PS2 Collection: ಎರಡೇ ದಿನದಲ್ಲಿ 100 ಕೋಟಿ ಬಾಚಿದ ಪೊನ್ನಿಯಿನ್ ಸೆಲ್ವನ್2

Ponniyin Selvan 2: ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಮೊದಲ ದಿನ 38 ಕೋಟಿ ಗಳಿಸಿತ್ತು. ಪೊನ್ನಿಯಿನ್ ಸೆಲ್ವನ್ 1 ಸಿನಿಮಾ ಕೂಡಾ ರಿಲೀಸ್ ಆಗಿ ಎರಡನೇ ದಿನ 100 ಕೋಟಿ ಗಳಿಸಿತ್ತು. ಈಗ PS2 ಕೂಡಾ ಭರ್ಜರಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.

First published:

  • 19

    PS2 Collection: ಎರಡೇ ದಿನದಲ್ಲಿ 100 ಕೋಟಿ ಬಾಚಿದ ಪೊನ್ನಿಯಿನ್ ಸೆಲ್ವನ್2

    ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾ ಎರಡನೇ ದಿನಕ್ಕೆ 100 ಕೋಟಿ ದಾಟಿ ಮುನ್ನುಗ್ಗುತ್ತಿದೆ. ರಿಲೀಸ್ ಆಗಿ ಎರಡನೇ ದಿನಕ್ಕೆ ಸಿನಿಮಾ 28.50 ಕೋಟಿ ಗಳಿಸಿದೆ. ಈ ಮೂಲಕ ಎರಡನೇ ದಿನದ ಒಟ್ಟು ಮೊತ್ತ 51 ಕೋಟಿಯಾಗಿದೆ.

    MORE
    GALLERIES

  • 29

    PS2 Collection: ಎರಡೇ ದಿನದಲ್ಲಿ 100 ಕೋಟಿ ಬಾಚಿದ ಪೊನ್ನಿಯಿನ್ ಸೆಲ್ವನ್2

    ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಮೊದಲ ದಿನ 38 ಕೋಟಿ ಗಳಿಸಿತ್ತು. ಪೊನ್ನಿಯಿನ್ ಸೆಲ್ವನ್ 1 ಸಿನಿಮಾ ಕೂಡಾ ರಿಲೀಸ್ ಆಗಿ ಎರಡನೇ ದಿನ 100 ಕೋಟಿ ಗಳಿಸಿತ್ತು.

    MORE
    GALLERIES

  • 39

    PS2 Collection: ಎರಡೇ ದಿನದಲ್ಲಿ 100 ಕೋಟಿ ಬಾಚಿದ ಪೊನ್ನಿಯಿನ್ ಸೆಲ್ವನ್2

    ಪ್ರಕಾರ ಸಿನಿಮಾ ತಮಿಳುನಾಡಿನಲ್ಲಿ 34.25 ಕೋಟಿ ಗಳಿಸಿದೆ. ಕರ್ನಾಟಕದಲ್ಲಿ 7.80 ಕೋಟಿ ಗಳಿಸಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ 5.85 ಕೋಟಿ ಗಳಿಸಿದೆ. ಕೇರಳದಲ್ಲಿ ಪಿಎಸ್​2 5.10 ಕೋಟಿ ಗಳಿಸಿದ್ದು ಉಳಿದ ರಾಜ್ಯದ ಕಲೆಕ್ಷನ್ ಒಟ್ಟು 6.40 ಕೋಟಿ ರೂಪಾಯಿ. ವಿದೇಶದಲ್ಲಿ ಸುಮಾರು 51 ಕೋಟಿ ಗಳಿಕೆಯಾಗಿದೆ.

    MORE
    GALLERIES

  • 49

    PS2 Collection: ಎರಡೇ ದಿನದಲ್ಲಿ 100 ಕೋಟಿ ಬಾಚಿದ ಪೊನ್ನಿಯಿನ್ ಸೆಲ್ವನ್2

    ಪೊನ್ನಿಯಿನ್ ಸೆಲ್ವನ್ 1 ಸಿನಿಮಾ ಸೆಪ್ಟೆಂಬರ್ 30 2022ರಂದು ರಿಲೀಸ್ ಆಗಿತ್ತು. ಸಿನಿಮಾ ಒಟ್ಟು 490 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದೇ ದಿನ ಕಾಂತಾರ ಸಿನಿಮಾ ಕೂಡಾ ರಿಲೀಸ್ ಆಗಿ ಪಿಎಸ್​1 ಸಿನಿಮಾಗೆ ಕರ್ನಾಟಕ ಬಾಕ್ಸ್ ಆಫೀಸ್​ನಲ್ಲಿ ಸ್ವಲ್ಪ ಹಿನ್ನಡೆಯಾಗಿತ್ತು.

