ಟಾಲಿವುಡ್ ನಟ ಬಾಲಯ್ಯ ಅವರು ಸಿನಿಮಾದಲ್ಲಿ ಎಷ್ಟು ಉತ್ಸಾಹಿಯೋ ಅಷ್ಟೇ ಜೀವನೋತ್ಸಾವನ್ನು ಹೊಂದಿರುವ ವ್ಯಕ್ತಿ. ಜೀವನವನ್ನು ಜೀವಿಸುವ ಕಲೆ ಅವರಿಗೆ ಗೊತ್ತು.
2/ 10
ನಂದಮೂರಿ ಬಾಲಕೃಷ್ಣ ಅವರು ಮಲಯಾಳಂ ನಟಿ ಹನಿ ರೋಸ್ ಅವರೊಂದಿಗೆ ಡ್ರಿಂಕ್ಸ್ ಮಾಡುತ್ತಿರುವ ಫೋಟೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
3/ 10
ಪಾರ್ಟಿಯ ನಂತರದ ಕಾರ್ಯಕ್ರಮವೊಂದರಲ್ಲಿ ನಟ 'ವೀರ ಸಿಂಹ ರೆಡ್ಡಿ' ಯಶಸ್ಸನ್ನು ಸಂಭ್ರಮಿಸಿದ್ದಾರೆ ಎಂದು ವರದಿಯಾಗಿದೆ. ಈ ಜೋಡಿಯು ಟೋಸ್ಟ್ ಮಾಡುವಾಗ ಸ್ಟೈಲಾಗಿ ಶಾಂಪೇನ್ ಕುಡಿಯುತ್ತಿರುವುದು ಕಂಡುಬಂದಿದೆ.
4/ 10
ಇತ್ತೀಚೆಗೆ ಬಿಡುಗಡೆಯಾದ ಚಿತ್ರದಲ್ಲಿ ಬಾಲಯ್ಯ ಅವರ ಪತ್ನಿ ಮೀನಾಕ್ಷಿ ಪಾತ್ರದಲ್ಲಿ ಹನಿ ರೋಸ್ ನಟಿಸಿದ್ದಾರೆ. ಇವರು ಮಲಯಾಳಂ ನಟಿಯಾಗಿದ್ದು ಈ ಸಿನಿಮಾ ಅವರಿಗೆ ದೊಡ್ಡ ಬ್ರೇಕ್.
5/ 10
ಹೈದರಾಬಾದ್ನಲ್ಲಿ ನಡೆದ ಸಕ್ಸಸ್ ಪಾರ್ಟಿ ಫೋಟೋಗಳಲ್ಲಿ ನೇರಳೆ ಬಣ್ಣದ ಹೊಳೆಯುವ ಗೌನ್ ಮತ್ತು ಮನಮೋಹಕ ಮೇಕ್ಅಪ್ನಲ್ಲಿ ಹನಿ ರೋಸ್ ಕಂಗೊಳಿಸಿದ್ದಾರೆ.
6/ 10
ಈ ಕಾರ್ಯಕ್ರಮದ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಕಾರ್ಯಕ್ರಮದಲ್ಲಿ ನಿರ್ದೇಶಕ ಗೋಪಿಚಂದ್ ಮಲಿನೇನಿ, ದುನಿಯಾ ವಿಜಯ್, ವರಲಕ್ಷ್ಮಿ ಶರತ್ಕುಮಾರ್ ಉಪಸ್ಥಿತರಿದ್ದರು. ವಿಶ್ವಕ್ ಸೇನ್ ಮತ್ತು ಸಿದ್ದು ಜೊನ್ನಲಗಡ್ಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
7/ 10
ಸಕ್ಸಸ್ ಪಾರ್ಟಿಯ ಫೋಟೋಗಳನ್ನು ವಿಶ್ವಕ್ ಅವರು ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಬಾಲಯ್ಯ ಅಪ್ಪಟ ಚಿನ್ನ. ಇದು ನನ್ನ ಹೆಮ್ಮೆಯ ಸಾಧನೆಯಾಗಿದೆ. ಜೈಬಾಲಯ್ಯ ಎಂದು ವಿಶ್ವಕ್ ಅವರು ನಟನೊಂದಿಗಿನ ಕೆಲವು ಫೋಟೋಸ್ ಶೇರ್ ಮಾಡಿದ್ದಾರೆ.
8/ 10
ನಟಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು ಅವರ ಮೇಕಪ್ ಹಾಗೂ ಸ್ಟೈಲಿಂಗ್ ನಿಜಕ್ಕೂ ಅದ್ಭುತವಾಗಿತ್ತು. ಹನಿರೋಸ್ ಧರಿಸಿದ್ದ ಇಯರಿಂಗ್ಸ್ ಹೈಲೈಟ್ ಆಗಿತ್ತು.
9/ 10
ಕಾರ್ಯಕ್ರಮದಲ್ಲಿ ಬಾಲಯ್ಯ ಜೊತೆ ಮಾತನಾಡುತ್ತಿರುವ ನಟಿ ಹನಿರೋಸ್. ಅವರ ಇಯರಿಂಗ್ಸ್ ಸ್ಟೈಲ್ ನೀವಿಲ್ಲಿ ಸರಿಯಾಗಿ ಕಾಣಬಹುದು.
10/ 10
ಶಾಂಪೇನ್ ಎಂಜಾಯ್ ಮಾಡುತ್ತಿರುವ ವೀರಸಿಂಹ ರೆಡ್ಡಿ ಜೋಡಿ ಫೋಟೋ ಎಲ್ಲೆಡೆ ವೈರಲ್ ಆಗಿದ್ದು ಸಿನಿಮಾ ಸಕ್ಸಸ್ ಅನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.