ಕರಿಷ್ಮಾ ಕಪೂರ್ ಬಾಲಿವುಡ್ಗೆ ಹೆಚ್ಚು ಹಿಟ್ ಚಿತ್ರಗಳನ್ನು ನೀಡಿದ್ದಾರೆ. 1991 ರಲ್ಲಿ 'ಪ್ರೇಮ್ ಖೈದಿ' ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಕರಿಷ್ಮಾ, ರಾಜಾ ಹಿಂದೂಸ್ತಾನಿ, 'ದಿಲ್ ತೋ ಪಾಗಲ್ ಹೈ' ಚಿತ್ರಗಳ ಮೂಲಕ ಭರ್ಜರಿ ಸದ್ದು ಮಾಡಿದ್ರು. ಇದೀಗ ಕರಿಷ್ಮಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳೋ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗ್ತಿದ್ದಾರೆ. ಬಿಳಿ ಸಲ್ವಾರ್ ಕುರ್ತಾದಲ್ಲಿ ಕರಿಷ್ಮಾ ಸಖತ್ ಕ್ಯೂಟ್ ಆಗಿ ಕಾಣ್ತಿದ್ದಾರೆ.