ಈ ಮಾಲೆ ಹಾಕುವವರೆಲ್ಲರೂ ಯಾವ ಕೆಟ್ಟ ಚಟಗಳಿಗೆ ಹೋಗಬಾರದು. ಹಾಗಿದ್ದರೆ ಮಾಲೆ ಹಾಕುವ ಎಲ್ಲಾ ಅಭಿಮಾನಿಗಳು 5 ದಿನ 11 ದಿನ 1 ದಿನ ಮಾಲೆ ಹಾಕಬಹುದು. ಮಾಲೆ ಹಾಕುವ ಎಲ್ಲ ಅಪ್ಪು ಸ್ವಾಮಿಗಳಿಗೆ ಒಂದು ವಿನಂತಿ.. ನಾವು ಇಲ್ಲಿಂದ ಪುಣ್ಯಭೂಮಿಗೆ ಹೋಗುವಾಗ ನಮ್ಮ ಕೈಲಾದ ದಿನಸಿಗಳನ್ನು ಇರುಮುಡಿಯಾಗಿ ತೆಗೆದುಕೊಂಡು ಹೋಗತಕ್ಕದ್ದು. ಅದರಲ್ಲಿ ಅಕ್ಕಿ ಬೇಳೆ, ಎಣ್ಣೆ ಮುಂತಾದ ದಿನಸಿ ತೆಗೆದುಕೊಂಡು ಹೋಗತಕ್ಕದ್ದು. ತಮ್ಮ ಕೈಲಾದಷ್ಟು ಒಯ್ಯಬಹುದು. ಇದು ಅಪ್ಪು ದೇವರ ಮಾಲೆಯ ವಿದಾಯ ಎಂದು ಬರೆಯಲಾಗಿದೆ.