1979ರ ಜನವರಿ 1 ರಂದು ತಮಿಳು ಕುಟುಂಬದಲ್ಲಿ ಜನಿಸಿದ ವಿದ್ಯಾ ಬಾಲನ್ ಬಾಲಿವುಡ್ನ ಟಾಪ್ ನಟಿಯರಲ್ಲಿ ಒಬ್ಬರು. ಯಾರಾದರೂ ನಿಮ್ಮ ದೇಹದ ಗಾತ್ರ, ಆಕಾರವನ್ನು ಪ್ರಶ್ನಿಸಿದರೆ, ಯಾರಾದರೂ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಅನ್ನು ಟೀಕಿಸಿದರೆ ಅಥವಾ ಯಾರಾದರೂ ನಿಮ್ಮನ್ನು ದರಿದ್ರ ಎಂದು ಕರೆದರೂ, ನೀವು ನಿಮ್ಮ ಕೆಲಸವನ್ನು ಪರಿಪೂರ್ಣತೆಯಿಂದ ಮಾಡಿದರೆ ನೀವು ಯಶಸ್ವಿಯಾಗುತ್ತೀರಿ ಎಂದು ಹೇಳುತ್ತಾರೆ ನಟಿ. ಹೀರೋಯಿನ್ ಮೆಟೀರಿಯಲ್ ಅಲ್ಲ ಎನ್ನಲಾಗಿದ್ದ ವಿದ್ಯಾಗೆ ಭಾರತ ಸರ್ಕಾರ ರಾಷ್ಟ್ರ ಪ್ರಶಸ್ತಿ, ಪದ್ಮಶ್ರೀ ನೀಡಿ ಗೌರವಿಸಿದೆ.