ಬಾಲಿವುಡ್ ಹಿರಿಯ ನಟ ಪಿಯೂಷ್ ಮಿಶ್ರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಆತ್ಮಚರಿತ್ರೆಯ ಬಗ್ಗೆ ಮಾತನಾಡಿದ್ದಾರೆ. ಪಿಯೂಷ್ ಮಿಶ್ರಾ ಅವರು ತಮ್ಮ ಆತ್ಮಚರಿತ್ರೆ 'ತುಮ್ಹಾರಿ ಔಕತ್ ಕ್ಯಾ ಹೈ..ಪಿಯೂಷ್ ಮಿಶ್ರಾ'ದಲ್ಲಿ ಹಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ವೃತ್ತಿ ಹಾಗೂ ಖಾಸಗಿ ಜೀವನದಲ್ಲಿ ಹಲವು ವಿಷಯಗಳನ್ನು ಮುಕ್ತವಾಗಿ ಚರ್ಚಿಸಿದ್ದಾರೆ. ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿರುವ ಅವರು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಪಿಯೂಷ್ ಮಿಶ್ರಾ ಅವರು 7ನೇ ತರಗತಿಯಲ್ಲಿದ್ದಾಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು ಎಂದು ತಿಳಿಸಿದ್ದಾರೆ. ಆಘಾತಕಾರಿ ವಿಷಯವೆಂದರೆ ಸಂಬಂಧಿ ಮಹಿಳೆಯೊಬ್ಬರೇ ನಟನ ಜೊತೆ ಈ ರೀತಿಯ ಕೃತ್ಯ ಎಸಗಿದ್ದಾರೆ. ಈ ಘಟನೆಯಿಂದ ಆಘಾತವಾಗಿದೆ ಎಂದರು. ಈ ಘಟನೆಯಿಂದ ಹೊರಬರಲು ಹಲವು ವರ್ಷಗಳೇ ಬೇಕಾಯಿತು ಎಂದು ಬಹಿರಂಗಪಡಿಸಿದ್ದಾರೆ. 50 ವರ್ಷಗಳ ನಂತರವೂ ಆ ಘಟನೆಯನ್ನು ನೆನೆದು ವಿಚಲಿತನಾಗಿದ್ದೇನೆ ಎಂದು ಪಿಯೂಷ್ ಹೇಳಿದ್ದಾರೆ. ಅವರು ದಿಲ್ ಸೆ, ರಾಕ್‌ಸ್ಟಾರ್, ಆಜಾ ನಾಚ್ಲೆ, ಪಿಂಕ್, ತಶನ್, ತಮಾಶಾ, ಗ್ಯಾಂಗ್ಸ್ ಆಫ್ ವಾಸೇಪುರ್ ಮುಂತಾದ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.