ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ಚೀನಾ ಮೂಲದ 59 ಆ್ಯಪ್ಗಳನ್ನು ನಿಷೇಧಿಸಿದೆ. ಈ ನಡೆಯನ್ನು ಸ್ವಾಗತಿಸಿರುವ ತೃಣಮೂಲ ಕಾಂಗ್ರೆಸ್ ಸಂಸದೆ ನಟಿ ನುಸ್ರತ್ ಜಹಾನ್, ಇದೊಂದು ಹಠಾತ್ ನಿರ್ಧಾರ. ಇದರಿಂದ ಅನೇಕರು ಪರಿತಪಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2/ 50
ಈ ಹಿಂದೆ ಸರ್ಕಾರ ನೋಟ್ಬ್ಯಾನ್ ಮಾಡಿದ ಹೇಗೆ ಜನರು ಪರಿತಪಿಸಿದ್ದರೋ, ಅದೇ ಪರಿಸ್ಥಿತಿ ಟಿಕ್ಟಾಕ್ ಬ್ಯಾನ್ನಿಂದ ಕೆಲವರಿಗೆ ಉಂಟಾಗಿದೆ. ಏಕೆಂದರೆ ಒಂದಷ್ಟು ಮಂದಿ ಈ ಆ್ಯಪ್ ಮೂಲಕ ಸಂಪಾದನೆ ಕಂಡುಕೊಂಡಿದ್ದರು.
3/ 50
ಇದೀಗ ಸರ್ಕಾರ ದಿಢೀರನೆ ಕೈಗೊಂಡಿರುವ ನಿರ್ಧಾರದಿಂದ ಅನೇಕರ ಸಂಪಾದನೆ ಕೈ ತಪ್ಪಿದೆ. ಟಿಕ್ಟಾಕ್ ಕೇವಲ ಮನರಂಜನಾ ಉದ್ದೇಶದಿಂದ ಅಭಿವೃದ್ಧಿಪಡಿಸಲಾದ ಆ್ಯಪ್.
4/ 50
ಈ ಆ್ಯಪ್ ಮೂಲಕ ಒಂದಷ್ಟು ಸಂಪಾದನೆ ಮಾಡುತ್ತಿದ್ದವರು, ಇದೀಗ ಇದರ ನಿಷೇಧದಿಂದ ನಿರೂದ್ಯೋಗಿಗಳಾಗುತ್ತಾರಾ? ಎಂದು ಪ್ರಶ್ನಿಸಿದರು. ಅಲ್ಲದೆ ಈ ನೋಟ್ ಬ್ಯಾನ್ ಆದಾಗ ಅನುಭವಿಸಿದ್ದನ್ನೇ ಮತ್ತೆ ಅನುಭವಿಸುತ್ತಾರೆ ಹೊರತು ಹೆಚ್ಚೇನೂ ಆಗದು ಎಂದು ನಟಿ ತಿಳಿಸಿದರು.
5/ 50
ಆದರೆ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಇದು ಉತ್ತಮ ಕ್ರಮ. ಆದರೆ ಕೇವಲ ಆ್ಯಪ್ ಮೇಲಷ್ಟೇ ಬ್ಯಾನ್ ಅಲ್ಲ. ಚೀನಾ ಕಂಪನಿಗಳು ಹೂಡಿಕೆ ಮಾಡಿದ ಕಂಪನಿಗಳು, ಅದರ ಶೇರುಗಳ ಬಗ್ಗೆಯೂ ಸರ್ಕಾರ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರಳನ್ನು ತೆಗೆದುಕೊಳ್ಳಲಿ ಎಂದು ನುಸ್ರತ್ ತಿಳಿಸಿದರು.
6/ 50
ಕೇವಲ ಆ್ಯಪ್ ಬ್ಯಾನ್ನಿಂದ ಒಂದಷ್ಟು ಮಂದಿ ಆದಾಯಗಳಿಸುತ್ತಿದ್ದರು. ಇದೀಗ ಅವರ ಪ್ರಶ್ನೆಗಳಿಗೆ ಉತ್ತರಿಸುವವರ್ಯಾರು? ಎಂದು ಸಂಸದೆ ನುಸ್ರತ್ ಜಹಾನ್ ಪ್ರಶ್ನಿಸಿದರು.
7/ 50
ಖ್ಯಾತ ಬಂಗಾಳಿ ಚಿತ್ರ ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ನುಸ್ರತ್ ಜಹಾನ್ ಅವರು ಈ ಹಿಂದೆ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡ ಫೋಟೋ ಬಾರೀ ವೈರಲ್ ಆಗಿತ್ತು.
8/ 50
ಈ ವೇಳೆ ಕೇಳಿ ಬಂದ ಆಕ್ಷೇಪಗಳಿಗೆ ಬಂಗಾಳದಲ್ಲಿ ಪ್ರತಿಯೊಬ್ಬರೂ ಕೂಡ ಒಟ್ಟಿಗೆ ಎಲ್ಲಾ ಉತ್ಸವಗಳನ್ನ ಆಚರಿಸುತ್ತಾರೆ. ದುರ್ಗಾ ಪೂಜೆಯಲ್ಲಿ ತೊಡಗಿಸಿಕೊಂಡಿದ್ದು ನನಗೆ ಖುಷಿ ತಂದಿದೆ ಎಂದು ನುಸ್ರತ್ ಜಹಾನ್ ಹೇಳಿದ್ದರು.
9/ 50
ತನ್ನ ಸುತ್ತ ವಿವಾದ ಮುತ್ತಿಕೊಂಡಿರುವುದಕ್ಕೆ ಆಕೆ ತಲೆ ಕೆಡಿಸಿಕೊಂಡಂತಿಲ್ಲ. ಬಂಗಾಳದಲ್ಲಿ ಪ್ರತಿಯೊಬ್ಬರೂ ಕೂಡ ಒಟ್ಟಿಗೆ ಎಲ್ಲಾ ಉತ್ಸವಗಳನ್ನ ಆಚರಿಸುತ್ತಾರೆ. ದುರ್ಗಾ ಪೂಜೆಯಲ್ಲಿ ತೊಡಗಿಸಿಕೊಂಡಿದ್ದು ನನಗೆ ಖುಷಿ ತಂದಿದೆ ಎಂದು ನುಸ್ರತ್ ಜಹಾನ್ ಹೇಳುತ್ತಾರೆ.