ಪಾಯಲ್ ರಜಪೂತ್ ಅಭಿನಯದ ಹೊಸ ಸಿನಿಮಾ 'ಮಂಗಳವಾರಂ' ಬರಲಿದೆ. ಅಜಯ್ ಭೂಪತಿ ನಿರ್ದೇಶನದ ಈ ಸಿನಿಮಾ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಇದನ್ನು ಮುದ್ರಾ ಮೀಡಿಯಾ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಸ್ವಾತಿ ಗುಣಪತಿ ಮತ್ತು ಸುರೇಶ್ ವರ್ಮಾ ಮತ್ತು 'ಎ' ಕ್ರಿಯೇಟಿವ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಅಜಯ್ ಭೂಪತಿ ಜಂಟಿಯಾಗಿ ನಿರ್ಮಿಸಿದ್ದಾರೆ.
ಈ ಸಿನಿಮಾದಲ್ಲಿ ಪಾಯಲ್ ರಜಪೂತ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಹೇಳಿರುವ ನಿರ್ಮಾಪಕರು ಇತ್ತೀಚೆಗಷ್ಟೇ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ಪಾಯಲ್ ಶೈಲಜಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ನಟಿ ಪೋಸ್ಟರ್ನಲ್ಲಿ ಕ್ಯಾಮೆರಾಗೆ ಬೆತ್ತಲೆ ಬೆನ್ನು ತೋರಿಸಿ ಪೋಸ್ ಕೊಟ್ಟಿದ್ದಾರೆ. ನಟಿಯ ಕಣ್ಣಲ್ಲಿ ಕಂಬನಿ ತುಂಬಿರುವುದನ್ನು ಕಾಣಬಹುದು. ಈ ಪೋಸ್ಟರ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ.
ಇದುವರೆಗೂ ಭಾರತದಲ್ಲಿ ಯಾರೂ ಪ್ರಯತ್ನಿಸದ ಹೊಸ ಪ್ರಕಾರದ ಸಿನಿಮಾ ಇದಾಗಿದೆ. ಚಿತ್ರದಲ್ಲಿ 30 ಪಾತ್ರಗಳಿವೆ. ಕಥೆಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ಇರುತ್ತದೆ ಎನ್ನುತ್ತಾರೆ ಅಜಯ್ ಭೂಪತಿ. ‘ಆರ್ ಎಕ್ಸ್ 100’ ಚಿತ್ರದಲ್ಲಿ ಸಿಂಧು ಪಾತ್ರವನ್ನು ಪ್ರೇಕ್ಷಕರು ಹೇಗೆ ನೆನಪಿಸಿಕೊಳ್ಳುತ್ತಾರೋ, ಈಗ ‘ಮಂಗಳವಾರಂ’ ಚಿತ್ರದಲ್ಲಿ ಶೈಲಜಾ ಅವರ ಪಾತ್ರವೂ ನೆನಪಾಗುತ್ತದೆ ಎಂದರು.