PM Narendra Modi: ಪ್ರಧಾನಿ ಮೋದಿ ಜೊತೆ ಸ್ಯಾಂಡಲ್ವುಡ್ ಮಂದಿ; ಇಲ್ಲಿದೆ ಫೋಟೋಸ್
ಪ್ರಧಾನಿ ನರೇಂದ್ರ ಮೋದಿ ಸ್ಯಾಂಡಲ್ವುಡ್ ಮಂದಿ ಜೊತೆ ಸಂವಾದ ನಡೆಸಿ ಕನ್ನಡ ಸಿನಿಮಾಗಳ ಬಗ್ಗೆ ಮಾತಾಡಿದ್ದಾರೆ. ಕಾಂತಾರ ಸಿನಿಮಾ ಗೆಲುವಿನ ಬಗ್ಗೆ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.
1/ 8
ಪ್ರಧಾನಿ ನರೇಂದ್ರ ಮೋದಿ ಜೊತೆ ಡಿನ್ನರ್ ಪಾರ್ಟಿಗೆ ಸ್ಯಾಂಡಲ್ವುಡ್ನ ಕೆಲವು ಮಂದಿಗೆ ಆಹ್ವಾನ ನೀಡಿದ್ರು. ರಾಜಭವನದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.
2/ 8
ರಿಷಬ್ ಶೆಟ್ಟಿ ಅವರನ್ನು ಪ್ರಧಾನಿ ಮೋದಿ ಅವರು ಭೇಟಿ ಮಾಡಿದ್ದಾರೆ. ಕಾಂತಾರ ಚಿತ್ರದ ಗೆಲುವಿನ ಬಗ್ಗೆ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.
3/ 8
ಅಶ್ವಿನಿ ಪುನೀತ್ ರಾಜ್ಕುಮಾರ್ ನೋಡುತ್ತಿದ್ದಂತೆ ಮೋದಿ ಅವರನ್ನು ಗುರುತಿಸಿ ಮಾತಾಡಿಸಿದ್ದಾರೆ. ಪುನೀತ್ ಅಗಲಿಕೆಗೆ ಮೋದಿ ಸಂತಾಪ ಸೂಚಿಸಿದ್ದಾರೆ.
4/ 8
ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಅವರನ್ನು ಮೋದಿ ಮಾತಾಡಿಸಿ ಕನ್ನಡ ಸಿನಿಮಾ ರಂಗವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಿ ಎಂದು ಹೇಳಿದ್ದಾರೆ.
5/ 8
ಕೆಜಿಎಫ್ ಹಾಗೂ ಕಾಂತಾರ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ ವಿಜಯ್ ಕಿರಗಂದೂರ್ ಜೊತೆ ಕೂಡ ಮೋದಿ ಸಂವಾದದಲ್ಲಿ ಮಾತಾಡಿ ಕೆಲ ಸಲಹೆ ನೀಡಿದ್ದಾರೆ.
6/ 8
ಸೋಶಿಯಲ್ ಮೀಡಿಯಾ ಸ್ಟಾರ್, ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ ಜೈನ್ ಕೂಡ ಮೋದಿ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
7/ 8
ಸ್ಯಾಂಡಲ್ವುಡ್ ಮಂದಿಯ ಜೊತೆಗೆ ವಿವಿಧ ಕ್ಷೇತ್ರದ ಗಣ್ಯರ ಜೊತೆ ಕೂಡ ಮೋದಿ ಸಂವಾದದಲ್ಲಿ ಮಾತುಕತೆ ನಡೆಸಿದ್ರು.
8/ 8
ಏರೋ ಇಂಡಿಯಾ ಏರ್ ಶೋ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದು, ಏರ್ ಶೋಗೆ ಚಾಲನೆ ನೀಡಿದ್ದಾರೆ.
First published: