Pawan Kalyan: ಹೈದರಾಬಾದಿನ ಮೊಟ್ರೋದಲ್ಲಿ ಪವನ್ ಕಲ್ಯಾಣ್: ಹೊಸ ಲುಕ್ನಲ್ಲಿ ಪವರ್ ಸ್ಟಾರ್..!
Pawan Kalyan: ಪವನ್ ಕಲ್ಯಾಣ್ ಒಂದರ ಹಿಂದೆ ಒಂದರಂತೆ ಸಾಲು ಸಾಲು ಸಿನಿಮಾಗಳನ್ನು ಸಹಿ ಮಾಡುತ್ತಾ ಪ್ರಕಟಿಸುತ್ತಿದ್ದಾರೆ. ಚುನಾವಣೆಗೆ ಇನ್ನೂ ಸಮಯವಿರುವ ಕಾರಣದಿಂದ ಈ ಗ್ಯಾಪ್ನಲ್ಲಿ ಆದಷ್ಟು ಸಿನಿಮಾಗಳನ್ನು ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್)
ಎರಡು ವರ್ಷಗಳ ಗ್ಯಾಪ್ ನಂತರ ಪವನ್ ಕಲ್ಯಾಣ್ ಈಗ ವಕೀಲ್ ಸಾಬ್ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಅಬ್ಬರಿಸೋಕೆ ಸಿದ್ಧರಾಗಿದ್ದಾರೆ. Photo : Twitter
2/ 8
ದಿಲ್ ರಾಜು, ಬೋನಿ ಕಪೂರ್ ನಿರ್ಮಿಸುತ್ತಿರುವ ಈ ವಕೀಲ್ ಸಾಬ್ ಹಿಂದಿಯಲ್ಲಿ ತೆರೆಮಡ ಪಿಂಕ್ ಸಿನಿಮಾದ ತೆಲುಗು ರಿಮೇಕ್ ಆಗಿದೆ. ಇದನ್ನು ವೇಣು ನಿರ್ದೇಶನ ಮಾಡುತ್ತಿದ್ದಾರೆ. Photo : Twitter
3/ 8
ವಕೀಲ್ ಸಾಬ್ ಸಿನಿಮಾದ ಚಿತ್ರೀಕರಣ ಸದ್ಯ ಹೈದರಾಬಾದಿನಲ್ಲಿ ನಡೆಯುತ್ತಿದೆ. ಇದರಲ್ಲಿ ಪವನ್ ಕಲ್ಯಾಣ್ ಬಾಗಿಯಾಗಿದ್ದಾರೆ. ಅದಕ್ಕಾಗಿ ಮೆಟ್ರೋದಲ್ಲೂ ಪ್ರಯಾಣಿಸಿದ್ದಾರೆ.
4/ 8
ಪವನ್ ಈ ಹಿಂದೆ ಲಾಕ್ಡೌನ್ನಲ್ಲಿ ವತ್ರ ಮಾಡುತ್ತಿದ್ದು, ಸ್ವಾಮೀಜಿಯಂತೆ ಗಡ್ಡಬಿಟ್ಟು ಕಾವಿ ತೊಟ್ಟಿದ್ದರು. ಈಗ ಫುಲ್ ಶೇವ್ ಮಾಡಿ, ಸಖತ್ ಟ್ರೆಂಡಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
5/ 8
ತಮನ್ ಸಂಗೀತ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಲಾಕ್ಡೌನ್ ಆರಂಭಕ್ಕೂ ಮೊದಲು ಕೊಂಚ ಮುಗಿದಿತ್ತು. Photo : Twitter
6/ 8
ಈಗ ಮತ್ತೆ ನಿಯಮಗಳನ್ನು ಪಾಲಿಸುತ್ತಾ ವಕೀಲ್ ಸಾಬ್ ಚಿತ್ರೀಕರಣ ಆರಂಭಗೊಂಡಿದೆ. ಇದನ್ನು ಹೊರತುಪಡಿಸಿ, ಪವನ್ ಮತ್ತೆರೆಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. Photo : Twitter