Ponniyin Selvan: ಟಿವಿಯಲ್ಲಿ ಬರ್ತಿದೆ ಮಣಿರತ್ನಂ ಸಿನಿಮಾ ಪೊನ್ನಿಯಿನ್ ಸೆಲ್ವನ್! ಇಲ್ಲಿದೆ ಡೀಟೆಲ್ಸ್
Ponniyin Selvan: ಜನಪ್ರಿಯ ನಿರ್ದೇಶಕ ಮಣಿರತ್ನಂ ಅವರ ಪ್ರತಿಷ್ಠಿತ ಸಿನಿಮಾ ಪೊನ್ನಿಯನ್ ಸೆಲ್ವನ್ 1 ಕಳೆದ ವರ್ಷ ಸೆಪ್ಟೆಂಬರ್ 30 ರಂದು ಬಿಡುಗಡೆಯಾಯಿತು. ಉತ್ತಮ ಯಶಸ್ಸನ್ನು ಪಡೆಯಿತು. ಇದು OTTಯಲ್ಲಿ ಸಹ ಲಭ್ಯವಿದೆ. ಆದರೆ ಈ ಸಿನಿಮಾ ಈಗ ಟಿವಿಯಲ್ಲಿ ಬರಲಿದೆ.
ಮಣಿರತ್ನಂ ನಿರ್ದೇಶನದ ಇತ್ತೀಚಿನ ಚಿತ್ರ ಪೊನ್ನಿಯಿನ್ ಸೆಲ್ವನ್ 1 ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ತೆಲುಗಿನಲ್ಲಿ ಸಿನಿಮಾ ಅಷ್ಟಾಗಿ ಪ್ರಭಾವ ಬೀರಲಿಲ್ಲ. ಕನ್ನಡದಲ್ಲಿಯೂ ಕಾಂತಾರ ಸಿನಿಮಾ ಅದೇ ದಿನ ರಿಲೀಸ್ ಆದ ಕಾರಣ ಅಷ್ಟೊಂದು ದಿನ ಥಿಯೇಟರ್ನಲ್ಲಿ ಉಳಿಯಲಿಲ್ಲ. ಆದರೆ ತಮಿಳಿನಲ್ಲಿ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ.
2/ 9
ಪೊನ್ನಿಯಿನ್ ಸೆಲ್ವನ್ 1 : 487.50 ಕೋಟಿ ಕಲೆಕ್ಷನ್. ವಿಕ್ರಮ್, ಜಯಂ ರವಿ, ಕಾರ್ತಿ ನಟಿಸಿದ್ದಾರೆ. ಮಣಿರತ್ನಂ ನಿರ್ದೇಶಿಸಿದ್ದಾರೆ. ಚಿತ್ರವು ಈಗ ಜನಪ್ರಿಯ OTTಯಲ್ಲಿ ಸ್ಟ್ರೀಮ್ ಆಗುತ್ತಿದೆ. ಸಿನಿಮಾವನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು.
3/ 9
ಚಿತ್ರದಲ್ಲಿ ವಿಕ್ರಮ್, ಕಾರ್ತಿ, ಜಯಂ ರವಿ, ಐಶ್ವರ್ಯ ರೈ ಮತ್ತು ತ್ರಿಶಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಯಿತು.
4/ 9
ಈಗ ಚಿತ್ರವನ್ನು ಟಿವಿಯಲ್ಲಿ ರಿಲೀಸ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ಪೊನ್ನಿಯಿನ್ ಸೆಲ್ವನ್ 1 ಅನ್ನು ಜನವರಿ 8 ರಂದು ವರ್ಲ್ಡ್ ಟಿವಿ ಪ್ರೀಮಿಯರ್ ಆಗಿ ಸನ್ ಟಿವಿಯಲ್ಲಿ ಪ್ರಸಾರ ಮಾಡಲಾಗುವುದು ಎಂದು ಚಾನೆಲ್ ಅಧಿಕೃತವಾಗಿ ಘೋಷಿಸಿದೆ.
5/ 9
ಟಿವಿಯಲ್ಲಿ ಈ ಅದ್ಧೂರಿ ಚಿತ್ರವನ್ನು ವೀಕ್ಷಿಸಲು ತಮಿಳು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಚೋಳರ ಕಥೆಯಿರುವ ಈ ಸಿನಿಮಾವನ್ನು ಮಣಿರತ್ನಂ ಪೀರಿಯಡ್ ಮೂವಿ ಎಂದು ತಿರುವಿ ಹಾಕಿರುವ ರೀತಿಗೆ ಈ ಸಿನಿಮಾ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
6/ 9
ಈ ಸಿನಿಮಾದ ಸೀಕ್ವೆಲ್ ಬಗ್ಗೆ ಸಖತ್ ಅಪ್ ಡೇಟ್ ಅನ್ನು ಚಿತ್ರತಂಡ ಪ್ರಕಟಿಸಿದೆ. ಪೊನ್ನಿಯಿನ್ ಸೆಲ್ವನ್-2 ಏಪ್ರಿಲ್ 28, 2023 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಈ ಹಿಂದೆ ಬಾಹುಬಲಿ ಸಿನಿಮಾ ಕೂಡ ಏಪ್ರಿಲ್ 28 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಪುಡಿ ಮಾಡಿತ್ತು.
7/ 9
ಇದೀಗ ಮಣಿರತ್ನಂ ಕೂಡ ಅದೇ ದಿನಾಂಕವನ್ನು ಫಿಕ್ಸ್ ಮಾಡಿರುವುದರಿಂದ ಪಿಎಸ್-2 ಚಿತ್ರವೂ ಅದೇ ರೀತಿಯ ಯಶಸ್ಸು ಪಡೆಯುವುದು ಖಚಿತ ಎಂಬುದು ಹಲವರ ಅಭಿಪ್ರಾಯ. ಪೊನ್ನಿಯಿನ್ ಸೆಲ್ವನ್ ಭಾಗ ಒಂದನ್ನು ಸೆಪ್ಟೆಂಬರ್ 30 ರಂದು ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆ ಮಾಡಲಾಗಿದೆ.
8/ 9
ಪೊನ್ನಿಯಿನ್ ಸೆಲ್ವನ್ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಮಣಿರತ್ನಂ ನಿರ್ದೇಶನದ ಈ ಐತಿಹಾಸಿಕ ಚಿತ್ರ ಎರಡು ವಾರಗಳಲ್ಲಿ ವಿಶ್ವದಾದ್ಯಂತ 460 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
9/ 9
ಕಾಲಿವುಡ್ ನಲ್ಲಿ ಇನ್ನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಪೊನ್ನಿಯನ್ ಸೆಲ್ವನ್ ಈ ಸಾಧನೆ ಮಾಡಿದ ಮೊದಲ ತಮಿಳು ಚಿತ್ರ ಎಂಬ ದಾಖಲೆ ನಿರ್ಮಿಸಿದೆ.