    MORE
    GALLERIES

  • 59

    PS2 Collection: ಎರಡೇ ದಿನದಲ್ಲಿ 100 ಕೋಟಿ ಬಾಚಿದ ಪೊನ್ನಿಯಿನ್ ಸೆಲ್ವನ್2

    ಪೊನ್ನಿಯಿನ್ ಸೆಲ್ವನ್ 1 ಸಿನಿಮಾ 2022ರಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ಮೂರನೇ ಸಿನಿಮಾ ಆಗಿತ್ತು. ಕ್ಲಾಸಿಕ್ ತಮಿಳು ಕಾದಂಬರಿ ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯಿನ್ ಸೆಲ್ವನ್ ಆಧರಿಸಿ ಮಣಿರತ್ನಂ ಅವರು ಸಿನಿಮಾ ಮಾಡಿದ್ದಾರೆ. ಈ ಸಿನಿಮಾಗೆ ಆಸ್ಕರ್ ವಿನ್ನರ್ ಎಆರ್ ರೆಹಮಾನ್ ಸಂಗೀತ ಒದಗಿಸಿದ್ದಾರೆ.

    MORE
    GALLERIES

  • 69

    PS2 Collection: ಎರಡೇ ದಿನದಲ್ಲಿ 100 ಕೋಟಿ ಬಾಚಿದ ಪೊನ್ನಿಯಿನ್ ಸೆಲ್ವನ್2

    ಈ ಸಿನಿಮಾದಲ್ಲಿ ವಿಕ್ರಂ, ಐಶ್ವರ್ಯಾ ರೈ ನಟಿಸಿದ್ದು ಜಯಂ ರವಿ, ಕಾರ್ತಿ, ತ್ರಿಶಾ ಕೃಷ್ಣನ್, ಆರ್ ಶರತ್​ಕುಮಾರ್, ಜಯರಾಮ್, ಪ್ರಭು, ಐಶ್ವರ್ಯಾ ಲಕ್ಷ್ಮಿ, ಶೋಭಿತಾ ಧೂಳೀಪಾಲ, ವಿಕ್ರಂ ಪ್ರಭು ಪ್ರಕಾಶ್ ರಾಜ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ವಿಕ್ರಂ ಹಾಗೈ ಐಶ್ವರ್ಯಾ ನಡುವಿನ ಟ್ರಾಜಿಕ್ ಲವ್​ ಸ್ಟೋರಿ ಹೇಳುತ್ತದೆ.

    MORE
    GALLERIES

  • 79

    PS2 Collection: ಎರಡೇ ದಿನದಲ್ಲಿ 100 ಕೋಟಿ ಬಾಚಿದ ಪೊನ್ನಿಯಿನ್ ಸೆಲ್ವನ್2

    ಈ ಸಿನಿಮಾದಲ್ಲಿ ನಟಿ ಐಶ್ವರ್ಯಾ ರೈ ಅವರು ನಂದಿನಿ ಪಾತ್ರವನ್ನು ಮಾಡಿದ್ದು ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನಂದಿನಿ ಅವರು ವಿಕ್ರಂ ಅವರ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 89

    PS2 Collection: ಎರಡೇ ದಿನದಲ್ಲಿ 100 ಕೋಟಿ ಬಾಚಿದ ಪೊನ್ನಿಯಿನ್ ಸೆಲ್ವನ್2

    ನಂದಿನಿ ಈ ಸಿನಿಮಾದ ಪ್ರಮುಖ ವಿಲನ್. ರಾಣಿ ನಂದಿನಿ ಪಾಂಡಿಯ ದೊರೆ ವೀರಪಾಂಡಿಯನ್ ಸಾವಿಗೆ ಪ್ರತೀಕಾರ ತೆಗೆಯಲು ಬಯಸುವುದಲ್ಲದೆ ಚೋಳ ಸಾಮ್ರಾಜ್ಯ ವಶಪಡಿಸಲು ಪ್ರಯತ್ನಿಸುತ್ತಾಳೆ. ಆದರೆ ನಂತರ ಪೆರಿಯ ಪಳುವೆಟ್ಟರಾಯರ್(ಶರತ್ ಕುಮಾರ್) ನಂದಿನಿ ವೀರಪಾಂಡಿಯನ್ ಮಗಳೆಂಬುದನ್ನು ರಿವೀಲ್ ಮಾಡುತ್ತಾರೆ. ಮಧುರಾಂತಕನ್(ರೆಹಮಾನ್) ಆಕೆಯ ಅವಳಿ ಸಹೋದರ ಎನ್ನುವುದನ್ನು ತಿಳಿಸುತ್ತಾರೆ.

    MORE
    GALLERIES

  • 99

    PS2 Collection: ಎರಡೇ ದಿನದಲ್ಲಿ 100 ಕೋಟಿ ಬಾಚಿದ ಪೊನ್ನಿಯಿನ್ ಸೆಲ್ವನ್2

    ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಪೊನ್ನಿಯಿನ್ ಸೆಲ್ವನ್ 1 ಸಿನಿಮಾದ ಕ್ಲೈಮ್ಯಾಕ್ಸ್​ನಿಂದ ಶುರುವಾಗುತ್ತದೆ. ಊಮೈ ರಾಣಿ ಅಥವಾ ಮಂದಾಕಿನಿ ಜಯಂ ರವಿಯನ್ನು ರಕ್ಷಿಸುತ್ತಾಳೆ. ಸಿನಿಮಾದಲ್ಲಿ ನಂದಿನಿ ಹಾಗೂ ಕುಂದವೈ ಎರಡೂ ಪಾತ್ರವೂ ಮುಖ್ಯವಾಗಿರುತ್ತದೆ.

    MORE
    GALLERIES