ, ಮೋಹಕ ತಾರೆಯನ್ನು ಕೊಂಡಾಡಿದ ಮಳೆ ಹುಡುಗಿ!

  ಕಾರ್ಯಕ್ರಮಕ್ಕೆ ನಟ ಶ್ರೀನಗರ ಕಿಟ್ಟಿ ಸೇರಿದಂತೆ ಅನೇಕರು ಆಗಮಿಸಿ ರಮ್ಯಾಗೆ ಸರ್ಪ್ರೈಸ್ ನೀಡಿದ್ದಾರೆ. ರಮ್ಯಾ ಕಾರ್ಯಕ್ರಮ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ರಮ್ಯಾ ಪುನೀತ್ ರಾಜ್ ಕುಮಾರ್ ಬಗ್ಗೆ ಕೂಡ ಮಾತಾಡಿದ್ದಾರೆ. ನಟಿ ರಮ್ಯಾ ಪುನೀತ್ ನೆನೆದು ಕಣ್ಣೀರು ಹಾಕಿದ್ದಾರೆ.

  MORE
  GALLERIES