ಪವನ್ ಕಲ್ಯಾಣ್ ಆಂಧ್ರದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ, ಟಾಲಿವುಡ್ ಟಾಪ್ ಹೀರೋ ಆಗಿ ಮಿಂಚುತ್ತಿದ್ದಾರೆ. 2009ರಲ್ಲಿ ಪವನ್ ಅಣ್ಣಾ ಪ್ರಜಾ ರಾಜ್ಯಂ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. 2014 ರಲ್ಲಿ ಅವರು ತಮ್ಮದೇ ಆದ ಜನಸೇನಾ ಪಕ್ಷವನ್ನು ಸ್ಥಾಪಿಸಿದರು. 2019ರ ಚುನಾವಣೆಯಲ್ಲಿ ಗಜುವಾಕ ಮತ್ತು ಭೀಮಾವರಂನಿಂದ ಸ್ಪರ್ಧಿಸಿ ಸೋತಿದ್ದರು. ಮತ್ತೆ ಮುಂಬರುವ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. (ಟ್ವಿಟರ್/ಫೋಟೋ)
ಪವನ್ ಕಲ್ಯಾಣ್ ಮೇಲೆ ಯಾವುದೇ ರಾಜಕೀಯ ಭ್ರಷ್ಟಾಚಾರದ ಆರೋಪ ಇಲ್ಲದಿರುವ ಹಿನ್ನೆಲೆ ವಿರೋಧಿಗಳು ಅವರ ವೈಯಕ್ತಿಕ ಬದುಕನ್ನೇ ಗುರಿಯಾಗಿಸಿಕೊಂಡಿದ್ದಾರೆ. ವಿಶೇಷವಾಗಿ ಪವನ್ ಮದುವೆಗಳ ಬಗ್ಗೆ ವಿರೋಧ ಪಕ್ಷಗಳು ಟೀಕಿಸಿವೆ. 3 ಮದುವೆಯಾಗಿದ್ದಕ್ಕೆ ಪವನ್ ಅವರನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಪವನ್ ಕಲ್ಯಾಣ್ ಅನ್ ಸ್ಟಾಪಬಲ್ ನಲ್ಲಿ ಸ್ಪಷ್ಟನೆ ನೀಡಲಿದ್ದಾರೆ. (ಟ್ವಿಟರ್/ಫೋಟೋ)
ಪವನ್ ಕಲ್ಯಾಣ್, ಮೆಗಾಸ್ಟಾರ್ ಚಿರಂಜೀವಿ ಅವರ ಕಿರಿಯ ಸಹೋದರನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಅಕ ಬೋಯ ಅಕ ಗಿಯಾಲ ಚಿತ್ರದ ಮೂಲಕ ನಾಯಕನಾಗಿ ಟಾಲಿವುಡ್ ಪ್ರವೇಶಿದ್ರು. ಬಳಿಕ ಹಂತ ಹಂತವಾಗಿ ಪವರ್ ಸ್ಟಾರ್ ಆಗಿ ಬೆಳೆದರು. ಸುಸ್ವಾಗತಂ, ತೊಲಿಪ್ರೇಮ, ತಮ್ಮುಡು, ಖುಷಿ, ಗಬ್ಬರ್ ಸಿಂಗ್, ಅತ್ತಾರಿಂಟಿಕಿ ದಾರೇದಿ, ವಕೀಲ್ ಸಾಬ್, ಭೀಮ್ಲಾ ನಾಯಕ್ ಸಿನಿಮಾಗಳ ಮೂಲಕ ತೆಲುಗಿನಲ್ಲಿ ಟಾಪ್ ಹೀರೋ ಆಗಿದ್ದಾರೆ. (ಟ್ವಿಟರ್/ಫೋಟೋ)
ಆ ವೇಳೆ ನಂದಿನಿ ಪವನ್ ಕಲ್ಯಾಣ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ 2007 ರಲ್ಲಿ ಪವನ್ ಕಲ್ಯಾಣ್ ನಂದಿನಿಯಿಂದ ವಿಚ್ಛೇದನ ಪಡೆದರು. ಅದರ ನಂತರ, ಬದ್ರಿ ಚಿತ್ರದಲ್ಲಿ ಪವನ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದ ರೇಣು ದೇಸಾಯಿ ಅವರೊಂದಿಗೆ ವಿವಾಹವಾದ್ರೂ ಅವರಿಬ್ಬರಿಗೂ ಮಕ್ಕಳಾದವು. ಅದಾದ ನಂತರ ರೇಣು ದೇಸಾಯಿ ಜೊತೆಗಿನ ಸಂಬಂಧ ಮುರಿದುಬಿದ್ದು ರಷ್ಯಾದ ನಟಿ ಅನ್ನಾ ಲೆಜಿನೋವಾ ಅವರನ್ನು ವಿವಾಹವಾದರು, ಅವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. (ಟ್ವಿಟರ್/ಫೋಟೋ)