Kareena Kapoor: ಮಗನ ಬರ್ತಡೇಗೆ ಕರೀನಾ ಕಪೂರ್ ಸ್ಪೆಷಲ್ ವಿಶ್; ತೈಮೂರ್ಗೆ ಸರ್ಪ್ರೈಸ್ ಗಿಫ್ಟ್!
Kareena Kapoor: ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರ ಹಿರಿಯ ಮಗ ತೈಮೂರ್ ಅಲಿ ಖಾನ್ಗೆ 6 ವರ್ಷ ತುಂಬಿದೆ. ತೈಮೂರ್ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಇನ್ನು ತಾಯಿ ಕರೀನಾ ಕಪೂರ್ ಕೂಡ ಮಗನಿಗೆ ಸ್ಪೆಷಲ್ ವಿಶ್ ಮಾಡಿದ್ದಾರೆ.
ಕರೀನಾ ಕಪೂರ್ ಮಗ ತೈಮೂರ್ ಹುಟ್ಟುಹಬ್ಬದಂದು ಫೋಟೋ ಸಮೇತ ಪೋಸ್ಟ್ ಹಂಚಿಕೊಂಡಿದ್ದಾರೆ. ಪಟೌಡಿ ಕುಟುಂಬದ ಉತ್ತರಾಧಿಕಾರಿ ಎಂದು ಮಗನಿಗೆ ಬರೆದಿದ್ದಾರೆ.
2/ 8
ಕರೀನಾ ಕಪೂರ್ ಮಗ ತೈಮೂರ್ ಅಲಿ ಖಾನ್ ಕೂಡ ಜನಪ್ರಿಯತೆಗೇನು ಕಡಿಮೆ ಇಲ್ಲ. ತಾಯಿ ಕರೀನಾ ತಮ್ಮ ಮಗನ ಕೆಲವು ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಮಗನ ಭವಿಷ್ಯದ ಬಗ್ಗೆ ಕೂಡ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
3/ 8
ಈಗಾಗಲೇ ತೈಮೂರ್ ಅಲಿ ಖಾನ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದು, ಕರೀನಾ-ಸೈಫ್ ತಮ್ಮ ಮಕ್ಕಳೊಂದಿಗೆ ರಜೆ ದಿನಗಳನ್ನು ಆನಂದಿಸುತ್ತಿದ್ದಾರೆ. ಮುಂಬೈನಲ್ಲಿ ಅಜ್ಜಿ ಶರ್ಮಿಳಾ ಟ್ಯಾಗೋರ್ ಮತ್ತು ಸೋಹಾ ಅಲಿ ಖಾನ್ ಅವರ ಪುತ್ರಿ ಇನಾಯಾ ಅವರೊಂದಿಗೆ ಕೇಕ್ ಕತ್ತರಿಸಿದ್ದಾರೆ.
4/ 8
ಈಗ ತೈಮೂರ್ ಹುಟ್ಟುಹಬ್ಬದಂದು ಕರೀನಾ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ 3 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ತೈಮೂರ್ ಸಮುದ್ರತೀರದಲ್ಲಿ ಕುಳಿತು ಸೂರ್ಯಾಸ್ತವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ.
5/ 8
ಮತ್ತೊಂದು ಫೋಟೋದಲ್ಲಿ ನೈಟ್ ಸೂಟ್ ನಲ್ಲಿ ಫುಲ್ ಏಂಜಾಯ್ ಮೂಡ್ ನಲ್ಲಿದ್ದಾನೆ. ಕರೀನಾ ತಮ್ಮ ಮಗನಿಗಾಗಿ ಹೃದಯ ಸ್ಪರ್ಶಿ ಪೋಸ್ಟ್ ಮಾಡಿದ್ದಾರೆ. 'ಟಿಮ್ ಈ ಭೂಮಿ ಅಂತ್ಯವನ್ನು ನೋಡಬಹುದೇ? ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಮಗುವನ್ನು ಕನಸೆಲ್ಲಾ ನನಸಾಗಲಿ ಎಂದು ಬರೆದುಕೊಂಡಿದ್ದಾರೆ.
6/ 8
ಮತ್ತೊಂದು ಫೋಟೋದಲ್ಲಿ ತೈಮೂರ್ ಗಾಳಿಯಲ್ಲಿ ಗಿಟಾರ್ ನುಡಿಸುವಂತೆ ಪೋಸ್ ನೀಡಿದ್ದಾನೆ. ಈ ಫೋಟೋಗೆ ನಿನ್ನ ನಿಮ್ಮ ಸ್ವಂತ ಸಂಗೀತವನ್ನು ಮಾಡಿ, ಗಿಟಾರ್ ನುಡಿಸು, ಸ್ವಂತ ಬ್ರ್ಯಾಂಡ್ ಸೃಷ್ಟಿಸಬೇಕು, ಜನ್ಮದಿನದ ಶುಭಾಶಯಗಳು ಮಗ..ನನ್ನ ಟಿಮ್ ಟಿಮ್, ಜನ್ಮದಿನದ ಶುಭಾಶಯಗಳು ಟಿಮ್' ಎಂದಿದ್ದಾರೆ
7/ 8
ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ತಮ್ಮ ಮಗ ತೈಮೂರ್ ಅಲಿ ಖಾನ್ ಅವರ ಹುಟ್ಟುಹಬ್ಬವನ್ನು ಆಚರಿಸಿದ ನಂತರ ರಜೆ ಮಜಾ ಏಂಜಾಯ್ ಮಾಡ್ತಿದ್ದಾರೆ.
8/ 8
ಕರಿಷ್ಮಾ ಕಪೂರ್, ಸೋಹಾ ಅಲಿ ಖಾನ್, ಸಬಾ ಪಟೌಡಿ, ಸೋನಮ್ ಕಪೂರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಡಿಸೆಂಬರ್ 20 ರಂದು ತೈಮೂರ್ ಅಲಿ ಖಾನ್ ಅವರ 6 ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.